ಪಾಲಕರು ಮಕ್ಕಳಿಗೆ ಅಭ್ಯಾಸವನ್ನು ಹೇಳುವದು ಬಹಳ ಮುಖ್ಯ: ಸಚಿವ ತಿಮ್ಮಾಪೂರ
ಲೋಕದರ್ಶನ ವರ
ಜಮಖಂಡಿ26: ಮನೆಯಲ್ಲಿ ಪಾಲಕರು ಮಕ್ಕಳಿಗೆ ಅಭ್ಯಾಸವನ್ನು ಹೇಳುವದು ಬಹಳ ಮುಖ್ಯವಾಗಿದೆ. ಕೇವಲ ಶಿಕ್ಷಕರ ಮೇಲೆ ಹೊರೆ ಹಾಕಬಾರದು. ಹರಟೆ ಕಟ್ಟೆಯ ಮೇಲೆ ಕುಳಿತು ಪ್ರಧಾನಿ ಮೋದಿ, ಮನಮೋಹನಸಿಂಗ್, ಸಿದ್ರರಾಮಯ್ಯ, ಯಡ್ಡಿಯೂರಪ್ಪ ಹೀಗೆ ರಾಜಕಾರಣಿಗಳ ಬಗ್ಗೆ ಹರಟೆ ಹೊಡೆಯುವದು ಬಿಟ್ಟು ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕೆಂದು ಅಬಕಾರಿ ಮತ್ತು ಜಿಲ್ಲಾಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.
ತಾಲೂಕಿನ ಶೂರ್ಪಾಲಿ ಗ್ರಾಮದ ಸರಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆಯ 150ನೇ ಶತಮಾನೋತ್ತರ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದ ರಾಜಕಾರಣದ ನಾಯಕರ ಬಗ್ಗೆ ಎಲ್ಲರು ಚಿಂತನೆ ಮಾಡುತ್ತಿರಿ ನಿಮ್ಮ ಮಕ್ಕಳ ಭವಿಷ್ಯ ಮತ್ತು ಶಿಕ್ಷಣದ ಬಗ್ಗೆ ಎಷ್ಟು ಸಮಯ ಕಳೆದಿದ್ದಿರಿ ಎಂದು ಹೇಳಿ ಸಭೆಯಲ್ಲಿ ಸಭಿಕರ ಕೈ ಎತ್ತುವಂತೆ ಕೇಳಿದರು, ಶೂರ್ಪಾಲಿ ಗ್ರಾಮದವರು ಶಿಕ್ಷಣದ ಬಗ್ಗೆ ಅಪಾರ ಕಾಳಜಿಹೊಂದಿದ್ದಾರೆ. ಈ ಶಾಲೆಯಲ್ಲಿ ಕಲಿತ ಹಳೆ ವಿದ್ಯಾರ್ಥಿಗಳನ್ನು ಅಧಿಕಾರಿಗಳನ್ನು ಒಂದೆಡೆ ಸೇರಿಸಿ ಸಂಬ್ರಮಾಚರಣೆ ಮಾಡುತ್ತಿರುವದು ಸಂತೋಷದ ಸಂಗತಿ ಎಂದರು.
ಆಲಮಟ್ಟಿ 524ಮೀಟರ್ ಎತ್ತರವಾಗಬೇಕು, ನದಿ ತೀರದ ಸಂತ್ರಸ್ತರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುವಂತಾಗಿ ನಡು ನೀರಿನಲ್ಲಿರುವಂತಾಗಿದೆ, ಸರ್ಕಾರಗಳು ಮುಳುಗಡೆ ಪ್ರದೇಶಗಳ ಬಗ್ಗೆ ವಿಶೇಷ ಕಾಳಜಿವಹಿಸಬೇಕು ಸಂತ್ರಸ್ತರ ಸಂಕಷ್ಟ ಬಗ್ಗೆ ಸರ್ಕಾರದ ಗಮನಕ್ಕೆ ತರುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡುತ್ತೆನೆ ಎಂದರು.
ಕಲಿಸಿದ ಗುರುವಿನ ಕಳಕಳಿ, ಕರ್ತವ್ಯ ನಿರ್ವಹಿಸಿದ ಶಾಲೆಯ ಋಣ, ಅನ್ನ, ಮಣ್ಣಿನ ಋಣ ಎಂದೂ ಮರೆಯದೆ ಇರುವ ಶಿಕ್ಷಕರ ಸಂಸ್ಕೃತಿ ಹೀಗೆ ಮುಂದುವರೆಯಲಿ. ಶಾಲೆಯ ಅಭಿವೃದ್ಧಿಗಾಗಿ ನಾನು ಕೂಡಾ ಸಹಾಯಹಸ್ತ ನಿಡುತ್ತೇನೆ. ಇಲ್ಲಿನ ಯುವಕರ ಕಬಡ್ಡಿ ತಂಡದ ಜೊತೆ ಕಬಡ್ಡಿ ಆಟವಾಡಿದ್ದೇನೆ, ಇಲ್ಲಿಯ ಆಟಗಾರರು 2-3ಬಾರಿ ನಮ್ಮನ್ನು ಸೋಲಿಸಿರುವ ನೆನಪು ಅಚ್ಚಳಿಯದೆ ಉಳಿದಿದೆ ಎಂದರು.
ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ಪಟವರ್ಧನ ಸರಕಾರದ ಆಡಳಿತದಲ್ಲಿ ಶೂರ್ಪಾಲಿ ಈ ಶಾಲೆ ಎರಡನೇಯದಾಗಿ ಶಿಕ್ಷಣ ನೀಡುವದರಲ್ಲಿ ಮುಂದಾಗಿತ್ತು. ಇಲ್ಲಿಯ ಕೃಷ್ಣಾಚಾರ್ಯ ಗಲಗಲಿ ಅವರ ಮುಂದಾಲೋಚನೆಯಿಂದ ಈ ಗ್ರಾಮದಲ್ಲಿ ಶಾಲೆ ಪ್ರಾರಂಭಿಸಿ ಶಿಕ್ಷಣ ನೀಡುವ ಕಾರ್ಯ ಮಾಡಿರುವದು ಅವಿಶ್ಮರಣೀಯ. ದಿ.ಸಿದ್ದು ನ್ಯಾಮಗೌಡ ಅವರು, ನಾನು ಕೂಡಾ ಶಾಲೆಯ ಹಾಗೂ ಗ್ರಾಮದ ಅಭಿವೃದ್ಧಿಗೆ ಹೆಚ್ಚು ಆಸಕ್ತಿ ತೋರಿದ್ದೇವೆ. ಮುಳುಗಡೆ ಪ್ರದೇಶವಾದ ಹಿನ್ನೆಲೆಯಲ್ಲಿ ಸರಕಾರ ಈ ಪ್ರದೇಶಕ್ಕೆ ಅನುದಾನ ನೀಡುವಲ್ಲಿ ಹಿಂದೇಟು ಹಾಕುತ್ತಿದೆ. ಆದ್ದರಿಂದ ಇಲ್ಲಿಯ ಶೈಕ್ಷಣಿಕ, ಗ್ರಾಮದ ಹಿತದೃಷ್ಠಿಯಿಂದ ಸ್ಥಳಾಂತರವಾಗಬೇಕು, ಶಾಶ್ವತ ಕಟ್ಟಡ ನಿಮರ್ಾಣವಾಗಬೇಕು. ಇದಕ್ಕೆ ನಾನು ಮತ್ತು ಶಾಸಕ ಗುಡಗುಂಟಿ ಅವರು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು.
ವಿಪ ಸದಸ್ಯ ಪ್ರಕಾಶ ಹುಕ್ಕೇರಿ ಅವರು ಶಾಲಾ ಅಭಿವೃದ್ಧಿಗೆ 5ಲಕ್ಷ ಅನುದಾನು ನೀಡುವ ಭರವಸೆ ಕೊಟ್ಟಿದ್ದಾರೆ ಎಂದರು.
ಶಾಸಕ ಜಗದೀಶ ಗುಡಗುಂಟಿ ಮಾತನಾಡಿ, ಸಂಸ್ಕಾರ ಕೊಡುವ ವಿಚಾರ, ಶಿಕ್ಷಣ, ಮನೆ, ತಾಯಿ, ಮಠ ಮಆನ್ಯರ ವಾಣಿಯು ನಮ್ಮ ಜೀವನಕ್ಕೆ ಸ್ಪೂತರ್ಿದಾಯಕಗಳಾಗಿವೆ. ವಿದ್ಯಾರ್ಥಿ ಯ ಸವಾರ್ಂಗೀಣ ಅಭಿವೃದ್ಧಿಗೆ ಶಿಕ್ಷಕರ ಪಾತ್ರ ಭಹುಮುಖ್ಯವಾಗಿದೆ. ಗುರುವಿಗೆ ವಿಶೇಷ ಸ್ಥಾನಮಾನವಿದೆ. ಅವರನ್ನು ಗೌರವಿಸುವ ಸಂಸ್ಕೃತಿ ಮಕ್ಕಳಲ್ಲಿ ರೂಢಿಸಬೇಕಾಗಿದೆ. ಮುಳಿಗಡೆ ಪ್ರದೇಶವಾಗಿದ್ದರಿಂದ ಈ ಗ್ರಾಮ ಸೌಲಭ್ಯಗಳಿಂದ ವಂಚಿತವಾಗುತ್ತಿದೆ ಆದ್ದರಿಂದ ಪುನರ್ವಸತಿ ಕೇಂದ್ರದ 3ಎಕರೆ ನಿವೇಶನದಲ್ಲಿ ಸುಸಜ್ಜಿತ ಪ್ರಾಥಮಿಕ ಶಾಲಾ ಕಟ್ಟಡ ನಿಮರ್ಿಸುವ ಯೋಜನೆ ಹೊಂದಲಾಗಿದೆ ಎಂದರು.
