ದೊಡ್ಡಬಸವೇಶ್ವರ ದೇವಸ್ಥಾನದ ಪಲ್ಲಕ್ಕಿ ಉತ್ಸವ
ಜಮಖಂಡಿ 15: ತಾಲೂಕಿನ ಕಡಪಟ್ಟಿ ಗ್ರಾಮದ ಪುರಾತನ ಕಾಲದ ದೊಡ್ಡಬಸವೇಶ್ವರ ದೇವಸ್ಥಾನದ ಶ್ರಾವಣಮಾಸದ ಸೋಮವಾರ ರಾತ್ರಿ ಕಾಡಸಿದ್ದೇಶ್ವರ, ಜಂಬುಕೇಶ್ವರ ಪಲ್ಲಕ್ಕಿ ಅಗಮಿಸಿದ ನಂತರ ಮಂಗಳವಾರ ಮತ್ತು ಬುಧವಾರ ಪಲ್ಲಕ್ಕಿ ಉತ್ಸವ, ಗುರುವಾರ ಬೆಳಿಗ್ಗೆ 11 ಕ್ಕೆ ಬೆಳ್ಳಿಯ ಆಭರಣದ ರಥೋತ್ಸವ, ಸಂಜೆ 6 ಕ್ಕೆ ಬಂಗಾರದ ಅಭರಣದ ರಥೋತ್ಸವ ಜರುಗಿತು.
ವಿಶೇಷವಾಗಿ ರಥೋತ್ಸವವನ್ನು ಭಕ್ತರು ಹೊತ್ತುಕೊಂಡು ಹೋಗುವ ಮೂಲಕ ದೇವಸ್ಥಾನ ರಥೋತ್ಸವ ಗುರುವಾರ ನಡೆಯಿತು.