ಜಮಖಂಡಿ

ರಾಜ್ಯಶಾಸ್ತ್ರ ಎಂಬುದು ಸಮಾಜ ವಿಜ್ಞಾನಗಳಲ್ಲ್ಲಿ ಅತೀ ಅವಶ್ಯಕ: ನುಚ್ಚಿ

ರಾಜ್ಯಶಾಸ್ತ್ರ ಎಂಬುದು ಸಮಾಜ ವಿಜ್ಞಾನಗಳಲ್ಲ್ಲಿ ಅತೀ ಅವಶ್ಯಕ: ನುಚ್ಚಿ

ಜಮಖಂಡಿ 27: ಪ್ರಜಾಪ್ರಭುತ್ವ ಯಶಸ್ಸುಗಳಿಸಲು ಪ್ರಜೆಗಳ ಸಂಯೋಜನೆ ಹೇಗೆ ಮುಖ್ಯವೋ ಹಾಗೆ ವಿದ್ಯಾರ್ಥಿಗಳ ಯಶಸ್ಸಿಗೆ ಶಿಕ್ಷಣ, ಶಿಕ್ಷಕ ಹಾಗೂ ವಿದ್ಯಾರ್ಥಿಗಳ ಸಂಯೋಜನೆ ಅವಶ್ಯಕವಾಗಿದೆ. ರಾಜ್ಯಶಾಸ್ತ್ರವನ್ನು ಅಭ್ಯರ್ಥಿಸಿದ ನಾಯಕರಿಂದ ಸರ್ಕಾರ ಹಾಗೂ ದೇಶದ ಆಡಳಿತವನ್ನು ಸಮರ್ಥವಾಗಿ ಮುನ್ನಡೆಸಲು ಸಾಧ್ಯ ಎಂದು ಉಪನ್ಯಾಸಕ ಡಾ. ಬಿ.ಎಂ. ನುಚ್ಚಿ ಹೇಳಿದರು. 

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹುನ್ನೂರಿನಲ್ಲಿ ರಾಜ್ಯಶಾಸ್ತ್ರ ವಿಭಾಗ ಹಾಗೂ ಐ.ಕ್ಯೂ.ಎ.ಸಿ. ಘಟಕದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಸ್ತುತ ಸನ್ನಿವೇಶದಲ್ಲಿ ರಾಜ್ಯಶಾಸ್ತ್ರದ ಪ್ರಸ್ತುತತೆ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು, 

ರಾಜ್ಯಶಾಸ್ತ್ರ ಎಂಬುದು ಸಮಾಜ ವಿಜ್ಞಾನಗಳಲ್ಲ್ಲಿ ಅತೀ ಅವಶ್ಯಕವಾಗಿರುವ ವಿಜ್ಞಾನವಾಗಿದೆ. ರಾಜ್ಯಶಾಸ್ತ್ರದಲ್ಲಿ ಆಡಳಿತ, ಯೋಜನೆ, ಯೋಚನೆ, ಅಧ್ಯಯನ, ವ್ಯವಸ್ಥಾಪನೆ ಕುರಿತು ವೈಜ್ಞಾನಿಕವಾಗಿ ಅಧ್ಯಯನ ಮಾಡಲಾಗುತ್ತದೆ. ಅಲ್ಲದೇ ಸಂವಿಧಾನದ ಮಹತ್ವದ ಕುರಿತು ಅರಿವು ಮೂಡಿಸುವ ಕಾರ್ಯ ಸರ್ಕಾರದಿಂದ ನಡೆದಿದೆ. ಏಕೆಂದರೆ ಸಂವಿಧಾನವನ್ನರಿತವನು ಉತ್ತಮ ನಾಗರಿಕನಾಗಿ ರಾಷ್ಟ್ರದ ಸಂಪನ್ಮೂಲ ವ್ಯಕ್ತಿಯಾಗುತ್ತಾನೆ ಎಂದರು. 

ಪ್ರಾಂಶುಪಾಲ ಡಾ. ಸುನಂದಾ ಎಸ್‌. ಶಿರೂರ ಮಾತನಾಡಿ, ವೇದಿಕೆಯ ಮೇಲೆ ಪ್ರೊ. ಎಲ್‌.ಎಸ್‌.ಕೋರೆ, ಪ್ರೊ. ಪಿ.ಕೆ.ನವಲ್ದಾರ, ವಿದ್ಯಾರ್ಥಿ ಪ್ರತಿನಿಧಿ ಪ್ರವೀಣಕುಮಾರ ಬಾಗಲಕೋಟ, ಉಪಸ್ಥಿತರಿದ್ದರು.  

ಸೌಂದರ್ಯ ಬಾನಪ್ಪನವರ ಪ್ರಾರ್ಥಿಸಿದರು, ಡಾ. ಗುರು ಹಿರೇಮಠ ಸ್ವಾಗತಿಸಿದರು, ಕಾರ್ಯಕ್ರಮವನ್ನು ಉದ್ದೇಶಿಸಿ ಡಾ. ಎನ್‌.ವಿ. ಅಸ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಪ್ರೊ. ಪಿ.ಡಿ. ಬಡಿಗೇರ್ ನಿರೂಪಿಸಿದರು, ಡಾ. ರವಿಕುಮಾರ ಬಿ.ಕೆ. ವಂದಿಸಿದರು. 


ಸುದ್ದಿ ಓದಿ