ಕಾಳಿಕಾದೇವಿಯ ಪಲ್ಲಕ್ಕಿ ಉತ್ಸವ: ವಿವಿಧ ವಾದ್ಯಮೇಳ ಕುಂಭಮೇಳದೂಂದಿಗೆ ಭವ್ಯ ಮೆರವಣಿಗೆ
ಘಟಪ್ರಭಾ 21: ಸ್ಥಳೀಯ ಕಾಳಿಕಾದೇವಿ ದೇವಸ್ಥಾನದ ತೇರಿನ ಜಾತ್ರಾ ಮಹೋತ್ಸವ ಹಾಗೂ 25ನೇ ವರ್ಷದ ರಜತ ಮಹೋತ್ಸವ ಕಾರ್ಯಕ್ರಮ ಸೋಮವಾರದಂದು ಅದ್ದೂರಿಯಾಗಿ ಜರುಗಿತು.
ಜಾತ್ರೆ ನಿಮಿತ್ತ ಕಾಳಿಕಾದೇವಿ ದೇವಸ್ಥಾನದಲ್ಲಿ ಮಹಾ ಗಣಪತಿ ಪ್ರಾರ್ಥನೆಯೊದಿಗೆ ದ್ವಜಾರೋಹಣ ಹಾಗೂ ಮಹಾ ರುದ್ರಾಭಿಷೇಕ ಶಿರಸಂಗಿಯ ಕಾಳಿಕಾದೇವಿ ಅರ್ಚಕರಾದ ಶ್ರೀಶೈಲ ಆಚಾರ್ಯ ಹಾಗೂ ಸ್ಥಳಿಯ ಕಾಳಿಕಾ ಮಂದಿರದ ಅರ್ಚಕರಾದ ಭಿಮಾಚಾರ್ಯ ಇವರ ನೇತೃತ್ವದಲ್ಲಿ ಗಣಪತಿ ಪೂಜೇ, ಪುಣ್ಯಾಹ ವಾಚನ, ದೇವತಾ ಫೂಜೆ, ಪಂಚಬ್ರಹ್ಮಹೋಮ, 1008 ಗಾಯತ್ರಿ ಹೋಮ ವಿಶ್ವಕರ್ಮ ವಟುಗಳಿಗೆ ಉಪನಯನ, ಗಾಯತ್ರಿ ಮಂತ್ರೋಪದೇಶ ಮಂಗಳಾರತಿ ಪ್ರಸಾದ ವಿತರಣೆ ನಡೆಯಿತು.
ಝಾಂಗಟಿಹಾಳ ಗ್ರಾಮದ ಯಾಲ್ಲಾಲಿಂಗ ಮಠದ ಚಂದ್ರಶೇಖರ ಮಹಾಸ್ವಾಮಿಗಳ ಇವರ ನೇತೃತ್ವದಲ್ಲಿ ಕಾಳೀಕಾದೇವಿ ಮಭಾವಚಿತ್ರದ ಮೆರವಣಿಗೆ ಹಾಗೂ ದೇವಿಯ ಪಲ್ಲಕ್ಕೋತ್ಸವ ವಿವಿದ ವಾದ್ಯಮೇಳ ಹಾಗೂ ಸುಮಂಗಲೆಯರ ಕುಂಭಮೇಳದೂಂದಿಗೆ ದೇವಸ್ಥಾನದಿಂದ ಹೊರಟು ಘಟಪ್ರಭಾ ಮುಖ್ಯ ರಸ್ತೆಯಲ್ಲಿ ಹಾಯ್ದು ಮೃತ್ಯುಂಜಯ ವೃತ್ತದ ವರೆಗೆ ಹೋಗಿ ಮರಳಿ ದೇವಸ್ಥಾನ ತಲುಪಿತು.
ಘಟಪ್ರಭಾ ಮುಜಿಕಲ್ ಗ್ರುಪ್ದ ಲಗಮಣ್ಣಾ ದೊಡಮನಿವರಿಂದ ಸಂಗೀತ ಸೇವೆ, ಧಾರ್ಮಿಕ ಚಿಂತನ ಗೋಷ್ಟಿ, ತೇರು ದಾನಿಗಳಾದ ಶ್ರೀಮತಿ ಸಾಂವಕ್ಕಾ ಬಸವಣ್ಣಿ ಮಳಗಲಿ,ತೇರು ತಯಾಕರಾದ ಕಾಳಪ್ಪ ಪತ್ತಾರ, ಕಾರ್ಮಿಕ ಮುಖಂಡರಾದ ಅಂಬಿರಾವ ಪಾಟೀಲ ಸೇರಿದಂತೆ ಅನೇಕ ಗಣ್ಯರಿಗೆ ಸತ್ಕಾರ ಸಮಾರಂಭ ಕಾರ್ಯಕ್ರ್ರಮ ಜರುಗಿತು.