ಲೋಕದರ್ಶನ ವರದಿಗೆ ಎಚ್ಚೆತ್ತ ಅಧಿಕಾರಿಗಳು
ಬೈಲಹೊಂಗಲ 20: ಹಾರುಗೋಪ್ಪ ಗ್ರಾಮಕ್ಕೆ ಕುಡಿಯುವ ನೀರು ಬೈಲಹೊಂಗಲ: ಮತಕ್ಷೇತ್ರದ ವ್ಯಾಪ್ತಿಯ, ಸವದತ್ತಿ ತಾಲೂಕಿನ ಹಾರುಗೋಪ್ಪ ಗ್ರಾಮದಲ್ಲಿ ಭೀಕರ ಬರಗಾಲ, ನೀರಿಗೆ ಹಾಹಾಕಾರ ಎಂದು ನೀರಿನ ಸಮಸ್ಯೆ ಬಗ್ಗೆ ಮಂಗಳವಾರ ಲೋಕದರ್ಶನ ವರದಿ ಸುದ್ದಿ ಪ್ರಸಾರ ಮಾಡಿತ್ತು. ಸುದ್ದಿ ಪ್ರಸಾರವಾದ ಮಾರನೇ ದಿನವೇ ಸವದತ್ತಿ ತಹಶೀಲ್ದಾರ್ ಎಂ ಆರ್ ಕುಲಕರ್ಣಿ, ಎಇಇ ವಿ ಬಿ ಆಯನಗೌಡರ, ಜಿ ಡಿ ಜಾಧವ ಅಧಿಕಾರಿಗಳ ವರ್ಗ ಗ್ರಾಮಕ್ಕೆ ಆಗಮಿಸಿ ಕುಡಿಯುವ ನೀರಿನ ಸಮಸ್ಯೆ ಮನಗಂಡು ಸಭೆ ನಡೆಸಿ ನೀರಿನ ಸಮಸ್ಯೆಗೆ ಸ್ಪಂದಿಸಿದ್ದಾರೆ.ಹಲವು ದಿನಗಳಿಂದ ಈ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ ಜನರು ಬೇಸತ್ತು ಹೋಗಿದ್ದರು. ಕೂಲಿ ನಾಲಿ ಬಿಟ್ಟು ಸುಮಾರು 2 ಕಿ.ಮೀ ದೂರದಿಂದ ಮಕ್ಕಳು , ಯುವಕರು, ಮಹಿಳೆಯರು ನೀರನ್ನು ಹೊತ್ತುಕೊಂಡ ಗ್ರಾಮಕ್ಕೆ ತರುತ್ತಿದ್ದರು. ಈ ಸಮಸ್ಯೆ ಕಂಡು ಲೋಕದರ್ಶನ ವರದಿ ಸುದ್ದಿ ಪ್ರಸಾರ ಮಾಡಿತ್ತು.
ಗ್ರಾಪಂ ಕಚೇರಿಯಲ್ಲಿ ಸಭೆ ನಡೆಸಿದ ತಹಶೀಲ್ದಾರ ಎಂ ಆರ್ ಕುಲಕರ್ಣಿ ಲೋಕದರ್ಶನ ಜೊತೆ ಮಾತನಾಡಿ, ಜನತೆಗೆ ಕುಡಿಯುವ ನೀರು ಸಮಸ್ಯೆಯಾಗದಂತೆ ಗ್ರಾಮದ ಎರಡು ಖಾಸಗಿ ಬೊರವೆಲ್ ಮಾಲೀಕರ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಟ್ಯಾಂಕರ ಮೂಲಕ ಸರಬರಾಜು ಮಾಡಲು ಪಿಡಿಓ ಗೆ ಸೂಚಿಸಲಾಗಿದೆ. ಜನತೆಗೆ ಯಾವುದೇ ರೀತಿ ಕುಡಿಯುವ ನೀರಿನ ಸಮಸ್ಯೆ ಉದ್ಬವಿಸಿದಂತೆ ಗ್ರಾ ಪಂ ಅಧಿಕಾರಿಗಳಿಗೆ ಆದೇಶ ಮಾಡಲಾಗಿದೆ ಎಂದರು.ಪಿಡಿಓ ಪಿ ವಿ ಆಗಸರ, ಗ್ರಾ ಪಂ ಸರ್ವ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.