ಜಮಖಂಡಿ

ಗಣಿತ ವಿಷಯ ಸಮೂಹದ ಪೂರ್ವಭಾವಿ ಸಭೆ

ಗಣಿತ ವಿಷಯ ಸಮೂಹದ ಪೂರ್ವಭಾವಿ ಸಭೆ

ಲೋಕದರ್ಶನ ವರದಿ

ಜಮಖಂಡಿ  26: ಹೊಸ ಆಲೋಚನೆ, ಚಿಂತನೆಗಳು, ವಿಚಾರಗಳು ಮಾಡುತ್ತಿದ್ದರೆ ಮುಗ್ಧ ಮನಸ್ಸುಗಳಿಗೂ ಸಹಿತ ಗಣಿತ ಅರ್ಥೈಸಲು ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಬಸಣ್ಣವರ ಹೇಳಿದರು.

ನಗರದ ಬಸವೇಶ್ವರ ಶಿಕ್ಷಣ ಸಂಸ್ಥೆ ಕಡಪಟ್ಟಿಯಲ್ಲಿ ನಡೆದ ಜಮಖಂಡಿ ಮತ್ತು ರಬಕವಿ-ಬನಹಟ್ಟಿ ತಾಲೂಕಿನ ಗಣಿತ ವಿಷಯ ಸಮೂಹದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ವಿಷಯ ಸಮೂಹಗಳಿಗೆ ಎಲ್ಲ ಶಿಕ್ಷಕರು ಕಡ್ಡಾಯವಾಗಿ ಪಾಲ್ಗೊಂಡು ವಿಷಯದ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು, ಶಿಕ್ಷಕರು ಪಾಲ್ಗೊಳ್ಳದಿದ್ದರೆ ಮುಖ್ಯೋಪಾಧ್ಯಾಯರಿಗೆ ಮತ್ತು ಶಿಕ್ಷಕರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗುವುದು ಎಂದರು.

ಗಣಿತ ವಿಷಯ ಸಮೂಹದ ನೋಡಲ್ ಅಧಿಕಾರಿ ಭೂಷಣ ಪತ್ತಾರ ಮಾತನಾಡಿ, ವಿಷಯ ಸಮೂಹಗಳು ವರ್ಗ ಕೋಣೆಯಲ್ಲಿ ಶಿಕ್ಷಕರಿಗೆ ಸರಳ ರೀತಿಯಲ್ಲಿ ಮಕ್ಕಳಿಗೆ ಬೋಧನೆ ಮಾಡಲು ಅನುಕೂಲಕರವಾಗಿವೆ, ಶಿಕ್ಷಕರು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಕೇಂದ್ರಗಳಾಗಿವೆ ಎಂದರು.

ಅಧ್ಯಕ್ಷ ಗಿರೀಶ ಉಮರಾಣಿ, ಮಹಾದೇವ ದೂಪದಾಳ, ಸುರೇಶ ಮನಹಳ್ಳಿ, ಶೈಲಾ ಕೆಂಚಣ್ಣವರ, ಚಿನ್ನಪ್ಪ ಕರಲಟ್ಟಿ, ಎಸ್, ವೈ, ಅಂಬಿಗೇರ, ಎಸ್, ಆರ್, ಕಂಬಾರ, ಬಿ,ಆರ್,ಮಠೋಳಿ ಸಮೂಹ ಸಮತಿಗೆ ಆಯ್ಕೆಯಾದರು.

ಭೂಷಣ ಪತ್ತಾರ ಒಂದು ಸಾವಿರ ರೂ.ಗಳು ಮತ್ತು ನೂತನ ಅಧ್ಯಕ್ಷ ಸುರೇಶ್ ಮನಹಳ್ಳಿ ಐದು ಸಾವಿ ರೂಪಾಯಿಗಳನ್ನು ಸಮೂಹಕ್ಕೆ ನೀಡಿದರು.

ವೇದಿಕೆ ಮೇಲೆ ವಿನೋದ ದೇಶಪಾಂಡೆ, ರಮೇಶ ವಡ್ಡರ, ಉಪಸ್ಥಿತರಿದ್ದರು. ಜಮಖಂಡಿ ಮತ್ತು ರಬಕವಿ ಬನಹಟ್ಟಿ ತಾಲೂಕಿನ ಗಣಿತ ಶಿಕ್ಷಕರು ಪಾಲ್ಗೊಂಡಿದ್ದರು. ಸಂಗಮೇಶ ಉಟಗಿ ನಿರೂಪಿಸಿದರು. ಶಿಕ್ಷಕ ಮಹಾಂತೇಶ ಹೆಬ್ಳಿ ವಂದಿಸಿದರು.


ಸುದ್ದಿ ಓದಿ