ಇಂಡಿ

ಹೋಳಿ ಹಬ್ಬದ ಪ್ರಯುಕ್ತ ಶಾಂತಿ ಸಭೆ

ಹೋಳಿ ಹಬ್ಬದ ಪ್ರಯುಕ್ತ ಶಾಂತಿ ಸಭೆ
ಇಂಡಿ: ಪಟ್ಟಣದ ಪೋಲಿಸ್ ಠಾಣೆಯಲ್ಲಿ ಹೋಳಿ ಹಬ್ಬದ ಪ್ರಯುಕ್ತ ನಡೆದ ಶಾಂತಿ ಸಭೆಯಲ್ಲಿ ಡಿ.ವೈ.ಎಸ್‌.ಪಿ ಶ್ರೀದರ ದೊಡ್ಡಿ ಮಾ

ಇಂಡಿ: ತಾಲೂಕಿನಲ್ಲಿ ಹೋಳಿ ಹಬ್ಬದ ನಿಮಿತ್ಯ ಮಾ. 18, 19 ಮತ್ತು 22 ರಂದು ಮದ್ಯ ಮಾರಾಟ ನಿಷೇಧ ಮತ್ತು ಸಾಗಾಣಿಕೆ ಮಾಡದಂತೆ ಹಾಗೂ ಅಂಗಡಿಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿಗಳು ನಿಷೇಧಾಜ್ಞೆ ಹೊರಡಿಸಿ ಆದೇಶಿಸಿದ್ದಾರೆ ಎಂದು ಡಿಎಸ್‌ಪಿ ಶ್ರೀಧರ ದೊಡ್ಡಿ ಹೇಳಿದರು. 

 ಮಂಗಳವಾರ ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಹೋಳಿ ಹಬ್ಬದ ಪ್ರಯುಕ್ತ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದರು. 

ಅಹಿತಕರ ಘಟನೆಗಳು ನಡೆಯದಂತೆ ಹಬ್ಬಗಳು ಶಾಂತ ರೀತಿಯಿಂದ ನಡೆಯುವ ಸಲುವಾಗಿ ಹಾಗೂ ಪೊಲೀಸ ಬಂದೋಬಸ್ತ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ನೆರವೇರಿಸಿ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಪಾಲನೆಗಾಗಿ ಮತ್ತು ಸಾರ್ವಜನಿಕರು ಹಿತಾಶಕ್ತಿ ಕಾಪಾಡುವ ಹಿತದೃಷ್ಟಿಯಿಂದ ತಾಲೂಕು ವ್ಯಾಪ್ತಿಯಲ್ಲಿ ಮದ್ಯದ ಅಂಗಡಿ, ಬಾರ್ ರೆಸ್ಟೊರೆಂಟ್ ಮತ್ತು ಇತರೆ ಸ್ಥಳಗಳಲ್ಲಿ ಮದ್ಯ ಮಾರಾಟ ಮಾಡದಂತೆ ಆದೇಶಿಸಿದೆ ಎಂದು ತಿಳಿಸಿದರು. 

ಸಿ.ಪಿ.ಆಯ್ ಭೀಮನಗೌಡ ಬಿರಾದಾರ ಮಾತನಾಡಿ ಹೋಳಿ ಹಬ್ಬದಲ್ಲಿ ಎಲ್ಲರೂ ಸಾಮರಸ್ಯೆದಿಂದ ಕೂಡಿ ಇರಬೇಕು. ಯಾವುದೇ ಕಾರಣಕ್ಕೂ ಗದ್ದಲ ಸೃಷ್ಠಿಯಾಗಬಾರದು, ಅಹಿತಕರ ಘಟನೆ ನಡೆಯಬಾರದು. ಬಣ್ಣ ಆಡಲು ಇಷ್ಟವಿಲ್ಲದವರಿಗೆ, ಬಣ್ಣ ಹಚ್ಚುವ ಕಾರ್ಯಕ್ಕೆ ಮುಂದಾಗಬಾರದು. ಎಲ್ಲರೂ ಸಾಮರಸ್ಯೆ ಕಾಪಾಡಬೇಕು ಎಂದರು. 

ಬಿಜೆಪಿ ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ಕಾಸುಗೌಡ ಬಿರಾದಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಲಿಯಾಸ ಬೋರಾಮಣಿ, ಜಟ್ಟೆಪ್ಪ ರವಳಿ, ಬುದ್ದುಗೌಡ ಪಾಟೀಲ, ಜಗದೀಶ ಕ್ಷತ್ರಿ, ಅನೀಲಗೌಡ ಬಿರಾದಾರ, ಪಾಂಡು ರಾಠೋಡ ಸೇರಿದಂತೆ ಅನೇಕರು ಶಾಂತಿ ರೀತಿಯಿಂದ ಆಚರಿಸುವದಾಗಿ ಮಾತನಾಡಿದರು.   

ಪುರಸಭೆ ಸದಸ್ಯ ಅಯೂಬ ಬಾಗವಾನ, ಲಿಂಬಾಜಿ ರಾಠೋಡ, ಜಾವೇದ ಮೋಮಿನ, ಪಾಪು ಕಿತ್ತಲಿ, ಪ್ರಕಾಶ ಬಿರಾದಾರ ಮತ್ತಿತರಿದ್ದರು. 

ಸುದ್ದಿ ಓದಿ