ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಸಾಧನೆ
ಜಮಖಂಡಿ 23: ನಗರದ ಜ್ಞಾನ ಗಂಗೋತ್ರಿ ಪದವಿಪೂರ್ವ ಕಾಲೇಜು ಸಂಸ್ಥೆಯ ದ್ವಿತಿಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಮಾರ್ಚ್ 2023ರಲ್ಲಿ ಜರುಗಿದ್ದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಿರ್ಣಗೊಂಡು ಉತ್ತಮ ಫಲಿತಾಂಶ ನೀಡಿದ್ದಾರೆ ಎಂದು ಪ್ರಾಚಾರ್ಯರು ಚಂದ್ರಶೇಖರ ಆಶಿ ತಿಳಿಸಿದ್ದಾರೆ.
ವಿಜ್ಞಾನ ವಿಭಾಗದ ಸಿದ್ದಾರೂಢ ಬಂಡಿನವರ ಕಾಲೇಜಿಗೆ ಪ್ರಥಮ 576 (ಶೇ 96) ಜೀವಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯಕ್ಕೆ 100, ಶಾಂಭವಿ ಪಾಯನ್ನವರ ಕಾಲೇಜಿಗೆ ದ್ವೀತಿಯ 554(ಶೇ 92.53) ಗಣಿತ ವಿಷಯಕ್ಕೆ 100, ಭಾಗ್ಯಶ್ರಿ ಗುಮಟಿ ಕಾಲೇಜಿಗೆ ತೃತಿಯ 542 (ಶೇ 90.33), ಸೇರಿದಂತೆ 8 ಜನ ವಿದ್ಯಾರ್ಥಿಗಳು ಡಿಸ್ಟಿಂಕಶನ್ನಲ್ಲಿ ಹಾಗೂ 11 ಜನ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಅತ್ಯುತ್ತಮ ಫಲಿತಾಂಶ ನೀಡಿದ ವಿದ್ಯಾರ್ಥಿಗಳ ಸಾಧನೆಗೆ ಪ್ರಾಚಾರ್ಯರು ಚಂದ್ರಶೇಖರ ಆಶಿ, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.