ರಾಜ್ಯದಲ್ಲಿ ಬರಗಾಲ ಆವರಿಸಿದ ಹಿನ್ನೆಲೆಯಲ್ಲಿ ಬೇಸಿಗೆಯಲ್ಲಿ ನೀರಿನ ಅಭಾವ ಉಂಟಾಗಲಿರುವ ಹಿನ್ನೆಲೆಯಲ್ಲಿ ಚಿಕ್ಕಪಡಸಲಗಿ ಶ್ರಮಬಿಂದು ಸಾಗರಕ್ಕೆ ನೀರು ಎತ್ತಿಹಾಕುವ ಕಾರ್ಯಯೋಜನೆ ಪ್ರಾರಂಭಿಸಲು 10ಲಕ್ಷದ ಬದಲಾಗಿ 25ಲಕ್ಷ ರೂ. ನೀಡುವುದಾಗಿ ಮಾಜಿ ಶಾಸಕ ಆನಂದ ನ್ಯಾಮಗೌಡ ಅವರಿಗೆ ವೇದಿಕೆಯಲ್ಲಿ ಹೇಳಿದರು. ಗ್ರಾಮದ ಮಹಿಳೆಯರ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಸಣ್ಣ ಕೈಗಾರಿಕೆ ಮಾಡುವ ಯೋಜನೆ ಹಾಗೂ ಗ್ರಾಮದ ಯುವಕರಿಗಾಗಿ ಸುಸಜ್ಜಿತ ಕಬಡ್ಡಿ ಮೈದಾನ ನಿಮರ್ಾಣ ಮಾಡಲಾಗುವದು ಎಂದರು.
ರೈತ ಮುಖಂಡ ಬಿ.ಎಸ್.ಸಿಂಧೂರ ಮಾತನಾಡಿ, ಶಿಥಿಲಾವಸ್ಥೆಯಲ್ಲಿರುವ ಶಾಲೆಯ ಅಭಿವೃದ್ಧಿಗೆ ಸರಕಾರ ಅನುದಾನ ನೀಡಬೇಕು ಮತ್ತು ಶೂಪರ್ಾಲಿ, ತುಬಚಿ, ಜಂಬಗಿ ಕೆ.ಡಿ ಗ್ರಾಮದ ವಿದ್ಯಾರ್ಥಿಗಳು ಕಾಲೇಜು ಶಿಕ್ಷಣಕ್ಕಾಗಿ ಜಮಖಂಡಿಗೆ ಹೋಗಬೇಕಾದ ಅನಿವಾರ್ಯತೆವಿದೆ. ಆದ್ದರಿಂದ ಇಲ್ಲಿ ಪಿಯು ಕಾಲೇಜು ಹಾಗೂ ವಸತಿ ನಿಲಯ ಸ್ಥಾಪಿಸಿದರೆ ವಿದ್ಯಾಥರ್ಿಗಳಿಗೆ ಅನುಕೂಲು ಕಲ್ಪಿಸಿದಂತಾಗುತ್ತದೆ ಎಂದರು.
ತಾಳಿಕೋಟೆಯ ಖಾಸ್ಗತೇಶ್ವರ ಮಠದ ಸಿದ್ಧಲಿಂಗ ದೇವರು ಮಾತನಾಡಿ, ವಿದ್ಯಾರ್ಥಿಗಳು, ಯುವಕರು ಎಂದಿಗೂ ಉತ್ಸಾಹ ಕಡಿಮೆ ಮಾಡಿಕೊಳ್ಳಬಾರದು, ಇಂತಹ ಉತ್ಸಾಹ ತುಂಬಿದ ಶಾಲೆಯಲ್ಲಿ ಕಲಿತ ವಿದ್ಯಾಥರ್ಿಗಳು ಇಂದು ನಾಡಿನ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವದು ಹೆಮ್ಮೆಯ ಸಂಗತಿ ಎಂದರು.
