ಜಮಖಂಡಿ

ವಿವಿಧ ಮಾರುಕಟ್ಟೆ ಅಂಗಡಿಗಳ ಮೇಲೆ ಅಧಿಕಾರಿಗಳ ದಾಳಿ

ವಿವಿಧ ಮಾರುಕಟ್ಟೆ ಅಂಗಡಿಗಳ ಮೇಲೆ ಅಧಿಕಾರಿಗಳ ದಾಳಿ

ಜಮಖಂಡಿ 13: ಜಮಖಂಡಿ ನಗರಸಭೆ ಆಡಳಿತಾಧಿಕಾರಿ, ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಅವರು ನಗರದ ವಿವಿಧ ಮಾರುಕಟ್ಟೆಗಳಲ್ಲಿನ ಅಂಗಡಿಗಳ ಮೇಲೆ ದಾಳಿ ನಡೆಸಿ, ನೂರಾರುರು, ಮೌಲ್ಯದ ಪ್ಲಾಸ್ಟಿಕ್ ವಸ್ತುಗಳನ್ನು ಜಪ್ತ ಮಾಡಿ, ದಂಡ ವಿಧಿಸಿದರು. ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಹಾಗೂ ಬಳಕೆ ನಿಷೇಧಿಸುತ್ತಿರುವ ಹಿನ್ನಲೆಯಲ್ಲಿ ವರ್ತಕರಿಗೆ ಎಚ್ಚರಿಕೆ ನೀಡಿ. ಮುಂಬರುವ ದಿನಗಳಲ್ಲಿ ಪ್ಲಾಸ್ಟಿಕ್ ವಸ್ತುಗಳ ಮಾರಾಟ ಮಾಡದಂತೆ ಸೂಚಿಸಿದರು. ನಗರಸಭೆ ಅಭಿಯಂತರ ಸುಭಾಸ ಗೌಡರ, ಕುಸುಮಾ ಸೋಪ್ಪಲ್ಟ್‌, ಸಿಬ್ಬಂದಿ ವಿಜಯ ವಂದಾಲ, ವಿನಾಯಕ ನಿಡೋಣಿ ಇನ್ನಿತರರು ಇದ್ದರು.  


ಸುದ್ದಿ ಓದಿ