ಇಂದು ಪ್ರಿಮೀಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ
ಜಮಖಂಡಿ : 25: ನಾಡೋಜ ಜಗದೀಶ ಗುಡಗುಂಟಿ ಕ್ರಿಕೇಟ್ ಅಕಾಡಮಿ ಸಹಯೋಗದಲ್ಲಿ ನಡೆದಿರುವ ಜಮಖಂಡಿ ಪ್ರಿಮೀಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಪೆ,26 ರಂದು ಅಂತಿಮ ಪಂದ್ಯಾವಳಿಗಳಲ್ಲಿ ವಿಜಯಶಾಲಿಯಾದ ತಂಡಗಳಿಗೆ ಮಠಾಧೀಶರು, ರಾಜಕೀಯ ಗಣ್ಯಮಾನ್ಯರು, ಎಲ್ಲ ಸಮಾಜ ಮುಖಂಡರು ಹಾಗೂ ಎಲ್ಲ ಜನತೆಯ ಸಮ್ಮುಖದಲ್ಲಿ ಪ್ರಶಸ್ತಿ ವಿತರಣೆ ಹಾಗೂ ಈ ಕಾರ್ಯಕ್ರಮದ ಮುಕ್ತಾಯ ಸಮಾರಂಭ ಜರುಗಲಿದೆಂದು ಜಗದೀಶ ಗುಡಗುಂಟಿ ತಿಳಿಸಿದ್ದಾರೆ.
ಸಾಯಂಕಾಲ 5 ಗಂಟೆಗೆ ಸ.ರಿ.ಗ.ಮ.ಪ ಖ್ಯಾತಿಯ ಶ್ರೀರಾಮ ಕಾಸರ ಹಾಗೂ ಗಂಗಮ್ಮ ಕೊಪ್ಪಳ, ಎದೆ ತುಂಬಿ ಹಾಡುವೆನು ಖ್ಯಾತಿಯ ಗೀತಾ ದಾಂಡೇಲಿ, ಕನ್ನಡ ಕೋಗಿಲೆ ಖ್ಯಾತಿಯ ವನುಶ್ರೀ ಬೆಂಗಳೂರು, ಅರ್ಜುನ ಇಟಗಿ, ಮಿಮಿಕ್ರಿ - ಮಾರೇಶ ಕೊಪ್ಪಳ ಡಾನ್ಸ ಕರ್ನಾಟಕ ಡಾನ್ಸ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶ್ರೇಯಾ ಗದಗ ಹಾಗೂ ಪೂಜಾ ದಾವಣಗೆರೆ ಹಾಗೂ ತಂಡದವರಿಂದ ನೃತ್ಯ ಪ್ರದರ್ಶನ ಕ್ಷಿತಿ ಮ್ಯೂಜಿಕಲ್ ಇವೆಂಟ್ಸ ಕೊಪ್ಪಳ ಇವರಿಂದ ದೊಡ್ಡ ಪ್ರಮಾಣದಲ್ಲಿ ಸಂಗೀತ ಸಂಜೆ ಕಾರ್ಯಕ್ರಮ ಜರುಗಲಿದ್ದು ಕಾರಣ ಎಲ್ಲರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಪ್ರಾಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.