ಜಾರಕಿಹೊಳಿ ಅಭಿಮಾನಿಗಳಿಂದ ಪೋಸ್ಟರ್ ಅಭಿಯಾನ
ಅಥಣಿ 11: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರದು ಎನ್ನಲಾದ ಸಿಡಿ ಪ್ರಕರಣದಲ್ಲಿ ನೊಂದಿರುವ ಮಾಜಿ ಜಲಸಂಪನ್ಮೂಲ ಸಚಿವರಿಗೆ ಜಾರಕಿಹೊಳಿ ಅಭಿಮಾನಿಗಳಿಂದ ಆತ್ಮಸ್ಥೈರ್ಯ ತುಂಬುವ ಕೆಲಸಕ್ಕೆ ಮುಂದಾಗಿದ್ದಾರೆ. ಅಥಣಿ ಪಟ್ಟಣದಲ್ಲಿ ಸುಮಾರು 50 ಹೆಚ್ಚು ಅಟೋ ರಿಕ್ಷಾ ಹಾಗೂ ಕಾರುಗಳ ಮೇಲೆ ಪೋಸ್ಟರ್ ಅಂಟಿಸಿ ನಿಮ್ಮೊಂದಿಗೆ ನಾವು ಎಂದು ಹೇಳುವ ಮೂಲಕ ಅಭಿಮಾನಿಗಳು ಎಲ್ಲರ ಗಮನ ಸೆಳದಿದ್ದಾಳೆ. ಹಾಗೂ ಆದಷ್ಟು ಬೇಗ ಈ ಆರೋಪದಿಂದ ಮುಕ್ತರಾಗಿ ಮತ್ತು ಸಚಿವ ಸ್ಥಾನ ನೀಡುವಂತೆ ಸಕರ್ಾರಕ್ಕೆ ಸಾವಕಾರ ಅಭಿಮಾನಿಗಳು ಆಗ್ರಹಿಸಿದರು.
ಇದೇ ವೇಳೆ ಜಾರಕಿಹೊಳಿ ಕುಟುಂಬದ ಅಭಿಮಾನಿ ಬಸವರಾಜ ಯಡೂರ ಹಾಗೂ ಅಮೂಲ್ ನಾಯಕ್ ಮಾತನಾಡಿ, ರಮೇಶ್ ಜಾರಕಿಹೊಳಿ ಅವರಿಗೆ ಹಿಂಬದಿಯಿಂದ ಮೋಸ ಮಾಡಿದ್ದಾರೆ, ಇದರಿಂದ ಅವರಿಗೆ ತುಂಬಾ ನೊಂದಿದ್ದಾರೆ, ಇದರಿಂದ ನಿಮ್ಮ ಜೊತೆ ನಾವು ಇದ್ದೇವೆ ಎಂಬ ಉದ್ದೇಶದಿಂದ ಅಥಣಿ ಪಟ್ಟಣದಲ್ಲಿ ಅಭಿಮಾನಿಗಳಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಹಾಗೂ ರಮೇಶ್ ಜಾರಕಿಹೊಳಿ ಅವರನ್ನು ಆದಷ್ಟು ಬೇಗನೆ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡರು.