ಛಾಯಾಚಿತ್ರ ಇದೊಂದು ದೊಡ್ಡ ಕಲೆ: ಶಾಸಕ ಗುಡಗುಂಟಿ
ಲೋಕದರ್ಶನ ವರದಿ,
ಜಮಖಂಡಿ 30: ಛಾಯಾಚಿತ್ರ ಇದೊಂದು ದೊಡ್ಡ ಕಲೆಯಾಗಿದೆ. ವಿಜ್ಞಾನದಿಂದ ಎಷ್ಟೇ ಮುಂದುವರೆದರು ಸಹ ಛಾಯಾಚಿತ್ರ ಬೇಕಾಗುತ್ತದೆ. ಇದೊಂದು ಉದ್ಯೋಗವಲ್ಲ ಇದೊಂದು ಕಲೆಯಾಗಿದೆಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು.
ನಗರದ ಬಸವ ಭವನದಲ್ಲಿ ನಡೆದ ಜಮಖಂಡಿ ತಾಲೂಕಾ ಛಾಯಾಚಿತ್ರಗ್ರಾಹಕರ ಸಂಘ 12 ನೇ ವಾಷರ್ಿಕೋತ್ಸವ ಹಾಗೂ ಅಧಿಕಾರವ ಹಸ್ತಾಂತರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ತಮ್ಮ ವೃತ್ತಿಯಲ್ಲಿ ಕ್ಷಣ, ಕ್ಷಣದಲ್ಲಿ ಅಭಿವೃದ್ಧಿ ಹೊಂದುವ ಗುಣಗಳು ಇವೆ. ಮನುಷ್ಯನ ಮುಖವನ್ನು ಹೊಸದಾಗಿ ಸುಂದರವಾಗಿ ಕಾಣುವಂತೆ ಮಾಡುವ ಕಲೆಯನ್ನು ಚಿತ್ರಕಲೆ ಹೊಂದಿದೆ. ಛಾಯಾಗ್ರಹರಿಗೆ ಸರಕಾರದಿಂದ ದೊರೆಯಬೇಕಾಗದ ಸಕಲ ಸೌಲಭ್ಯಗಳ ಬೇಡಿಕೆಯನ್ನು ಇಡೇರಿಸುವದನ್ನು ಪ್ರಾಮಾಣಿಕವಾಗಿ ಪ್ರಯತ್ನ ಮಾಡಿ. ಸರಕಾರದ ಗಮನಕ್ಕೆ ತರುವ ಪ್ರಯತ್ನ ಮಾಡುತ್ತೇನೆ. ನಾನು ಛಾಯಾಚಿತ್ರ ಸಂಘಕ್ಕೆ ನನ್ನಿಂದ ಸಹಾಯ ಸಹಕಾರ ನೀಡಲು ಸದಾಸಿದ್ದ ಇದ್ದೇನೆ ಎಂದರು.
ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ಛಾಯಾಗ್ರಾಹಕರ ಸೇವೆಯನ್ನು ಎಲ್ಲರೂ ಪಡೆದುಕೊಳ್ಳುತ್ತೇವೆ. ಪ್ರತಿಯೊಂದು ಉದ್ಯೋಗದಲ್ಲಿ ಪೈಪೋಟಿ ನಡೆದಿದೆ. ಆದರೆ ಇಂದಿನ ದಿನಮಾನದಲ್ಲಿ ಮೋಬೈಲ್ಗಳಲ್ಲಿ ಪೋಟೋಗಳನ್ನು ತೆಗೆಯಲಾಗುತ್ತದೆ. ಆದರೆ ಪೋಟೋ ಗ್ರಾಫೀಗಳು ತೆಗೆದಿರುವ ಪೋಟೋಗಳು ಮಾತ್ರ ಶಾಶ್ವತವಾಗಿರುತ್ತವೆ. ನಮ್ಮ ಜೀವನದ ಬಾಲ್ಯದ ನನೆಪಿಸಿಕೊಳ್ಳುವದು ಪೋಟೋ ಗ್ರಾಫೀಯಿಂದ ಮಾತ್ರ ಸಾಧ್ಯವಾಗುತ್ತದೆ. ಎಲ್ಲ ವೃತಿಯಲ್ಲಿ ಸಂಕಷ್ಟಗಳು ಇವೆ. ಪೋಟೋ ಗ್ರಾಫೀಯವರ ಜೊತೆ ನಾನು ಕೂಡಾ ಇದ್ದೇನೆ. ತಮ್ಮಗೆ ಸಹಾಯ ಸಹಕಾರ ಮಾಡುತ್ತೇನೆ. ಉದಾಹರಣೆ ಹುಲಿಉಗುರದ ಪೋಟೋದಿಂದ ಇಂದು ಜೈಲಿಗೆ ಹೋಗುವ ಸಮಯ ಬಂದಿದೆ. ಅಷ್ಟೋಂದು ಶಕ್ತಿ ಪೋಟೋ ಗ್ರಾಫೀಯಲ್ಲಿ ಇದೆ. ಹಳೆಯ ಇತಿಹಾಸವನ್ನು ತಿಳಿದುಕೊಳ್ಳಲು ಪೋಟೋ ಗ್ರಾಫೀಗಳಿಂದ ಮಾತ್ರ ಸಾಧ್ಯವಾಗುತ್ತದೆ. ಇಂದಿನ ದಿನಮಾನದಲ್ಲಿ ಪೋಟೋ ಗ್ರಾಫರ್ ಮಹತ್ವ ಬಹಳ ಪ್ರಮುಖ ಪಾತ್ರವಿದೆ ಎಂದರು.
ಛಾಯಾಚಿತ್ರ ಸಂಘದ ಸದಸ್ಯರಿಗೆ ನಿವೇಶನ ಹಕ್ಕು ಪತ್ರವನ್ನು ನೀಡಬೇಕೆಂದು ಶಾಸಕ ಜಗದೀಶ ಗುಡಗುಂಟಿ ಅವರಿಗೆ ಮನವಿ ಸಲ್ಲಿಸಿದರು. ಮತ್ತು ಹೆಚ್ಚು ಅಂಕ ಪಡೆದ ವಿದ್ಯಾಥರ್ಿಗಳಿಗೆ ಹಾಗೂ ವಿಶೇಷ ಸಾಧನೆಗೈದ ಸಾಧಕ ಶ್ರೀಕಾಂತಬಡಿಗೇರ, ಗೈಬುಸಾಬ ಗಲಗಲಿ ಅವರಿಗೆ ಸನ್ಮಾನಿಸಲಾಯಿತು.
ರಾಜ್ಯನಿರ್ದೇಶಕ ಮಲ್ಲಿಕಾರ್ಜುನ ಕೆ, ಆರ್, ಜಿಲ್ಲಾಧ್ಯಕ್ಷ ವಿಠ್ಠಲ ಹಿರೇಮಠ ಮಾತನಾಡಿದರು. ಮೈಗೂರ ಗ್ರಾಮದ ಶಿವಾನಂದ ಮಠ ಗುರುಪ್ರಸಾದ ಮಹಾಸ್ವಾಮಿಜೀ ಆಶೀರ್ವಚನ ನೀಡಿದರು. ವಿಜಯಪುರ ಜಿಲ್ಲಾಧ್ಯಕ್ಷ ರಮೇಶ ಚವ್ಹಾಣ, ತಾಲೂಕಾಧ್ಯಕ್ಷ ಸಿದ್ದು ಮಾಳಿ, ನೂತನ ತಾ,ಅಧ್ಯಕ್ಷ ಶೇಖರ ಹರಕಂಗಿ, ಉಪಾಧ್ಯಕ್ಷ ಮುಜಾಹೀದ ದಿಲಾವರ, ಕಾರ್ಯದರ್ಶಿ ರಮೇಶ ಹಲವಾಯಿ, ಖಜಾಂಚಿ ಆನಂದ ಪುಕಾಳೆ ಸೇರಿದಂತೆ ಅನೇಕರು ವೇದಿಕೆಯಲ್ಲಿ ಇದ್ದರು. ಪ್ರಗತಿ ಪಾಟೀಲ ಪ್ರಾರ್ಥಿನಿಸಿದರು, ಶಂಕರ ಲಮಾಣಿ ನಿರೂಪಿಸಿದರು, ಅಸಗರಾಲಿ ಶೇಖ ಸ್ವಾಗತಿಸಿದರು, ಅಶೋಕ ಜೋಶಿ ಪ್ರಾಸ್ತಾವಿಕ ಮಾತನಾಡಿದರು.