ವ್ಯಕ್ತಿ ಕಾಣೆ: ಪ್ರಕರಣ ದಾಖಲು .,
ವಿಜಯನಗರ(ಹೊಸಪೇಟೆ)ಡಿ.02 : ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸುಮಾರು 32 ವರ್ಷದ ಮೆಹಬೂಬ್ ಬಾಷಾ ಎಂಬ ವ್ಯಕ್ತಿ ನ.23 ರಂದು ಕಾಣೆಯಾಗಿರುವ ಕುರಿತು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಸಹಾಯಕ ಸಬ್‌ಇನ್ಸ್‌ಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಣೆಯಾದ ವ್ಯಕ್ತಿಯ ಚಹರೆ ಗುರುತು: ಸುಮಾರು 5.8 ಅಡಿ ಎತ್ತರ, ಕೋಲು ಮುಖ, ಗೋಧಿ ಮೈಬಣ್ಣ, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ಕಾಕಿ ಬಣ್ಣದ ಚೆಕ್ ಶರ್ಟು ಧರಿಸಿರುತ್ತಾರೆ.
ಇಂಪಿರಿಯರಲ್ ಮಿನರಲ್ ಟ್ರಾನ್ಸ್ ಪೊರ್ಟ್ ಮಾಲೀಕರಾಗಿರುವ ಇವರು ಕನ್ನಡ ಮತ್ತು ಹಿಂದಿ ಹಾಗೂ ತೆಲುಗು ಭಾಷೆಯನ್ನು ಮಾತನಾಡುತ್ತಾರೆ.
ಈ ಮೆಲ್ಕಂಡ ಚಹರೆಯುಳ್ಳ ವ್ಯಕ್ತಿಯ ಬಗ್ಗೆ ಸುಳಿವು ಅಥವಾ ಮಾಹಿತಿ ಸಿಕ್ಕಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಹೊಸಪೇಟೆಯ ಪಿ.ಐ.ಪಟ್ಟಣ ಪೊಲೀಸ್ ಠಾಣೆಯ ದೂ.ಸಂ: 08394-224033/ 9480805745, ಹೊಸಪೇಟೆಯ ಡಿ.ಎಸ್.ಪಿ. ಕಚೇರಿಯ ದೂ.ಸಂ: 08394-224204, ಬಳ್ಳಾರಿಯ ಎಸ್.ಪಿ ಕಚೇರಿಯ ದೂ.ಸಂ: 08392-258400, ವಿಜಯನಗರ ಎಸ್.ಪಿ. ಮೊ.ಸಂ: 9480805701ಗೆ ಸಂಪರ್ಕಿಸಲು ಅವರು ಕೋರಿದ್ದಾರೆ.
*-*-*