ಜಮಖಂಡಿ

ಬೀದಿ ದನಗಳನ್ನು ಹಿಡಿಯುವ ಕಾರ್ಯಾಚರಣೆ

ಬೀದಿ ದನಗಳನ್ನು ಹಿಡಿಯುವ ಕಾರ್ಯಾಚರಣೆ

ಜಮಖಂಡಿ 2: ನಗರದಲ್ಲಿ ಬೀದಿ ದನಗಳ ಅಟ್ಟಹಾಸದಿಂದ ಜನತೆ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ದನಗಳ ಹಾವಳಿಯಿಂದ ವಿದ್ಯಾರ್ಥಿಯೋರ್ವನು ಟ್ರ್ಯಾಕ್ಟರ್ ಗಾಲಿಗೆ ಸಿಲುಕಿ ಸಾವನ್ನಪಿದ್ದಾನೆ. ಸಾಕಷ್ಟು ಬಾರಿ ಸಾರ್ವಜನಿಕರು ಮನವಿ ಮಾಡಿಕೊಂಡಿದ್ದರೂ ಸಹ ಕ್ಯಾರೆ ಮಾಡದ ಅಧಿಕಾರಿಗಳು ಇವಾಗ ಎಚ್ಚೆತ್ತುಕೊಂಡಿದ್ದು, ಬೀದಿ ದನಗಳನ್ನು ಹಿಡಿಯುವ ಕಾರ್ಯಾಚರಣೆ ನಗರಸಭೆ ಸಹಯೋಗದಲ್ಲಿ ನಡೆಯುತ್ತಿದೆ.  

ನಗರಸಭೆ ಸಿಬ್ಬಂದಿಗಳು ಸೇರಿ ನಗರದಲ್ಲಿ ತಿರುಗುವ ಬೀದಿ ದನಗಳನ್ನು ಹಿಡಿಯುವ ಪ್ರಯತ್ನ ಮಾಡುತ್ತಿದ್ದಾರೆ. ಟಂಟಂದಲ್ಲಿ ದನಗಳನ್ನು ಸಾಗಿಸುವದಕ್ಕೆ ಹರಸಾಹಸ ಪಡುತ್ತಿದ್ದಾರೆ. ದನಗಳನ್ನು ಮೇಲೆಕ್ಕೆ ಎತ್ತಿ ವಾಹನದಲ್ಲಿ ಹಾಕುವದಕ್ಕೆ ಸಾರ್ವಜನಿಕರ ಸಹಾಯ ಬಹಳ ಮುಖ್ಯವಾಗಿದೆ. ಅದಕ್ಕಾಗಿ ಸಾರ್ವಜನಿಕರು ಸಹ ಕೈ ಜೋಡಿಸಬೇಕೆಂದು ಕೆಲವರ ಮಾತುಗಳು ಕೇಳಿ ಬರುತ್ತಿವೆ. ಅಂತು ಇಂತು ಬೀದಿ ದನಗಳನ್ನು ಹಿಡಿಯುವ ಕೆಲಸ ಹೀಗೆ ಮುಂದುವರೆಯುತ್ತದೆಯೋ, ಅಥವಾ ಮೂರು ನಾಲ್ಕು ದನಗಳನ್ನು ಹಿಡಿದು ಕೈ ಬಿಡುತ್ತಾರೆಯೋ ಎಂಬುದನ್ನು ಕಾದುನೋಡಬೇಕಾಗಿದೆ ಎಂದು ಜನತೆಯ ಮಾತು ಕೇಳಿ ಬರುತ್ತಿದೆ. 


ಸುದ್ದಿ ಓದಿ