ಜಮಖಂಡಿ

ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ- ಸನ್ಮಾನ ಸಮಾರಂಭ ಕಾರ್ಯಕ್ರಮ

ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ- ಸನ್ಮಾನ ಸಮಾರಂಭ ಕಾರ್ಯಕ್ರಮ

ಜಮಖಂಡಿ 13:  ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡುತ್ತಾ ಬರುವ ಕಾರಣ, ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕೆಲಸ, ಸಮಾಜ ಸಂಘಟನೆ, ಹಾಗೂ ಸಮಾಜ ಜಾಗೃತಿ ಮೂಡಿಸುವದು,ಬೆಳಸುವ ಕೆಲಸ ನಡೆಯುತ್ತಾ ಇರುವದು ಇದೊಂದು ಒಳ್ಳೆಯ ಕೆಲಸವಾಗಿದೆಂದು ಸಂಸದ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟೆರ ಹೇಳಿದರು. 

ನಗರದ ದಾನಮ್ಮದೇವಿ ಸಮುದಾಯ ಭವನದಲ್ಲಿ ನಡೆದ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ ಸಹಯೋಗದಲ್ಲಿ ಬಣಜಿಗ ದೈವ ಮಂಡಳಿ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಣಜಿಗ ಸಮಾಜದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಬಗ್ಗೆ ಹರಿಸುವ ಕೆಲಸ ಸಂಘಟನೆಗಳಿಂದ ಸಾಧ್ಯ, ಲಿಂಗಾಯತ ಸಮಾಜದಲ್ಲಿ ಉಪ ಪಂಗಡಗಳು, ಉಪ ಜಾತಿಗಳು ಬಹಳ ಇವೆ, ಇಂತಹ ಕಾರ್ಯಕ್ರಮ ಮಾಡುವ ಕಾರಣ ಲಿಂಗಾಯತ, ವೀರಶೈವ ಲಿಂಗಾಯತ ಒಂದಾಗಿ ಸಮಾಜ ಅಭಿವೃದ್ದಿ ಮಾಡುವ ಗುರಿ ಹೊಂದಿರುವದು ಬಣಜಿಗ ಸಮಾಜ ಮಾಡುತ್ತಿದೆ, ಯಾವುದೇ ಸಂಘರ್ಷ ಮಾಡುತ್ತಿಲ್ಲ ಎಂದರು. 

ನಮ್ಮಗೆ ಆದರ್ಶ ನೀಡಿದವರು ಬಸವಣ್ಣನ್ನವರು, ಅವರು 12ನೇ ಶತಮಾದಲ್ಲಿ ಸಮಾನತೆಗಾಗಿ ಅನುಭವ ಮಂಟಪ ಪಾರ್ಲಿಮೆಂಟ್ ತರಹ ನಿರ್ಮಾಣ ಮಾಡಿದರು. ಎಲ್ಲ ಸಮಾಜದ ವರ್ಗದ ಜನರನ್ನು ಒಂದುಗೂಡಿಸಿದರು. ಹೆಣ್ಣು, ಗಂಡು, ಮೇಲ್ವರ್ಗ, ಕೆಳವರ್ಗ,ಭೇಧ,ಭಾವಗಳನ್ನು ಮರೆತು ಸಮಾಜವನ್ನು ಒಂದು ಮಾಡಿದರು. ಸಮಾಜ ಕಟ್ಟುವ ಕಲ್ಯಾಣ ಕ್ರಾಂತಿಯನ್ನು ಮಾಡಿದರು. .ಶರಣರ ಸಾಹಿತ್ಯ ಇಂದಿಗೂ ಎಲ್ಲ ಸಮಾಜದ ಜನರು ನೆನಪಿಸಿಕೊಳ್ಳುತ್ತಿದ್ದಾರೆ. ಪ್ರಧಾನಿ ಮೋಧಿಜಿ ಅವರು ಬಸವಣ್ಣನವರನ್ನು ವಚನಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ.ನಾನು ಸಿ,ಎಂ,ಇದ್ದ ಸಮಯದಲ್ಲಿ ಸಮಾಜದ ಋಣ ತೀರಿಸುವ ಕೆಲಸ ಮಾಡಿದ್ದೇನೆ.ಸಾಕಷ್ಟು ಆರ್ಥಿಕ ಸಹಾಯ ಮಾಡಿದ್ದೇನೆ. ದಾನಮ್ಮದೇವಿ ಟ್ರಸ್ಟ್‌ ಕಮೀಟಿಗೆ 1 ಕೋಟಿ ಅನುದಾನ ನೀಡಬೇಕೆಂದು ಶಿಫಾರಸು ಮಾಡಿದೆ.ಕಾರಣಾಂತರಗಳಿಂದ ಉಳಿದಿದೆ.  ಮಾಜಿ ಶಾಸಕ ಆನಂದ ನ್ಯಾಮಗೌಡ ಅವರು ಈಶ್ವರ ಖಂಡ್ರೆ ಅವರಿಂದ 1ಕೋಟಿ ಅನುದಾನ ನೀಡುತ್ತೇನೆ ಎಂದಿದರು. ಇವಾಗ 50 ಲಕ್ಷ ಅನುದಾನ ನೀಡಿದ್ದಾರೆ. ಇನ್ನೂ 50 ಲಕ್ಷ ಅನುದಾನವನ್ನು ಸಚಿವರ ಗಮನಕ್ಕೆ ತಂದು ನೀಡಬೇಕು.ಇವಾಗ ತಮ್ಮ ಸರಕಾರ ಇದೆ ಎಂದರು. 

