ಪೋಲಿಸರ ದಾಳಿ ಅಕ್ರಮ ಗಾಂಜಾ ವಶ
Police raid, illegal marijuana seized
ಲೋಕದರ್ಶನ ವರದಿ
ಇಂಡಿ 20: ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆ ಬೆಳೆಯುತ್ತಿರುವ ಖಚಿತ ಮಾಹಿತಿ ಆಧರಿಸಿ ಇಂಡಿ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ 15 ಗಾಂಜಾ ಗಿಡಗಳನ್ನು ವಶಕ್ಕೆ ಪಡೆದು ಅರೋಪಿಯನ್ನು ಬಂಧಿಸಿದ್ದಾರೆ.
ರೂಗಿ ಗ್ರಾಮದ ಅಶೋಕ ತಂದೆ ಸೋಮಣ್ಣ ಗಿಣ್ಣಿ ವಯಾ 43 ಎಂಬುವವನು ತನ್ನ ಸ್ವಂತ ಜಮೀನಿನಲ್ಲಿ 15 ಗಾಂಜಾ ಗಿಡಗಳನ್ನು ಬೆಳೆಸಿದ್ದ ಅದರಲ್ಲಿ ಎರಡು ಗಿಡಗಳು ಒಣಗಿದ್ದು ಅಂದಾಜು 5 ಕೆ.ಜಿ ತೂಕವಾಗಿವೆ. ಕೆ.ಜಿ ಗಾಂಜಾಕ್ಕೆ 1000 ರೂಪಾಯಿಂತೆ ಅಂದಾಜು 5 ಸಾವಿರ ರೂಪಾಯಿ ಮೌಲ್ಯದ ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಕುರಿತು ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಳಿಯಲ್ಲಿ ತಹಸೀಲ್ದಾರ ಬಿ.ಎಸ್. ಕಡಕಭಾವಿ, ಗ್ರಾಮೀಣ ಠಾಣಾ ಪಿಎಸ್‌ಐ ರಾಜು ಮಮದಾಪೂರ, ತಹಸೀಲ್ದಾರ ಇಲಾಖೆಯ ಸಿಬ್ಬಂದಿ ಹುಸೇನಿ ಗುನ್ನಾಪೂರ, ಕ್ಷೇತ್ರಶಿಕ್ಷಣಾಧಿಕಾರಿ ಇಲಾಖೆಯ ಸಿಬ್ಬಂದಿ ಪ್ರಹ್ಲಾದ ಗುರವ, ಪೊಲೀಸ್ ಇಲಾಖೆಯ ಎಂ.ಜಿ ಸವಾಳೆ ಸೇರಿದಂತೆ ಇನ್ನಿತರ ಸಿಬ್ಬಂದಿ ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 