ಜಮಖಂಡಿ

ಜೂ.24ರಂದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಾಲೂಕಾ ಮಟ್ಟದ ಪ್ರತಿಭಾ ಪುರಸ್ಕಾರ

ಜೂ.24ರಂದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಾಲೂಕಾ ಮಟ್ಟದ ಪ್ರತಿಭಾ ಪುರಸ್ಕಾರ

ಲೋಕದರ್ಶನ ವರದಿ,

ಜಮಖಂಡಿ 08: ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘ ಹಾಗೂ ನಗರ ಘಟಕ ಸಹಯೋಗದಲ್ಲಿ ಜೂ, 24 ರಂದು ಎಸ್ಎಸ್ಎಲ್ಸಿ, ಮತ್ತು ಪಿಯುಸಿಯಲ್ಲಿ ಶೇ. 85 ರಷ್ಟು ಹೆಚ್ಚು ಅಂಕಗಳನ್ನು ಪಡೆದುಕೊಂಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಾಲೂಕಾ ಮಟ್ಟದ ಪ್ರತಿಭಾ ಪುರಸ್ಕಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಸಂತೋಷ ಚನಾಳ ಹೇಳಿದರು.

ನಗರದ ದಾನಮ್ಮ ದೇವಿ ಸಭಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಣಜಿಗ ಸಮಾಜದ ವಿದ್ಯಾಥರ್ಿಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಪ್ರತಿ ವರ್ಷವು ಇಂತಹ ಕಾರ್ಯಕ್ರಮವನ್ನು ನಡೆಸಿಕೊಂಡು ಬರುವ ಸಂಘಟನೆ ಆಗಿದೆ. ಎಸ್,ಎಸ್,ಎಲ್,ಸಿ ಮತ್ತು ಪಿಯುಸಿಯಲ್ಲಿ ಶೇ,85 ರಷ್ಟು ಹೆಚ್ಚು ಅಂಕಗಳನ್ನು ಪಡೆದುಕೊಂಡ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಜೂನ್ 21ರ ಒಳ್ಳಗಾಗಿ ತಮ್ಮ ದಾಖಲಾತಿಯೊಂದಿಗೆ ಬಸವೇಶ್ವರ ಬ್ಯಾಂಕ್, ಗುರು ಬಸವ ಜೋತಿ ಬ್ಯಾಂಕ್, ಶರಣ ಚೇತನ ಬ್ಯಾಂಕ್ಗಳಿಗೆ ಭೇಟಿ ನೀಡಿ. ವಿದ್ಯಾರ್ಥಿ ಗಳು ತಮ್ಮ ದಾಖಲಾತಿಯನ್ನು ಸಂಜೆ 6 ಗಂಟೆಯೊಳ್ಳಗಾಗಿ ಸಲಿಸಬೇಕು. ಹೆಚ್ಚಿನ ಮಾಹಿತಿ, 7892092424, 9025111303, 9448204710 ಪೋನ್ ನಂ, ಸಂಪರ್ಕಿಸಿಬೇಕೆಂದರು.

ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ನಡೆಯುವ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಶಾಸಕರು, ಸಚಿವರುಗಳು ಆಗಮಿಸಲಿದ್ದು. ಅಂದು ಜೀವ ಮಾನವ ಪ್ರಶಸ್ತಿಯನ್ನು ನಗರದ ಎಸ್,ಎಮ್, ಜತ್ತಿ ಜಮಖಂಡಿ, ಮಾದೇವ ಸಾವಳಗಿ ಜಮಖಂಡಿ, ಗ್ರಾಮೀಣ ಪ್ರದೇಶದ ಶಿವರುದ್ರಪ್ಪ ಉಡಗಿ ಹಿರೇಪಡಸಲಗಿ ಹೀಗೆ ಮೂರು ಜನರಿಗೆ ಜೀವಮಾನವ ಪ್ರಶಸ್ತಿಯನ್ನು ನೀಡಲಾಗುತ್ತದೆ. ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಮಾಡಲಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಸಿ,ಎಸ್,ಭಾಂಗಿ ಮಾತನಾಡಿದರು. ನಾಗೇಂದ್ರ ಶಿರಗನ್ನವರ, ಸಿ,ಎಸ್, ಜತ್ತಿ, ಮಲ್ಲು ಮುದಕನ್ನವರ, ಬಸವರಾಜ ಬಾಗೇವಾಡಿ, ಜಗದೀಶ ಯಂಡಿಗೇರಿ, ರಮೇಶ ಉಪ್ಪಿನ, ಹಣಮಂತ ಲಿಗಾಡಿ, ಬಾಹುರಾಜ ಬಂದ್ರದ, ಪ್ರವೀಣ ಕಲ್ಯಾಣಿ, ಶ್ರೀಕಾಂತ ಚಟರ, ಅತೀಲ ಮುರಗೋಡ, ಮಾದೇವ ಸಂಕ, ಮಲ್ಲು ಇಂಗಳಗಾವಿ, ಮಲ್ಲು ಜೈನಾಪೂರ, ಚಿದಾನಂದ ಚಟರ ಸೇರಿದಂತೆ ಅನೇಕರು ಸುದ್ದಿಗೋಷ್ಠಿಯಲ್ಲಿ ಇದ್ದರು.


ಸುದ್ದಿ ಓದಿ