ಗದಗ

28-ರಂದು ರಂಭಾಪುರಿ ಲಿಂ, ಶ್ರೀ ವೀರಗಂಗಾಧರ ಸ್ವಾಮಿಗಳ 44ನೇ ಪುಣ್ಯಾರಾಧನಾ

28-ರಂದು ರಂಭಾಪುರಿ ಲಿಂ, ಶ್ರೀ ವೀರಗಂಗಾಧರ ಸ್ವಾಮಿಗಳ 44ನೇ ಪುಣ್ಯಾರಾಧನಾ

          ಲಕ್ಷ್ಮೇಶ್ವರ" 25 :  ತಾಲ್ಲೂಕಿನ ಪ್ರಸಿದ್ಧ ತಪೋಭೂಮಿಯಾದ ಮುಕ್ತಿಮಂದಿರ ಧರ್ಮಕ್ಷೇತ್ರದ ಸಂಸ್ಥಾಪಕರು ಹಾಗೂ ಬಾಳೆಹೊನ್ನೂರು ರಂಭಾಪುರಿ ಪೀಠದ ಪೀಠಾಧ್ಯಕ್ಷರಾಗಿದ್ದ ಲಿಂ, ಜಗದ್ಗುರು ಪ್ರಸನ್ನ ರೇಣುಕ ಶ್ರೀ ವೀರಗಂಗಾಧರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ವೀರಗಂಗಾಧರು ಅಜ್ಜಯ್ಯನವರು 44ನೇ ಪುಣ್ಯಾರಾಧನಾ ಮಹೋತ್ಸವವು ಇದೇ 28-ರಂದು ಜರುಗುತ್ತದೆ.

          ಶ್ರೀ ವೀರಗಂಗಾಧರ ಜಗದ್ಗುರುಗಳ ಪುಣ್ಯಸ್ಮರಣೆಯ ಇತಿಹಾಸ ವೀರಗಂಗಾಧರ ಶಿವಾಚಾರ್ಯ ಮಹಾಸ್ವಾಮಿಗಳು ಮಾನವ ಧರ್ಮದ ಏಳಿಗೆಗಾಗಿ ಶ್ರಮಿಸಿದ ಮಹಾನ್ ವೀರ ಇವರು 1932ರಲ್ಲಿ ಲಕ್ಷ್ಮೇಶ್ವರದ ಬಳಿ ದಟ್ಟ ಅರಣ್ಯವಾಗಿದ್ದ ಪ್ರದೇಶದಲ್ಲಿ ಮುಕ್ತಿಮಂದಿರ ಕ್ಷೇತ್ರವನ್ನು ಸ್ಥಾಪಿಸಿ, ಅಲ್ಲಿ ಕಠಿಣ ತಪಸ್ಸು ಮಾಡಿದರು. ಈ ಕ್ಷೇತ್ರವು ಪ್ರಸ್ತುತ "ಭೂಕೈಲಾಸ" ಎಂದೇ ನಾಡಿನಾದ್ಯಂತ ಅತ್ಯಂತ ಪ್ರಸಿದ್ಧಿಯಾಗಿದೆ.ಪುಣ್ಯಾರಾಧನೆಯು ಮುಕ್ತಿಮಂದಿರ ಕ್ಷೇತ್ರದಲ್ಲಿ ಅತ್ಯಂತ ವೈಭವದಿಂದ ಜರುಗುತ್ತದೆ.

            44ನೇ ವರ್ಷದ ಪುಣ್ಯಾರಾಧನಾ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ನೆರವೇರುತ್ತವೆ.ಧಾರ್ಮಿಕ ಕಾರ್ಯಕ್ರಮಗಳಾದ ಪುಣ್ಯಾರಾಧನೆಯ ಅಂಗವಾಗಿ ಕ್ಷೇತ್ರದಲ್ಲಿ ಪಂಚಾಚಾರ್ಯ ಧ್ವಜಾರೋಹಣ, ವಿಶೇಷ ಜಪ-ತಪಗಳು, ರುದ್ರಾಭಿಷೇಕ, ಲಿಂ.ಶ್ರೀ ವೀರಗಂಗಾಧರ ಜಗದ್ಗುರುಗಳ ಭವ್ಯ ಅಡ್ಡಪಲ್ಲಕ್ಕಿ ಮಹೋತ್ಸವ ಮತ್ತು ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಬೃಹತ್ ಧರ್ಮಸಭೆಗಳು ಜರುಗುತ್ತವೆ.

             ಪ್ರಸ್ತುತ ಮುಕ್ತಿಮಂದಿರ ಕ್ಷೇತ್ರದ ಪೀಠಾಧಿಪತಿಗಳಾದ ಷ.ಬ್ರ.ಶ್ರೀ ವಿಮಲರೇಣುಕ ವೀರ ಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿಗಳು ಈ ಎಲ್ಲ ಕಾರ್ಯಕ್ರಮಗಳ ನೇತೃತ್ವವನ್ನು ವಹಿಸುತ್ತಾರೆ.ಪುಣ್ಯಾರಾಧನಾ ಮೊಹೋತ್ಸವದ ಕಾರ್ಯಕ್ರಮದಲ್ಲಿ ಶ್ರೀ ವೀರಗಂಗಾಧರ ಪ್ರಶಸ್ತಿ ಪ್ರಧಾನ ನಡೆಯುವುದು ಈ ಒಂದು ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ವಿವಿಧ ಮಠಗಳ ಮಠಾಧೀಶರರು ರಾಜಕೀಯ ಮುಖಂಡರು ಪೀಠ ಅಭಿಮಾನಿಗಳು ಅಪಾರ ಭಕ್ತರು ಪಾಲ್ಗೊಳ್ಳಲಿದ್ದಾರ 


ಸುದ್ದಿ ಓದಿ