ಬಣಜಿಗ ಸಮಾಜದಲ್ಲಿ ವಿವಿಧ ಕ್ಷೇತ್ರದಲ್ಲಿ ಮುಂದಾಗಿದ್ದಾರೆ. ಸಾಕಷ್ಟು ಜನ ದುರ್ಬಲರು ಇದ್ದಾರೆ. ಅಂತರವನ್ನು ಸಮಾಜ ಗುರುತಿಸಿ ಸರ್ವೇ ಮಾಡಿ. ಅವರನ್ನು ಮುಂದೆ ತರುವ ಕೆಲಸ ಮಾಡಬೇಕು. ಆರ್ಥಿಕವಾಗಿ, ಶಿಕ್ಷಣದಿಂದ ಮಕ್ಕಳಿಗೆ ಸಹಾಯ,ಸಹಕಾರ ನೀಡಲು ಮುಂದಾಗಬೇಕು. ನಮ್ಮ ಸಮಾಜ 1 ಕೋಟಿ 12 ಲಕ್ಷ ಜನಸಂಖ್ಯೆ ಇದೆ. ನಮ್ಮ ಜನಸಂಖ್ಯೆಯ ಅನುಗುವಾಗಿ ರಾಜಕೀಯ ಕ್ಷೇತ್ರದಲ್ಲಿ ಟಿಕೇಟ್ ನೀಡಬೇಕು. ಸಚಿವ ಸ್ಥಾನ, ಮಂತ್ರಿ ಸ್ಥಾನ ನೀಡಬೇಕಾಗುತ್ತದೆ. ಅದಕ್ಕಾಗಿ ಸಮಾಜದ ಸರ್ವೇ ಕೆಲಸ ಮಾಡಿದರೆ ಎಲ್ಲ ಕ್ಷೇತ್ರಗಳಲ್ಲಿ ಪ್ರವೇಶಿಸಿ ಮುಂದೆ ಬರಲು ಸಾಧ್ಯವಾಗುತ್ತದೆ. ಬೆಳಗಾವಿ ಜನತೆ ನನ್ನನ್ನು ಆಯ್ಕೆ ಮಾಡಿದ್ದಾರೆ. ಅವರಿಗೆ ಅಭಿನಂದನೆ ಸಲಿಸುತ್ತೇನೆ. ನನ್ನಿಂದ ಸಹಾಯ, ಸಹಕಾರ ಎಷ್ಟೋ ಮಾಡಲು ಸಾಧ್ಯವೊ, ಅಷ್ಟು ಕೆಲಸ ಮಾಡುವ ಜೊತೆಗೆ ಕೇಂದ್ರ ಸರಕಾರದಿಂದ ಅನುದಾನ ಬಿಡುಗಡೆ ಮಾಡಿಸಿ ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡುವ ಪ್ರಯತ್ನ ಮಾಡುತ್ತೇನೆ ಎಂದರು, 

