ಸುತ್ತಮುತ್ತಲ ಪರಿಸರಿದ ಸ್ವಚ್ಚತೆಯಿಂದ ಮನಸ್ಸಿಗೆ ನೆಮ್ಮದಿ: ಪಿಎಸ್‌ಐ ಮಹೇಶ ಸಂಕ
ಜಮಖಂಡಿ 06: ಸುತ್ತಮುತ್ತಲು ಇರುವ ಪರಿಸರಿವನ್ನು ಸ್ವಚ್ಚತೆಯಿಂದ ಕಾಪಾಡಿಕೊಂಡರೆ ಮನಸಿಗೆ ನೆಮ್ಮದಿಯು ದೊರೆಯುತ್ತದೆ. ಸರಕಾರಿ ಕಚೇರಿಗಳು ನಮ್ಮ ಮನೆಯಿಂದ್ದಂತೆ. ಅದನ್ನು ಸ್ವಚ್ಚತೆಯಿಂದ ಕಾಪಾಡಿಕೊಳ್ಳುವದು ನಮ್ಮ ಕರ್ತವ್ಯವಾಗಿದೆಂದು ಗ್ರಾಮೀಣ ಠಾಣಿಯ ಪಿಎಸ್‌ಐ ಮಹೇಶ ಸಂಕ ಹೇಳಿದರು.
ನಗರದ ಗ್ರಾಮೀಣ ಠಾಣಿಯ ಕಚೇರಿ ಆವರಣವನದಲ್ಲಿ ಬಿದ್ದಿರುವ ಕಸ, ಕಡ್ಡಿಯನ್ನು ಗೂಡಿಸುವ ಮೂಲಕ ಮೈದಾನವನ್ನು ಸ್ವಚ್ಚತೆಗೊಳಿಸಿದ ನಂತರ ಮಾಧ್ಯವರ ಮುಂದೆ ಮಾತನಾಡಿದರು.
ಪ್ರತಿ ಸೋಮವಾರ ಹಾಗೂ ಶುಕ್ರವಾರ ವಾರದಲ್ಲಿ ಎರಡು ದಿವಸದಲ್ಲಿ ಕಚೇರಿಯಲ್ಲಿ ಇರುವ ಧೂಳು ಮತ್ತು ಜೀಡವನ್ನು ಬಿಡಿಸಿ. ಕಿಡಕಿಯ ಗ್ಲಾಸ್‌ಗಳನ್ನು ಸ್ವಚ್ಚಗೊಳಿಸಿವ ಜೊತೆಗೆ ಮೈದಾನವನ್ನು ಸಹ ಸ್ವಚ್ಚಗೊಳಿಸಲಾಗುತ್ತದೆ. ಗಿಡ, ಮರಗಳಿಂದ ಬಿದ್ದಿರುವ ಎಲೆಗಳು, ಕಸವನ್ನು ನಮ್ಮ ಪೋಲಿಸ್ ಸಿಬ್ಬಂದಿಗಳು ಸೇರಿಕೊಂಡು ಸ್ವಚ್ಚತೆಯನ್ನು ಕಾಪಾಡಿಕೊಳ್ಳುತ್ತೇವೆ. ಕಚೇರಿ ಎಂದರೆ ನಮ್ಮ ಮನೆ ಇದಂತೆ. ಅದನ್ನು ಸ್ವಚ್ಚವಾಗಿ ಕಾಪಾಡಿಕೊಳ್ಳುವದು ನಮ್ಮಲ್ಲೆರ ಕರ್ತವ್ಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಅನೀಲ ಚವ್ಹಾನ, ಎಸ್.ಎಸ್.ನಾಯಕ, ಬಿ.ಬಿ.ವನಜೋಳ, ಸಿ.ಎಂ.ಕುಂಬಾರ, ಪಿ.ಎಮ್.ಕಾಜಗಾರ, ಎಸ್.ಬಿ.ಸಾಲಮನಿ, ಆನಂದ ಮಾಳಿ, ಎಸ್.ಬಿ.ಹೂಗಾರ, ಪಿ.ಎಮ್.ನಡುಗಡ್ಡೆ, ಪಿ.ಬಿ.ಕುಸನಾಳ ಸೇರಿದಂತೆ ಅನೇಕ ಪೋಲಿಸ್ ಸಿಬ್ಬಂದಿಗಳು ಇದ್ದರು.