ಕೃಷ್ಣಾ ನದಿ ಪ್ರವಾಹ ಮುನ್ನೆಚ್ಚರಿಕೆ ಕ್ರಮವಾಗಿ ಅಣುಶಕ್ತಿ ಪ್ರದರ್ಶನ
ಲೋಕದರ್ಶನ ವರದಿ,
ಜಮಖಂಡಿ 7: ಕೃಷ್ಣಾ ನದಿ ತೀರದ ಗ್ರಾಮಸ್ಥರಿಗೆ ಬರುವ ತಿಂಗಳಲ್ಲಿ ಅತಿಯಾದ ಮಳೆಯಾದರೆ ಪ್ರವಾಹ ಬರುವ ಸಾಧ್ಯತೆ ಇದ್ದು. ತಾಲೂಕಾಡಳಿತ, ಅಧಿಕಾರಿಗಳು ನೀಡುವ ನಿರ್ದೇಶನಗಳನ್ನ ಕಟ್ಟು ನಿಟ್ಟಾಗಿ ಪಾಲಿಸಬೇಕೆಂದು ಎಸಿ, ಸಂತೋಷ ಕಾಮಗೌಡ ಹೇಳಿದರು.
ತಾಲೂಕಿನ ಶೂರ್ಪಾಲಿ, ಮುತ್ತೂರ ಗ್ರಾಮದಲ್ಲಿ ನಡೆದ ಜಿಲ್ಲಾ ವಿಪತು ನಿರ್ವಣಾಪ್ರಾಧಿಕಾರ, ಅಗ್ನಿಶಾಮಕದಳ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಶಿಕ್ಷಣ ಇಲಾಖೆ, ಪಂಚಾಯತ ರಾಜ್ ಇಲಾಖೆಯ ಸಯೋಗದಲ್ಲಿ ನಡೆದ ಕೃಷ್ಣಾ ನದಿ ಪ್ರವಾಹ ಮುನಚ್ಚೇರಿಕೆಯಾಗಿ ಅತಿವೃಷ್ಠಿ ಕೃಷ್ಣಾ ನದಿ ಪ್ರವಾಹ ಮುಂಜಾಗ್ರತ ಸುರಕ್ಷಿತ ಕ್ರಮವಾಗಿ ಪ್ರಾಣ ಹಾನಿ ಹಾಗೂ ಆಸ್ತಿ ಪಾಸ್ತಿ ಹಾನಿಯ ಬಗ್ಗೆ ಅಣುಕು ಪ್ರದರ್ಶನ ಮಾಡಲಾಯಿತು.
ಡಿಎಸ್ಪಿ, ಶಾಂತವೀರ, ಈ ಮಾತನಾಡಿ, ಪ್ರವಾಹ ಬಂದ ಸಮಯದಲ್ಲಿ ಯಾವುದೆ ರೀತಿ ದೃತಿಗೆಡಬಾರದು. ಕೃಷ್ಣಾ ನದಿ ತೀರದ ಗ್ರಾಮಗಳ ಜನತೆ ಅಣುಕ ಪ್ರದರ್ಶನದ ಸದುಪಯೋಗವನ್ನು ಎಲ್ಲರಿಗೂ ತಿಳಿಸಿ ಎಂದರು.
ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮಲ್ಲಿಕಾಜರ್ುನಪ್ಪ ಹಾಗೂ ಅವರ ಸಿಬ್ಬಂದಿ ನೀರಿನಲ್ಲಿ ಬೋಟಿನ ಮೂಲಕ ಪ್ರಾಣ ರಕ್ಷಿಸುವ ಅಣುಕ ಪ್ರದರ್ಶನ ಮಾಡಿ ಸಾರ್ವಜನಿಕರ ಗಮನ ಸೇಳೆದು ಜಾಗೃತಿ ಮೂಡಿಸಿದರು.
ತಹಸಿಲ್ದಾರ ಸದಾಶಿವ ಮಕ್ಕೊಜಿ, ವಾಯ್, ಎಚ್, ದ್ರಾಕ್ಷಿ, ಕಂದಾಯ ನಿರೀಕ್ಷಕ ಪ್ರಕಾಶ ಪವಾರ, ಅಗ್ನಿಶಾಮಕ ಪ್ರಭಾರ ಠಾಣಾಧಿಕಾರಿ ಎ, ಅಯ್, ಸೋಪಿಮಠ, ಶ್ರೀಧರ ಮಾಳಶೆಟ್ಟಿ, ವಿಠ್ಠಲ ಪಾಟೀಲ, ಆನಂದ ತೋಟದ, ಮಂಜು ಸಿದ್ದನ್ನವರ, ರಮೇಶ ಮಾಳಿ ಸೇರಿದಂತೆ ತಾಲೂಕಾ ಮಟ್ಟದ ಅಧಿಕಾರಿಗಳು,ಸಿಬಂಧಿಗಳು ಹಾಗೂ ಗ್ರಾಮಸ್ಥರು ಇದ್ದರು.