ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸಾಧನೆ: ವಿದ್ಯಾಥಿಗಳಿಗೆ ಸನ್ಮಾನ
ಲೋಕದರ್ಶನ ವರದಿ,
ಜಮಖಂಡಿ 15: ನಗರದ ಡಾ.ಎಪಿಜೆ ಅಬ್ದುಲ ಕಲಾಂ ಶಾಲೆಯ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದಕ್ಕೆ ವಿಶೇಷ ಸನ್ಮಾನ ಕಾರ್ಯಕ್ರಮ ನಡೆಯಿತು. ಶಾಲೆಯ ಇಬ್ಬರೂ ವಿದ್ಯಾರ್ಥಿಗಳು ಉನ್ನತ ಶ್ರೇಣೆಯಲ್ಲಿ ಪಾಸಾಗಿದ್ದು, 10 ಪ್ರಥಮ ಶ್ರೇಣಿ ಸೇರಿದಂತೆ 100 ಕ್ಕೆ 100 ಪಲಿತಾಂಶ ಪ್ರಕಟವಾಗಿದೆಂದು ಸಮೀರ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಅಧ್ಯಕ್ಷ ಸಮೀರ್ ಕಂಗನೊಳ್ಳಿ ತಿಳಿಸಿದರು.
ನಂತರ ಮಾತನಾಡಿದ ಅವರು, ಪ್ರತಿಯೊಬ್ಬ ವಿದ್ಯಾರ್ಥಿ ತನ್ನ ಜೀವನದಲ್ಲಿ ಗುರಿ ಮತ್ತು ಗುರುಗಳನ್ನು ಹೊಂದಿರಬೇಕು. ಅದರಿಂದ ಏನನ್ನಾದರೂ ಸಾಧಿಸಬಲ್ಲರು. ತಮ್ಮ ಜೀವನದ ಮೊದಲ ಘಟ್ಟ ದಾಟಿ ಮುಂದಿನ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಬೇಕು. ತಂದೆ-ತಾಯಿಗಳು ತುಂಬಾ ಶ್ರಮಜೀವಿಗಳು ಅವರೇ ಮೊದಲ ಗುರು ಅವರನ್ನು ಮರೆಯಬಾರದು. ಅಮ್ಮಂದಿರ ದಿನದಂದು ವಿಶೇಷವಾಗಿ ಮುಂದಿನ ವರ್ಷ ಅತಿ ಕಡುಬಡತನದಲ್ಲಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪೂರ್ತಿ ಉಚಿತ ಶಿಕ್ಷಣ ನೀಡುವುದಾಗಿ ಘೋಷಣೆ ಮಾಡಿದರು.
ಅತಿಥಿಗಳಾಗಿದ್ದ ಹಿರಿಯ ಪತ್ರಕರ್ತ ಗುರುರಾಜ ವಾಳ್ವೇಕರ ಮಾತನಾಡಿ, ವಿದ್ಯಾರ್ಥಿ ಗಳು ಯಾರ ಒತ್ತಡಕ್ಕೂ ಮಣಿಯದೆ ತಮ್ಮಗೆ ಇಷ್ಟವಿರುವ ಕೋರ್ಸ್ ಆಯ್ದುಕೊಳ್ಳಿ. ನಿಮ್ಮ ಗುರುಗಳಿಗೆ ಗೌರವ ನೀಡಿ, ಪಾಲಕರ ಮಾತನ್ನು ಕೇಳಿ ಅನುಸರಿಸಿ, ಚೆನ್ನಾಗಿ ಕಲಿತು ಒಳ್ಳೆಯ ನಾಗರೀಕರಾಗಿ ಜೀವನ ಸಾಗಿಸಬೇಕು. ಪತ್ರಕರ್ತರು ಕೂಡಾ ಸಮಾಜದಲ್ಲಿನ ಪ್ರತಿಭಾವಂತ ಬಡಮಕ್ಕಳ ಕಷ್ಟಗಳಿಗೆ ಸಹಾಯ-ಸಹಕಾರ ನೀಡಲು ಸಿದ್ದವಿದ್ದು, ತಮ್ಮ ತಾಯಿ ಸ್ಮರಣಾರ್ಥವಾಗಿ ಇನ್ನೂ ಮುಂದೆ ಈ ಶಾಲೆಯಲ್ಲಿ ಪ್ರಥಮ ಬರುವ ವಿದ್ಯಾರ್ಥಿಗೆ ಕಿರು ಕಾಣಿಕೆಯಾಗಿ 2 ಸಾವಿರ ರು, ನೀಡುವುದಾಗಿ ತಿಳಿಸಿದರು.
ತಾಯಂದಿರ ದಿನದ ನಿಮಿತ್ತ ವಿದ್ಯಾರ್ಥಿಗಳ ತಾಯಂದಿರಿಗೆ ಇದೇ ಸಂದರ್ಭದಲ್ಲಿ ಸನ್ಮಾನ ಮಾಡಿ ಗೌರವಿಸಲಾಯಿತು. ಪ್ರಾಚಾಯರ್ು ಶಿರಿನ್ ಪಠಾಣ, ದಿ ಬೆಸ್ಟ್ ಪಿಯು ಕಾಲೇಜಿನ ನಾಗ್ರೇಂದ್ರ, ಯಾಸೀನ ಬಿಸ್ತಿ, ಸಲೀಂ ತಾಂಬೋಳೆ, ಆರ್.ಎಫ್.ಝೆಂಡೆ ವಿದ್ಯಾರ್ಥಿನಿಯರಾದ ಅಮಿನಾ ಮೇಗೇರಿ, ಆಲಿನಾ ಝೇಂಡೆ, ಝೀಯಾ ವಾಲೀಕಾರ ಇನ್ನಿತರರು ಮಾತನಾಡಿದರು. ಸಂಸ್ಥೆಯ ಭೋಜಗಾರ, ರುಕ್ಮಾನ ಮುಫ್ತಿ, ಸಂಜೀವ ಹಿರೇಮಠ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು. ಆಶೀಫ್ ಅತ್ತಾರ ಸ್ವಾಗತಿಸಿದರು. ಶ್ರೀಶೈಲ್ ಕಡಗದ ನಿರೂಪಿಸಿದರು. ಅಶೋಕ ಶಿರೋನಿ ವಂದಿಸಿದರು.