ಸಂಸದ ಪಿ,ಸಿ,ಗದ್ದಿಗೌಡರ ಮಾತನಾಡಿ, ವಿದ್ಯಾವಂತರು, ಸಂಸ್ಕೃತಿಯನ್ನು ಹೊಂದಿದ ಸಮಾಜವಾಗಿದೆ. ಎಲ್ಲ ಸಮಾಜದ ಜೊತೆ ಕೂಡಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಪ್ರತಿಯೊಂದು ಸಮಾಜ ಮಕ್ಕಳು ವಿದ್ಯಾಭ್ಯಾಸ ಮಾಡಬೇಕು. ತಮ್ಮ ಜೀವನವನ್ನು ರೂಪಿಸಿಕೊಳ್ಳುವ ಪ್ರಯತ್ನ ಮಾಡಬೇಕು. ವಿದ್ಯಾರ್ಥಿಗಳು ಹೆಚ್ಚು ವಿದ್ಯಾಭ್ಯಾಸದ ಕಡೆಗೆ ಗಮನಹರಿಸಿಬೇಕು. ಹೆಚ್ಚು ಅಂಕ ಪಡೆದು ಮುಂದೆ ಬರುವ ಚಲವನ್ನು ಹೊಂದಬೇಕು. ರಾಜಕೀಯಕ್ಷೇತ್ರದಲ್ಲಿ ಸಹಕಾರಿ ಕ್ಷೇತ್ರದಲ್ಲಿ ಮುಂದುವರೆದ್ದ ಸಮಾಜವಾಗಿದೆ. ನನ್ನ ಅನುದಾನದಲ್ಲಿ  15 ಲಕ್ಷ ಅಭಿವೃದ್ಧಿಗಾಗಿ ನೀಡುತ್ತೇನೆಂದು ವಾಗ್ದಾನ ಮಾಡಿದರು.ರಾಜ್ಯದ ಎಲ್ಲ ಸಂಸದರು ಸೇರಿ ರಾಜ್ಯದ ಅಭಿವೃದ್ಧಿಗಾಗಿ ಕೇಂದ್ರದ ಮೇಲೆ ಒತ್ತಡ ಹಾಕಿ ಅನುದಾನ ತರುವ ಪ್ರಯತ್ನ ಮಾಡುತ್ತೇವೆ.ನಿಮ್ಮ ಸಮಾಜದ ಜೊತೆ ಬಹಳ ಒಡನಾಟ ಹೊಂದಿದ ವ್ಯಕ್ತಿ ಆಗಿದೆನೆ ಎಂದರು. 

ಶಾಸಕ ಜಗದೀಶ ಗುಡಗುಂಟಿ ಮಾತನಾಡಿ, ವಿರಶೈವ ಲಿಂಗಾಯತ ಧರ್ಮದ ಸನಾತನವಾದ ಧರ್ಮವಾಗಿದೆ. ಸಮಾಜದಲ್ಲಿ ವೃತಿ ಕೆಲಸ ಮಾಡುವ ಮೂಲಕ ಧರ್ಮ ನಿರ್ಧಾರವಾಗಿವೆ. ಬಣಜಿಗ ಸಮಾಜ ಗುರುತು ತಕ್ಕಡಿಯಾಗಿದೆ. ಇದೊಂದು ದೊಡ್ಡ ಸಮಾಜವಾಗಿದೆ. ಮಕ್ಕಳಿಗೆ ಹುರುಪು ತುಂಬುವ ಕೆಲಸ ಮಾಡುತ್ತಿದ್ದಾರೆ. ಸಂಸ್ಕಾರ, ಸಂಸ್ಕೃತಿ, ಧರ್ಮದ ಬಗ್ಗೆ ಮಕ್ಕಳು ತಿಳಿದುಕೊಳ್ಳಬೇಕು. ಲಿಂಗಾಯತ ಸಮಾಜ ಲಿಂಗವನ್ನು ಧರಿಸಿಕೊಳ್ಳ ಬಗ್ಗೆ ಮಕ್ಕಳಿಗೆ ತಿಳಿಸಬೇಕು. ಮಕ್ಕಳಲ್ಲಿ ಸ್ಪರ್ಧೆ ಇದ್ದರೆ ಮಾತ್ರ ಸಾಧನೆ ಹೊರ ಬರಲು ಸಾಧ್ಯವಾಗುತ್ತದೆ ಎಂದರು. 

ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ಬಣಜಿಗ ಸಮಾಜ ಮುಂದುವರೆದ ಸಮಾಜವಾಗಿದೆ. ಒಬ್ಬ ಬಣಜಿಗ ಗೆಳೆತನ ಮಾಡಿದರೆ ಮಾತ್ರ ಹೇಗೆ ಮುಂದೆ ಬರಬೇಕೆಂದು ತಿಳಿದುಕೊಳ್ಳಲು ಸಾಧ್ಯ. ಸಮಾಜದಲ್ಲಿ ಪ್ರತಿಭಾ ಪುರಸ್ಕಾರ ನಡೆಯಬೇಕು. ಬಸವಣ್ಣನವರು ಕೇವಲ ಭಾಷಣಕ್ಕೆ ಮಾತ್ರ ಸೀಮಿತವಾಗಬಾರದು. ಬೇರೆ, ಬೇರೆ ಉಪ ಜಾತಿಗಳಿಂದ ಪ್ರತಿಭಾ ಪುರಸ್ಕಾರ ನಡೆಯುತ್ತಿವೆ. ಎಲ್ಲರೂ ಸೇರಿ ಸಮಾಜ ಕಟ್ಟು ಕೆಲಸ ಮಾಡಬೇಕು. ಬಡವರಿಗೆ ಆರ್ಥಿಕ ಸಹಾಯ, ಸಹಕಾರ ನೀಡಿದರೆ ಮಾತ್ರ ಸಮಾಜದಿಂದ ಒಳ್ಳೆಯ ಕೆಲಸ ಮಾಡಲು ಸಾಧ್ಯವಾಗುತ್ತದೆ..ಯಾರು ಜ್ಞಾನವನ್ನು ಪಡೆದುಕೊಂಡಿರುತ್ತಾರೆ ಅವರೆ ಶ್ರೀಮಂತರು ಆಗಿರುತ್ತಾರೆ. ಅದಾನಿ,ಅಂಬಾನಿ ಅವರು ಶ್ರೀಮಂತಿಕೆಯಿಂದ ಮಾತ್ರ ಇದ್ದಾರೆ. ಜ್ಞಾನ ಸಂಪಾದನೆಯಿಂದ ಹೆಚ್ಚು ಶ್ರೀಮಂತಿಕೆ ಹೊಂದಬೇಕು. ಅಧಿಕಾರದಲ್ಲಿ ಯಾರೇ ಇದ್ದರು ಭೇದಭಾವ ಮರೆತು ಸಮಾಜಕ್ಕೆ ಅಭಿವೃದ್ಧಿ ಮಾಡುವ ಕೆಲಸ ಮಾಡಲು ಮುಂದಾಬೇಕು. ಕಳೆದು ವರ್ಷ ಟೋಪಿ ಕಲರ ಬೇರೆ ಇತ್ತು. ಇಂದು ಟೋಪಿ ಕಲರ ಬದಲಾವಣೆ ಹೊಂದಿದೆ. ಅದರಂತೆ ಸಮಾಜ ಸಹ ಬದಲಾವಣೆ ಹೊಂದುವ ಜೊತೆಗೆ ಮುಂದೆ ಬರಬೇಕು ಎಂದರು.  

ಪ್ರಾಸ್ತಾವಿಕವಾಗಿ ಮಾತನಾಡಿದ ಡಾ.ಉಮೇಶ ಮಹಾಬಳಶೆಟ್ಠಿ, 10 ವರ್ಷಗಳ ಕಾಲ ಸಮಾಜದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡುವ ಕೆಲಸ ಮಾಡುತ್ತಿದ್ದೆವೆ. 60 ರಿಂದ 70 ವಿದ್ಯಾರ್ಥಿಗಳಿಗೆ ಸನ್ಮಾನಿಸುತ್ತಾ ಬಂದಿದೆವೆ. ದೊಡ್ಡ, ದೊಡ ಸಮುದಾಯ ಭವನ ಕಟ್ಟಡ ನಿರ್ಮಾಣಕ್ಕೆ ಸಾಕಷ್ಟು ಸಮಾಜದ ಹಿರಿಯರು ಜಾಗೆಯನ್ನು ನೀಡಿದ್ದಾರೆ. ನಮ್ಮ ಸಮಾಜ ದಾನಮ್ಮ ದೇವಿಯ ಭಕ್ತರು ಆಗಿದ್ದಾರೆ. ಉದ್ಯಾನವನದ ಜಾಗೆಯನ್ನು 99 ವರ್ಷ ಕಾಲ ನಿರ್ವಹಣೆಗೆ ನೀಡಿದ್ದಿರಿ. ಅದನ್ನು ದಾನಮ್ಮ ದೇವಿಯ ಟ್ರಸ್ಟ್‌ ಕಮಿಟಿಗೆ ನೀಡಿಬೇಕು ಎಂದು ಮಾಜಿ ಶಾಸಕರಿಗೆ ಹಾಗೂ ಹಾಲಿ ಶಾಸಕರಿಗೆ ಮನವಿ ಮಾಡಿಕೊಂಡರು. 

ಮುತ್ತಿನಕಂತಿ ಮಠದ ಶಿವಲಿಂಗ ಪಂಡಿತರಾಧ್ಯ ಶಿವಾಚಾರ್ಯ ಶ್ರೀಗಳು ಆರ್ಶಿವಚನ ನೀಡಿದರು. 

ಚಂದ್ರಶೇಖರ ಜತ್ತಿ ನಿರೂಪಿಸಿದರು, ಸಂಗಮೇಶ ಹಲವಾಯಿ ಸ್ವಾಗತಿಸಿದರು, ಪೂಜಾ ಜಿರಲಿ ಮತ್ತು ಸಂಗಡಿಗರು ಪ್ರಾರ್ಥನಿಸಿದರು, 


ಸುದ್ದಿ ಓದಿ