ಸಾವಯವ ಕೃಷಿ ವಿಚಾರ ಸಂಕಿರಣ ಕಾರ್ಯಕ್ರಮ
ಜಮಖಂಡಿ 21: ರೈತರು ವಿಷಮುಕ್ತ ಆಹಾರವನ್ನ ಬೆಳೆದು, ಒಳ್ಳೆಯ ಆಹಾರವನ್ನು ಸೇವಿಸಿ, ದೇಶಕ್ಕೆ ವಿಷಮುಕ್ತ ಆಹಾರವನ್ನು ನೀಡುವ ಸಂಕಲ್ಪ ಮಾಡಬೇಕೆಂದು ವಿಜಯಪುರ ಕೃಷಿ ಮಹಾವಿದ್ಯಾಲಯದ ಸಹ ವಿಸ್ತರಣಾ ನಿರ್ದೇಶಕ ಡಾ, ರವೀಂದ್ರ ಬೆಳ್ಳಿ ರೈತರಿಗೆ ಕರೆ ನೀಡಿದರು.
ತಾಲೂಕಿನ ಕುಂಚನೂರ ಗ್ರಾಮದಲ್ಲಿ ನಡೆದ ಕೃಷಿ ಇಲಾಖೆ ಮತ್ತು ಭಾಗ್ಯವಂತಿ ದೇವಸ್ಥಾನ ಅಭಿವೃದ್ದಿ ಸೇವಾ ಸಮಿತಿ ಸಹಯೋಗದಲ್ಲಿ ಆತ್ಮ ಯೋಜನೆಯಡಿ ನಡೆದ ಸಾವಯವ ಕೃಷಿ ವಿಚಾರ ಸಂಕಿರಣ ಕಾರ್ಯಕ್ರಮದ ಉಪನ್ಯಾಸದಲ್ಲಿ ಮಾತನಾಡಿದರು.
ರೈತರು ಹೆಚ್ಚಿನ ಆದಾಯ ಗಳಿಸುವ ನಿಟ್ಟಿನಲ್ಲಿ ಅಧಿಕ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳನ್ನು ಬಳಸಿ ಆಹಾರ ಧಾನ್ಯಗಳನ್ನು ಉತ್ಪಾದಿಸುತ್ತಿರುವುದರಿಂದ ನಾವು ತಿನ್ನುವ ಆಹಾರದಿಂದ ವಿಷ ಮನುಷ್ಯನ ದೇಹ ಸೇರುತ್ತಿದೆ. ಇದರಿಂದ ಮನುಷ್ಯರು ವಿವಿಧ ರೋಗಗಳಿಗೆ ತುತ್ತಾಗಿ ಅನಾರೋಗ್ಯ ಪೀಡಿತರಾಗುವ ಸಂಖ್ಯೆ ಹೆಚ್ಚುತ್ತಿದೆ. ಈಗಲೇ ಎಚ್ಚೆತ್ತುಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಕೃಷಿಯಿಂದ ಭಾರಿ ಗಂಡಾಂತರ ಎದುರಿಸಬೇಕಾಗುತ್ತದೆ ಎಂದರು.
ಇಂಡಿ ತಾಲೂಕಿನ ನಾದ್ ಕೆ.ಡಿ ಗ್ರಾಮದ ಪ್ರಗತಿಪರ ರೈತರು ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಎಸ್,ಟಿ, ಪಾಟೀಲ ಮಾತನಾಡಿ, ಸಾವಯವ ಕೃಷಿ ಪದ್ದತಿಯು ಹೊಸದಲ್ಲ ಭಾರತೀಯ ಸಂಸ್ಕೃತಿಯ ಪ್ರಕಾರ ಹಳೆಯ ಪದ್ದತಿಯಾಗಿದ್ದು, ರೈತರು ಯಾವುದೇ ಬಾಹ್ಯ ಪರಿಕರಗಳ ಮೇಲೆ ಅವಲಂಬಿತರಾಗದೇ ತನ್ನಲ್ಲೇ ಸಿಗವಂತಹ ನೈಸಗಿಕ ಸಂಪನ್ಮೂಲಗಳ ಬಳಕೆ ಮಾಡಿಕೊಂಡು ಕೃಷಿ ಮುನ್ನಡೆಸುವ ಅವಶ್ಯಕತೆ ಇದೆ ಎಂದರು.
ಸಾಹಿತಿ ಡಾ,ಶಾರದಾ ಮುಳ್ಳೂರ ಮಾತನಾಡಿ, ಪಾರಂಪರಿಕ ಕೃಷಿ ಪದ್ದತಿಗಳು ಮತ್ತು ಆಧುನಿಕ ಕೃಷಿಯಿಂದಾದ ಪರಿಣಾಮಗಳ ಬಗ್ಗೆ. ಪ್ರಸ್ತುತ ಉತ್ತಮ ಆರೋಗ್ಯಕ್ಕಾಗಿ ನಮ್ಮ ಜೀವನಶೈಲಿ ಬದಲಾವಣೆ ಮಾಡಿಕೊಳ್ಳುವ ಅವಶ್ಯಕತೆ ಇದೆ. ವಿಜ್ಞಾನ ಎಷ್ಟೇ ಮುಂದುವರೆದರು ದೈವಬಲ, ಆಧ್ಯಾತ್ಮಿಕ ಒಲವು ಇದ್ದಲ್ಲಿ ಮನುಷ್ಯನ ಯಶಸ್ಸು ಖಂಡಿತ ಎಂದರು.
ಶೇಖರ ಶಂಕರ ಮಾನೋಜಿ, ಗೊಲ್ಲಾಳಗೌಡ ಬಿರಾದಾರ, ಆತ್ಮ ಯೋಜನೆಯ ತಾಲೂಕ ತಾಂತ್ರಿಕ ವ್ಯವಸ್ಥಾಪಕ ಕೆ,ಎ, ಜಮಖಂಡಿ ಮಾತನಾಡಿದರು. ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಮಾದುಲಿಂಗ ಗದ್ದುಗೆಯ ಶ್ರೀಗಳಾದ ಕಿರಣ ಒಡೆಯರ ದಿವ್ಯಸಾನಿಧ್ಯ ವಹಿಸಿದ್ದರು. ಭಾಗ್ಯವಂತಿ ದೇವಿಯ ಅರ್ಚಕರಾದ ಸುನಂದಾತಾಯಿ ಆಸಂಗಿ, ನಂದಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಕುಮಾರ ದೇಸಾಯಿ,ಹಣಮಂತ ನ್ಯಾಮಗೌಡ, ಸಂಗೀತಾ ಕಾಂತಿ, ಸಹಾಯಕ ತಾಂತ್ರಿಕ ವ್ಯವಸ್ಥಾಪಕ ನಜೀರ ಜಮಖಂಡಿ, ಪ್ರವೀಣ ಕೊಪ್ಪದ ಸೇರಿದಂತೆ ರೈತರು ಇದ್ದರು.ಸಿ, ಬಿ, ಚಿಕ್ಕೂರಮಠ ನಿರೂಪಿಸಿದರು.ತವನಪ್ಪ ಮಾಳಗೊಂಡ ಪ್ರಾರ್ಥಿಸಿದರು, ವಿ,ಎನ್, ಜಕನೂರ ಸ್ವಾಗತಿಸಿದರು. ಈರಣ್ಣ ಬಡಿಗೇರ ವಂದಿಸಿದರು.