ತಾಯಿ ಮಗುವಿನ ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ ಆಹಾರ ಸೇವನೆ ಅವಶ್ಯ: ಅಮರೇಶ ಹಾವಿನ
ಜಮಖಂಡಿ 30: ತಾಯಿ ಮತ್ತು ಮಗುವಿನ ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ ಆಹಾರ ಸೇವನೆ ಅವಶ್ಯ. ಆದರೆ ಈ ಅಭಿಯಾನ ಕೇವಲ ಪ್ರದರ್ಶನಕ್ಕೆ ಸೀಮಿತವಾಗಬಾರದೆಂದು ಜಿಲ್ಲಾ ಶಿಶು ಅಭಿವೃದ್ಧಿ ಇಲಾಖೆ ನಿರ್ವಹನಾಧಿಕಾರಿ ಅಮರೇಶ ಹಾವಿನ ಹೇಳಿದರು.
ತಾಲ್ಲೂಕಿನ ಗೋಠೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗೋಠೆ ವಲಯಮಟ್ಟದ ಆಹಾರ ಪೋಷಣಿ ಮಾಸಾಚರಣೆ ಅಭಿಯಾನ, ಪೌಷ್ಟಿಕ ಆಹಾರ ಪ್ರದರ್ಶನ ಮತ್ತು ಮಾಹಿತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಅಭಿಯಾನದ ಮೂಲಕ ಪ್ರತಿಯೊಂದು ಮಗುವಿಗೂ ಪೌಷ್ಟಿಕ ಆಹಾರ ದೊರೆಯುವಂತೆ ನೋಡಿ ಕೊಳ್ಳಬೇಕು, ಗರ್ಭಿಣಿಯರು ತರಕಾರಿ ಹಾಗೂ ಖನಿಜಾಂಶವುಳ್ಳ ಹಣ್ಣುಗಳನ್ನು ಹೆಚ್ಚು ಸೇವಿಸಬೇಕು. ಇದರಿಂದ ದೇಹಕ್ಕೆ ಕಬ್ಬಿಣಾಂಶ ದೊರೆಯುತ್ತದೆ. ಅಲ್ಲದೇ ಯಾವುದೇ ರೋಗಗಳಿಗೆ ತುತ್ತಾಗದೆ ಸದೃಢವಾಗಿರಲು ಸಾಧ್ಯ. ಜನಿಸಿದ ಮಗು ಕೂಡ ಆರೋಗ್ಯವಾಗಿರುತ್ತದೆ ಎಂದರು.
ಸಹಾಯಕ ಶಿಶು ಅಭಿವೃದ್ಧಿ ಇಲಾಖೆ ಯೋಜನಾಧಿಕಾರಿ ಆನಂದ ಪಿ, ಡಾ.ಎಸ್.ಎಮ್.ವಡಗಾಂವಕರ, ಗ್ರಾಪಂ ಉಪಾಧ್ಯಕ್ಷ ಶೋಭಾ ಜಾಧವ, ವಿ.ಎಮ್.ಕಲಾಲ್, ರುದ್ರ್ಪ ಪಾನಶೆಟ್ಟಿ, ತುಕಾರಾಮ ತೊರವಿ, ಸಾವಿತ್ರಿ ಕುಂಬಾರ, ಎಸ್. ಆರ್.ಕದಂ, ಹಾಗೂ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಇದ್ದರು.