ಅಪರೂಪದ ಬ್ರಹ್ಮಕಮಲ ಪುಷ್ಪಕ್ಕೆ ಮುತೈದಿಯರಿಂದ ಪೂಜೆ
ಜಮಖಂಡಿ 15: ತಡರಾತ್ರಿಯಲ್ಲಿ ಅರಳಿದ ಅಪರೂಪದ ಬ್ರಹ್ಮಕಮಲ ಪುಷ್ಪ ವರ್ಷಕ್ಕೆ ಒಂದು ಬಾರಿಯಾಗಿ ಅರಳುವ ಇದು ದೇವ ಪುಷ್ಪವಾಗಿದ್ದು. ಇದಕ್ಕೆ ವಿಶೇಷ ಪೂಜೆಯನ್ನು ಸಲಿಸಿ. ಮುತೈದಿಯರಿಗೆ ಉಡಿತುಂಬಲಾಯಿತು.
ನಗರದ ರುದ್ರಸ್ವಾಮಿ ಪೇಠದ ಪತ್ರಕರ್ತ ಶಶಿಕಾಂತ ತೇರದಾಳ ಅವರ ಮನೆಯಲ್ಲಿ ಅಪರೂಪದ ಬ್ರಹ್ಮಕಮಲ ಎಲೆಯ ಕೊಂಬೆಯಿಂದ ಅರಳುವ ಹೂ ಸಾಯಂಕಾಲ 6 ಗಂಟೆಗೆ ಅರಳಲು ಪ್ರಾರಂಭಗೊಂಡು. ತಡರಾತ್ರಿ 10 ಗಂಟೆಗೆ ಸಂಪೂರ್ಣವಾಗಿ ಅರಳುತ್ತಿದ್ದಂತೆ ಮನೆಯ ಕುಟುಂಬಸ್ಥರು ಸೇರಿ ವಿಶೇಷ ಪೂಜೆಯನ್ನು ಸಲಿಸಲಾಯಿತು.
ಅಪರೂಪದ ಬ್ರಹ್ಮಕಮಲ ಹೂವಿಗೆ ನಾನಾ ಬಗ್ಗೆಯ ಪೂಜೆಯನ್ನು ಸಲಿಸಿ. ಮುತೈದಿಯರಿಗೆ ಉಡಿಯನ್ನು ತುಂಬಿ. ಭಕ್ತಿ ಭಾವದಿಂದ ನಮಿಸಿ.ಪೂಜೆಯನ್ನು ಮಾಡಲಾಯಿತು. ಹೂವಿನ ಸುಂಗಧ ಸುತ್ತಮುತ್ತಲೂ ಹರಡಿ ತನ್ನ ಸುಗಂಧವನ್ನು ಬೀರಿತು. ಇದು ಬ್ರಹ್ಮದೇವನ ಪುಷ್ಟವಾಗಿದೆ ಎಂದು ಜನರ ನಂಬಿಕೆಯಾಗಿದೆ.