ಜಮಖಂಡಿ

ಸಂಘ, ಸಂಸ್ಥೆಗಳು ಒಳ್ಳೆಯ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು: ಪಂಡಿತಾರಾಧ್ಯ ಶ್ರೀ

ಸಂಘ, ಸಂಸ್ಥೆಗಳು ಒಳ್ಳೆಯ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು: ಪಂಡಿತಾರಾಧ್ಯ ಶ್ರೀ

ಜಮಖಂಡಿ 06: ಸಂಘ, ಸಂಸ್ಥೆಗಳು ಒಳ್ಳೆಯ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು. ಸಂಘವನ್ನು ಕಟ್ಟಿ. ಉಳಿಸಿ. ಬೆಳಸಿಕೊಂಡು ಹೋಗುವದು ಬಹಳ ಕಷ್ಟದಾಯಕವಾಗಿದೆ. ಸಂಘವು ಸಮಾಜವಾಗಿ, ಧಾರ್ಮಿಕ ಜವಾಬ್ದಾರಿಯಿಂದ ಸೇವೆ ಮಾಡುವದು ಬಹಳ ಮುಖ್ಯವಾಗಿದೆ ಎಂದು ಮುತ್ತಿನಂತಿ ಹಿರೇಮಠದ ಶಿವಲಿಂಗ  ಪಂಡಿತಾರಾಧ್ಯ ಶ್ರೀಗಳು ಹೇಳಿದರು. 

ನಗರದ ಮುತ್ತಿನಕಂತಿ ಮಠದ ಸಭಾ ಭವನದಲ್ಲಿ ನಡೆದ ಸರಕಾರಿ ಕನ್ನಡ ಮಾದರಿ ಪ್ರಾಥಮಿಕ ನೂತನ ವಿದ್ಯಾಲಯದ 1991-97ನೇ ಹಳೆ ವಿದ್ಯಾರ್ಥಿಗಳ ಸ್ನೇಹ ಕುಟುಂಬ ಬಳಗದ ಸಹಯೋಗದಲ್ಲಿ 4ನೇ ವಾರ್ಷಿಕೋತ್ಸವದ ಸಂಭ್ರಮ ಹಾಗೂ ಶಿವಲಿಂಗ  ಪಂಡಿತಾರಾಧ್ಯ ಶ್ರೀಗಳು ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.  

ಪ್ರತಿವರ್ಷವು ಒಂದೊಂದು ಸಾಮಾಜಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಜೊತೆಗೆ ಸಂಘಟನೆಯಲ್ಲಿ ಇರುವ ಎಲ್ಲ ಸದಸ್ಯರು ಸೇರಿಕೊಂಡು ಪ್ರತಿ ತಿಂಗಳು ದುಡಿಯುವ ಸಂಬಳದಲ್ಲಿ ಎಲ್ಲರು ಅಲ್ಪ,ಸ್ವಲ್ಪ ಹಣವನ್ನು ಸಂಗ್ರಹಿಸಿ. ಸಾಮಾಜಿಕ ಮತ್ತು ಧಾರ್ಮಿಕ ಕೆಲಸವನ್ನು ಮಾಡಲಾಗುತ್ತದೆ. ಅದೇ ದಿನದಂದು ನನ್ನ ಸ್ನೇಹಿತರು ಜನ್ಮ ದಿನಾಚರಣಿಯನ್ನು ಆಚರಿಸುತ್ತಾರೆ. ಸ್ನೇಹ ಕುಟುಂಬ ಒಂದು ನಮ್ಮ ಮನೆಯ ಕುಟುಂಬವಾಗಿದೆ. ಅಂದು ವಿವಿಧ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ. ಕಾಶಿ ಮಹಾವಿದ್ಯಾಲಯ ಶಿಕ್ಷಣವು ದೊರೆಬೇಕಾಗಿರುವದು ಜಮಖಂಡಿ ಮಠದಲ್ಲಿ ದೊರಕಿದೆ. ಈ ಮಠದಲ್ಲಿ ಜಾತಿ, ಮತ, ಪಂಥ ಇಲ್ಲದೆ ಎಲ್ಲರೂ ಒಂದೇ ಕುಟುಂಬದ ಮಠವಾಗಿದೆ. ಜೀವನದಲ್ಲಿ ಬದುಕುವುದು ಕಲೆಯುವದು, ಮಾನವಿತೆಯಿಂದ ಇರುವದು ಬಹಳ ಮುಖ್ಯವಾಗಿದೆ ಎಂದರು.  

ಸರ್ವೋದಯ ಶಿಕ್ಷಣ ಶಾಲೆಯ ಮುಖ ಮತ್ತು ಕಿವುಡ ಮಕ್ಕಳಿಗೆ ಪುಸ್ತಕ, ಪೆನ್ನು ನೀಡುವ ಜೊತೆಗೆ ರೈತರಿಗೆ, ಸೈನಿಕರಿಗೆ, ನಿವೃತ ಸೈನಿಕರಿಗೆ ಸನ್ಮಾನಿಸಿ, ಗೌರವಿಸುವ ಮೂಲಕ ಹಳೇಯ ಸ್ನೇಹಿತ ಬಳಗದೊಂದಿಗೆ ಶ್ರೀಗಳು ತಮ್ಮ ಜನ್ಮ ದಿನಾಚರಣೆಯನ್ನು ಆಚರಿಸಿಕೊಂಡರು. ಡಾ, ಮಂಜುನಾಥ ಮಲಗಾಣ ಅವರಿಂದ ಉಚಿತ ದಂತ ಚಿಕಿತ್ಸೆ ಶಿಬಿರವು ನಡೆಯಿತು.  

ಸರ್ವೋದಯ ಶಿಕ್ಷಣ ಶಾಲೆಯ ಆಡಳಿತಾಧಿಕಾರಿ ಡಾ, ಆರ್,ಎನ್, ಮಡಿವಾಳರ ಮಾತನಾಡಿದರು, ಸಂದೀಪ ಪಾಟೀಲ, ಮಹಾದೇವ ನ್ಯಾಮಗೌಡ, ಶಂಕರ ತೇಲಿ, ಡಾ, ಮಂಜುನಾಥ ಮಲಗಾಣ, ಡಾ,ಪ್ರೀಯಾಂಕ ಮಲಗಾಣ ಸೇರಿದಂತೆ ಅನೇಕರು ವೇದಿಕೆಯಲ್ಲಿ ಉಪಸ್ಥಿತರಿದರು. ಅನೀತಾ ಬಿದರಿ ಪ್ರಾರ್ಥಿನಿಸಿದರು, ಪಂಚಾಕ್ಷರಿ ಹಿರೇಮಠ ಸ್ವಾಗತಿಸಿದರು, ದಾವಲ ತೇರದಾಳ ಪ್ರಾಸ್ತಾವಿಕ ಮಾತನಾಡಿದರು, ಮಾದೇವ ಪೂಜಾರಿ ನಿರೂಪಿಸಿ, ವಂದಿಸಿದರು, 


ಸುದ್ದಿ ಓದಿ