ಜಮಖಂಡಿ

ಸ್ವಾತಂತ್ರ್ಯೋತ್ಸವದ ಪೂರ್ವಭಾವಿ ಸಭೆ

ಸ್ವಾತಂತ್ರ್ಯೋತ್ಸವದ ಪೂರ್ವಭಾವಿ ಸಭೆ

ಜಮಖಂಡಿ 29: ಪ್ಲಾಸ್ಟಿಕ್ ಧ್ವಜಗಳನ್ನು ಅಂಗಡಿ- ಮುಂಗಟ್ಟುಗಳಲ್ಲಿ ಮಾರಾಟ ಮಾಡದಂತೆ ಮುಂಜಾಗ್ರತೆಯಿಂದ ನಗರಸಭೆ, ಕಂದಾಯ, ಪೊಲೀಸರು ಜಂಟಿಯಲ್ಲಿ ಸಂಪೂರ್ಣವಾಗಿ ನಿಷೇಧಿಸಬೇಕೆಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು. ನಗರದ ತಾಲೂಕಡಳಿತ ಸಭಾ ಭವನದಲ್ಲಿ ನಡೆದ ಅ.15 ರಂದು ನಡೆಯುವ ಸ್ವಾತಂತ್ರ್ಯೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. 

ಪ್ರತಿವರ್ಷದಂತೆ ಎಲ್ಲ ಶಾಲಾ ಮಕ್ಕಳು ಸಮವಸ್ತ್ರವನ್ನು ಧರಿಸಿಕೊಂಡು ಬರಬೇಕು. ಸ್ವಚ್ಚತೆಯ ಬಗ್ಗೆ ಹೆಚ್ಚು ಗಮನಹರಿಸಿ. ವಿಶೇಷ ಸಾಧನೆಗೈದ ಸಾಧಕರಿಗೆ ಸನ್ಮಾನ, ಸತ್ಕಾರ ಮಾಡಲಾಗುತ್ತದೆ. ತಾಲೂಕಡಳಿತ ಕಚೇರಿಗೆ ವಿದ್ಯುತ್ ದ್ವೀಪಗಳಿಂದ ಸುಂದರವಾಗಿ ಕಾಣುವಂತೆ ಅಲಂಕರಿಸಬೇಕೆಂದರು. 

ಉಪವಿಭಾಗಾಧಿಕಾರಿ ಸಂತೋಷ ಕಾಮಗೊಂಡ ಅವರು ಮಾತನಾಡಿ, ಬೆಳಗ್ಗೆ ಎಲ್ಲರೂ ಸರಿಯಾಗಿ 8.30 ಕ್ಕೆ ತಾಲೂಕಡಳಿತ ಕಚೇರಿಗೆ ಆಗಮಿಸಿ. ಚಟ್ಟು ಶಿಂಗ ಉದ್ಯಾನವನದಲ್ಲಿ ಧ್ವಜಾರೋಹಣ ನೇರವೆರಿಸಿ. ಡಾ.ಬಿ.ಆರ್‌.ಅಂಬೇಡ್ಕರ್ ವೃತ್ತದಲ್ಲಿ ಧ್ವಜಾರೋಹಣ ನೇರವೆರುಸುವದು ನಂತರ ತಾಲೂಕಾ ಕ್ರೀಡಾಂಗಣದಲ್ಲಿ ಪ್ರತಿವರ್ಷದಂತೆ ಸರಿಯಾಗಿ 9 ಗಂಟೆಗೆ ಉಪವಿಭಾಗಧಿಕಾರಿಗಳು ಧ್ವಜಾರೋಹನ ನೇರವೆರುಸುವರು ಎಂದರು. 

ಎಲ್ಲ ಸರಕಾರಿ, ಅರೆ ಸರಕಾರಿ, ಸಂಘ-ಸಂಸ್ಥೆಗಳು ಧ್ವಜಾರೋಹನ ಮಾಡುವ ಸಮಯದಲ್ಲಿ ಹಳೆಯ ಧ್ವಜಗಳು ಇದ್ದರೆ ಅವುಗಳನ್ನು ತಗೆದು. ಐಎಸ್‌ಐ ಮಾರ್ಕಗಳನ್ನು ಹೊಂದಿದ ಹೊಸ ಧ್ವಜವನ್ನು ಅಳವಡಿಸಿ ಧ್ವಜಾರೋಹನ ಮಾಡಬೇಕೆಂದರು. 

ತಹಶೀಲ್ದಾರ ಸದಾಶಿವ ಮಕ್ಕೋಜಿ, ನಗರಸಭೆ ಪೌರಾಯುಕ್ತೆ ಲಕ್ಷ್ಮೀ ಅಸ್ಟಗಿ, ತಾ,ಪಂ, ಇಒ ಗುರುಶಾಂತಪ್ಪ ಬೆಳುಂಡಗಿ ಹಾಗೂ ತಾಲೂಕಾ ಮಟ್ಟದ ಅಧಿಕಾರಿಗಳು, ವಿವಿಧ ಸಂಘ,ಸಂಸ್ಥಗಳ ಪದಾಧಿಕಾರಿಗಳು ಇದ್ದರು.  ನಗರದ ತಾಲೂಕಡಳಿತ ಸಭಾ ಭವನದಲ್ಲಿ ನಡೆದ ಅ.15 ರಂದು ನಡೆಯುವ ಸ್ವಾತಂತ್ರ್ಯೋತ್ಸವದ ಪೂರ್ವ ಭಾವಿ ಸಭೆಯಲ್ಲಿ ಶಾಸಕ ಜಗದೀಶ ಗುಡಗುಂಟಿ ಮಾತನಾಡಿದರು. 


ಸುದ್ದಿ ಓದಿ