ಒಂದು ಗುಡಿ ಕಟ್ಟಿಸಿದರೆ ಹಿಂದೂಳಿಗಾದರೆ, ಮಸೀದಿ ಕಟ್ಟಿಸಿದರೆ ಮುಸಲ್ಮಾನರಿಗಾದರೆ, ಒಂದು ಚರ್ಚ ಕಟ್ಟಿದರೆ ಕ್ರೈಸ್ತರಿಗಾದರೆ ಅದೆ ಒಂದು ಶಾಲೆ ಕಟ್ಟಿಸಿದರೆ ಜ್ಞಾನ ನಿಡುವ ದೇವಾಲಯವಾಗುವದು ಎಂದರು.
ಅಪ್ಪು ನಾಮಣ್ಣ, ಎಚ್.ಎಂ. ಉಸ್ತಾದ ಮಾತನಾಡಿದರು. ಇದೆ ಸಂದರ್ಭದಲ್ಲಿ ಜ್ಞಾನಾಮೃತ ಭಾಮ ಸ್ಮರಣ ಸಂಚಿಕೆಯನ್ನು ಸಚಿವರು, ಗಣ್ಯರು ಬಿಡುಗಡೆ ಗೊಳಿಸಿದರು.
ವಿವಿಧ ವಾದ್ಯಮೇಳದೊಂದಿಗೆ ಭವ್ಯವಾದ ಮೆರವಣಿಗೆಗೆ ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಶಾಲಾ ಮಕ್ಕಳು, ಶಿಕ್ಷಕರು, ಅಧಿಕಾರಿಗಳು, ಗ್ರಾಮಸ್ಥರು. ಕುಂಬಹೊತ್ತ ಮಹಿಳೆಯರು. ವಿವಿಧ ಬಗ್ಗೆಯ ಗೊಂಬೆಗಳ ಕುಣಿತಗಳಿಂದ ಪ್ರಮೂಕ ರಸ್ತೆಯ ಮೂಲಕ ಸಂಚರಿಸಲಾಯಿತು.
ವೇದಿಕೆಯಲ್ಲಿ ಡಿಎಸ್ಪಿ ಶಾಂತವೀರ ಈ, ತಹಶೀಲ್ದಾರ ಸದಾಶಿವ ಮಕ್ಕೋಜಿ, ತಾಪಂ ಇಒ ಸಂಜು ಜುನ್ನೂರ, ಬಿಆರ್ಸಿಒ ರಮೇಶ ಅವಟಿ, ಸಂತೋಷ ತಳಕೇರಿ, ಈಶ್ವರ ಕಂಕಣವಾಡಿ, ಸತ್ಯಪ್ಪ ನಾಟಿಕಾರ, ಗುರುರಾಜ ಕುಲಕರ್ಣಿ, ರಮೇಶ ಕಣಬೂರ, ರಾಮಣ್ಣ ಬಳೋಲ, ಸಂಗಪ್ಪ ಕುಂಚನೂರ, ಶ್ರೀಕಾಂತ ತುಬಚಿ, ಸುರೇಶಗೌಡ ಪಾಟೀಲ, ಪಾಸಗೌಡ ಪಾಟೀಲ, ರಾಮನಗೌಡ ಪಾಟೀಲ, ಪ್ರಕಾಶ ಕಣಬೂರ, ರಫೀಕ ಬಾರಿಗಡ್ಡಿ, ಈಶ್ವರ ಈ. ಇತರರು ಇದ್ದರು.
ಭಾರತಿ ಮದಿನವರ, ಪಿ.ಎಸ್.ಕಟ್ಟಿಮನಿ, ಮಲ್ಲು ನಾವಿ ವಚನಗಾಯನ ಮಾಡಿದರು, ಪ್ರೇಮಾ ಸೊಲ್ಲಾಪೂರ ಸಂಗಡಿಗರು ನಾಡಗೀತೆ ಹಾಡಿದರು, ಬಿಇಒ ಎ.ಕೆ. ಬಸನ್ನವರ ಸ್ವಾಗತಿಸಿದರು, ಶಿಕ್ಷಕ ನರಸಿಂಹ ಕಲ್ಲೋಳ್ಳಿ ಪ್ರಾಸ್ಥಾವಿಕವಾಗಿ ಮಾತನಾಡಿದರು, ಶಿಕ್ಷಕ ಚನಗಿರಿ ಹೊಸೂರ ನಿರೂಪಿಸಿದರು, ಸರಿತಾ ಶಿರಗುಪ್ಪಿ ವಂದಿಸಿದರು,
ಫೋಟೋ : ಎ, ಬಿ, ಸಿ, ಜಮಖಂಡಿ ತಾಲೂಕಿನ ಶೂಪರ್ಾಲಿ ಗ್ರಾಮದ ಸರಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆಯ 150ನೇ ಶತಮಾನೋತ್ತರ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಜಿಲ್ಲಾಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಉದ್ಘಾಟಿಸಿದರು