ಶ್ರೀರಾಮ ಮಂದಿರ ಸೇವಾ ಸಮಿತಿ ಅಧ್ಯಕ್ಷರಾಗಿ ಪಾಟೀಲ ಉಪಾಧ್ಯಕ್ಷರಾಗಿ ಶೆಟ್ಟಿ ಆಯ್ಕೆ
ಗೋಕಾಕ, ಮಾ. 3: ನಗರದ ರಾಮದೇವ ಗಲ್ಲಿ (ರವಿವಾರ ಪೇಠೆ)ಯಲ್ಲಿರುವ ಶ್ರೀರಾಮ ಮಂದಿರ ಸೇವಾ ಸಮಿತಿಗೆ ಪ್ರಸಕ್ತ 2024ನೇ ಸಾಲಿನಲ್ಲಿ ಸರ್ವ ಸದಸ್ಯರ ಒಮ್ಮತ್ತು ಮೇರೆಗೆ ನೂತನವಾಗಿ ಸಮಿತಿಗೆ ಅಧ್ಯಕ್ಷರಾಗಿ ವಿನಾಯಕ ಶಂಕರಗೌಡ ಪಾಟೀಲ ಹಾಗೂ ಉಪಾಧ್ಯಕ್ಷರಾಗಿ ಕಿಶೋರ ಎಸ್. ಶೆಟ್ಟಿ (ಭಟ್ಟ) ಅವರನ್ನು ಆಯ್ಕೆಮಾಡಲಾಗಿದೆ. ನಗರದಲ್ಲಿ ರಾಮ ಮಂದಿರದಲ್ಲಿ ದಿ. ಮಾ. 1ರಂದು ನಡೆದ ಸಭೆಯಲ್ಲಿ ಭಾಗವಹಿಸಿದ ಅಶೋಕ ಪೂಜೇರಿ ಮತ್ತು ಲಖನ್ ಜಾರಕಿಹೊಳಿ ಸಹೋದರರ ಮಾರ್ಗದರ್ಶನದಲ್ಲಿ ನಡೆದ ಸಭೆಯಲ್ಲಿ ಅಶೋಕ ಪಾಟೀಲ, ಕೆ. ಡಿ. ಕಲಾಲ, ತಾನಾಜಿ ಗೋಸಾರಿ, ವಿಶಾಲ ಮಾಲಪಾನಿ, ಸುಭಾಸ ಪವಾರ, ಅನೇಕ ಗುರುಹಿರಿಯರ ಸಲಹೆ ಮೇರಿಗೆ ಸದಸ್ಯರನ್ನು ಆಯ್ಕೆಮಾಡಲಾಗಿದೆ.
ಸಮಿತಿಯ ಖಜಾಂಚಿಯಾಗಿ ನೂತನ ವಿನಾಯಕ ಚಿಪ್ಪಲಕಟ್ಟಿ, ಸುರೇಶ ಪತ್ತಾರ, ಪ್ರಶಾಂತ ಡೋಂಗರೆ, ರಾಜಕುಮಾರ ಕಿಶನಲಾಲ ಝವಂರ, ನಿರ್ಮಲ ರಾಠೋಡ, ರಾಕೇಶ ಬೊಂಗಾಳೆ, ದೀಪಕ ಎಮ್. ಮೆಳವಂಕಿ ಅವರನ್ನು ಸದಸ್ಯರನ್ನಾಗಿ ಕರೆದ ಸಭೆಯಲ್ಲಿ ಆಯ್ಕೆಮಾಡಿದ್ದಾರೆಂದು ಸಮಿತಿಯವರು ತಿಳಿಸಿದ್ದಾರೆ.