ಅಥಣಿ

ಲಸಿಕೆ ಹಾಕಿಸಿಕೊಳ್ಳುವ ಅರಿವು ಜನರಲ್ಲಿ ಬರಬೇಕು: ಡಾ.ಸಿ.ಎಸ್.ಪಾಟೀಲ

ಲಸಿಕೆ ಹಾಕಿಸಿಕೊಳ್ಳುವ ಅರಿವು ಜನರಲ್ಲಿ ಬರಬೇಕು: ಡಾ.ಸಿ.ಎಸ್.ಪಾಟೀಲ
ಖಾಸಗಿ ಆಸ್ಪತ್ರೆಯ ಕೋವಿಡ್ ಲಸಿಕಾ ಕೆಂದ್ರವನ್ನು ಉದ್ಘಾಟನೆಗೊಳಿಸುತ್ತಿರುವ ಗಣ್ಯರು

ಅಥಣಿ 19: ಪೋಲಿಯೊದಂತಹ ರೋಗಗಳಿಗೂ ಸಹ ಇವರೆಗೂ ನಾವು ಮನಗೆ ಹೋಗಿ ನಾವು ಲಸಿಕೆ ವಿತರಣೆ ಮಾಡುವ ಪರಿಸ್ಥಿತಿ ಇದೆ, ಅಂದರೆ ಇವರೆಗೂ ಕೋರೊನಾದಂತಹ ರೋಗಗಳಿಗೂ ಮನೆಗೆ ಹೋಗಿ ಲಸಿಕೆ ವಿತರಣೆ ಮಾಡುವ ಬದಲು ತಾವೇ ಬಂದು ಲಸಿಕೆ ಹಾಕಿಸಿಕೊಳ್ಳುವ ಅರಿವು ಜನರಲ್ಲಿ ಬರಬೇಕು ಅಂದಾಗ ಮಾತ್ರ ಕೋರೋನಾ ರೋಗವನ್ನು ತಡಗಟ್ಟಲೂ ಸಾಧ್ಯವಾಗುತ್ತದೆ ಎಂದು ತಾಲೂಕಾ ಮುಖ್ಯ ವೈಧ್ಯಾಧಿಕಾರಿ ಸಿ ಎಸ್ ಪಾಟೀಲ ಹೇಳಿದರು.

ಸ್ಥಳೀಯ ಅನ್ನಪೂರ್ಣ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಆರೋಗ್ಯ ದಾಸೋಹ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. 

ನಮ್ಮಲ್ಲಿರುವ ಸರಕಾರಿ ಆಸ್ಪತ್ರೆಗಳನ್ನು ವ್ಯವಸ್ಥಿತವಾಗಿ ಕೊರೋನಾ ವಿರುದ್ಧ ಹೋರಾಡಲು ಸಜ್ಜುಗೊಳಿಸುವುದಕ್ಕಾಗಿ ಹಾಗೂ ಕೊರೋನಾ ನಿಗ್ರಹಕ್ಕಾಗಿ ಲಾಕಡೌನ್ ಮಾಡಲಾಗಿದ್ದು ನಂತರ ಡಬ್ಲೂ ಹೆಚ್ ಒ ಅವರಿಂದ ಅಧಿಕೃತವಾಗಿ ಕೊರೋನಾ ಔಷಧಿ ಬಗೆಗೆ ಘೋಷಣೆಯಾದ ಬಳಿಕ ಸಾಮಾನ್ಯ ಜನರು ಎಚ್ಚೆತ್ತುಕೊಂಡಿದ್ದಾರೆ ಎಂದರು.

ಕೊರೋನಾ ಎರಡನೇ ಅಲೆ ಮತ್ತೆ ಬಂದಿದ್ದು ಎಲ್ಲರು ಮುಂಜಾಗೃತಾ ಕ್ರಮಗಳನ್ನು ಕೈಗೊಂಡು ಕೊರೋನಾ ವಿರುದ್ಧ ಸಮರ ಸಾರಲು ಸರಕಾರವೇ ಬೇಕಿದೆ ಅದಲ್ಲದೆ ಎಲ್ಲ ಸರಕಾರೇತರ, ಪತ್ರಕರ್ತರು ಹಾಗೂ ಸಾರ್ವಜನಿಕರೆಲ್ಲರು ಸೇರಿ ಕೊರೋನಾ ಮೆಟ್ಟಿ ನಿಲ್ಲಬೇಕಾಗಿದೆ 

ಡಾ ರವಿ ಪಾಂಗಿ ಅವರು ಈ ನಮ್ಮ ಆಸ್ಪತ್ರೆಯಲ್ಲಿ ಬಡವರಿಗಾಗಿ ಸುಮಾರು 250 ರೂಪಾಯಿಯಲ್ಲಿ ಕೊರೋನಾ ಲಸಿಕೆಯನ್ನು ನೀಡಲಾಗುತ್ತಿದ್ದು ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು ಹಾಗೂ ನಮ್ಮ ಆಸ್ಪತ್ರೆಯಲ್ಲಿ ಆಯುಷ್ಮಾನ ಭಾರತ ಯೋಜನೆಯ ಕಾರ್ಡ ಹೊಂದಿರುವ ಸುಮಾರು 15 ಜನ ಬಡವರಿಗೆ ಹಾಸಿಗೆಗಳನ್ನು ಕಾಯ್ದಿರಿಸಲಾಗಿದ್ದು ಅದರಲ್ಲಿ 05 ಹಾಸಿಗೆಗಳನ್ನು ಕ್ಲಿಷ್ಟಕರ ವೈದ್ಯಕೀಯ ಸಮಸ್ಯೆಗಳಾದ ಕೃತಕ ಉಸಿರಾಟ ಹಾಗೂ ಡಯಾಲಿಸಿಸ ಒಳಗೊಂಡ ಐಸಿಯುನಲ್ಲಿ ಕಾಯ್ದಿರಿಸಲಾಗಿದೆ ಇನ್ನುಳಿದ 10 ಹಾಸಿಗೆಗಳನ್ನು ಸಾಮಾನ್ಯ ಹಾಗೂ ಇನ್ನುಳಿದ ಕ್ಲಿಷ್ಟಕರವಲ್ಲದ ರೋಗಗಳಿಗೆ ಕಾಯ್ದಿರಿಸಿದ್ದು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಿ ಎಂದರು.

ಅನಂತರ ಡಾ ಎ ಎ ಪಾಂಗಿ,ತಾಲೂಕಾ ವೈದ್ಯಾಧಿಕಾರಿ ಡಾ ಬಸನಗೌಡ ಕಾಗೆ, ಪುರಸಭೆ ಮುಖ್ಯಧಿಕಾರಿ ಮಹಾಂತೇಶ ಕವಲಾಪೂರೆ ಅವರು ಮಾತನಾಡಿದರು. ಈ ವೇಳೆ ಡಾ ಬಾಹುಬಲಿ ಅಸ್ಕಿ, ಡಾ ಅರುಣಾ ಅಸ್ಕಿ, ಡಾ ದೀಪಾ ಪಾಂಗಿ, ಡಾ ಅನೀಲ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸುದ್ದಿ ಓದಿ