ಸೌಂದತ್ತಿ

ಯಲ್ಲಮ್ಮ ದೇವಿಗೆ ಸಾಮೂಹಿಕವಾಗಿ ಪರಡಿ, ನೈವೇದ್ಯ ಅರ್ಪಣೆ

ಯಲ್ಲಮ್ಮ ದೇವಿಗೆ ಸಾಮೂಹಿಕವಾಗಿ ಪರಡಿ, ನೈವೇದ್ಯ ಅರ್ಪಣೆ

ಉಗರಗೋಳ 27:  ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ಶುಕ್ರವಾರ ದಿ.27ರಂದು ಸಾಮೂಹಿಕವಾಗಿ ದೇವಿಗೆ ಪರಡಿ ತುಂಬಿ, ನೈವೇದ್ಯ ಅರ್ಪಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. 

ರಾಜ್ಯ ಹಾಗೂ ಹೊರರಾಜ್ಯಗಳಿಂದ ಯಲ್ಲಮ್ಮ ದೇವಿ ಸನ್ನಿಧಿಗೆ ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು, ಯಲ್ಲಮ್ಮ ದೇವಸ್ಥಾನದ ಅರ್ಚಕರ ವೈದೀಕತ್ವದಲ್ಲಿ ಪರಡಿ ತುಂಬಿ ಭಕ್ತಿ ಮೆರೆದರು. ಅಧಿಕಾರಿಗಳು, ಜನ ಪ್ರತಿನಿಧಿಗಳು, ಅರ್ಚಕರು, ಉತ್ತಮ ಮಳೆಯಾಗಲಿ. ಸಕಲ ಜೀವರಾಶಿ ಒಳಿತಿಗೆ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಿದರು.    

ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಸಯ್ಯ ಹಿರೇಮಠ ಮಾತನಾಡಿ, ‘ಯಲ್ಲಮ್ಮ ದೇವಿ ದರ್ಶನಕ್ಕೆ ಬರುವ ಭಕ್ತರು ನೀಡಿದ ಧವಸಹಿಧಾನ್ಯಗಳಿಂದ ದೇವಸ್ಥಾನದ ವತಿಯಿಂದಲೇ ನೈವೇದ್ಯ ಸಿದ್ಧಪಡಿಸಿ, ಸಾಮೂಹಿಕವಾಗಿ ಪರಡಿ ತುಂಬಿದ್ದೇವೆ. ಇನ್ನೂ ಹೆಚ್ಚು ಹೆಚ್ಚು ಭಕ್ತರು ಇದರ ಲಾಭ ಪಡೆದುಕೊಂಡು ಪುಣಿತರಾಗಬೇಕೆಂದರು. 

 ಸವದತ್ತಿಯ ಮಲ್ಲಿಕಾರ್ಜುನ ಶ್ರೀಗಳು ಮಾತನಾಡಿ ಭಕ್ತರೂ ಕೂಡ ಗುಡ್ಡದ ವಿವಿಧ ಪರಿಸರಗಳಲ್ಲಿ ಒಲೆ ಹೂಡಿ ಅಡುಗೆ ಮಾಡುವುದಕ್ಕಿಂತ, ಯಲ್ಲಮ್ಮನ ದೇಗುಲದ ದಾಸೋಹ ವಿಭಾಗಕ್ಕೆ ಧವಸಹಿಧಾನ್ಯಗಳನ್ನು ಅಥವಾ ಹಣ ನೀಡಬೇಕು. ಅಲ್ಲಿ ಸಿಬ್ಬಂದಿ ತಯಾರಿಸುವ ನೈವೇದ್ಯವನ್ನು ಭಕ್ತಿಯಿಂದ ದೇವಿಗೆ ಅರ​‍್ಿಸಿ, ಸಾಮೂಹಿಕವಾಗಿ ಪರಡಿ ತುಂಬುವುದಕ್ಕೆ ಮುಂದಾಗಿ, ಶ್ರೀರೇಣುಕಾ ಯಲ್ಲಮ್ಮಾ ದೇವಿಯ ಕೃಪೆಗೆ ಪಾತ್ರರಾಗಿ. ಎಂದರು.  

ಯಲ್ಲಮ್ಮ ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಎಸ್‌ಪಿಬಿ ಮಹೇಶ, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ವಾಯ್ ವಾಯ್ ಕಾಳಪ್ಪನವರ, ಅಧೀಕ್ಷಕರಾದ ಅರವಿಂದ ಮಾಳಗೆ, ಸಂತೋಷ ಶಿರಸಂಗಿ, ಅಭಿಯಂತರ ಎಮ್ ವ್ಹಿ ಮೂಳ್ಳೂರ, ಎಸ್ ಎಲ್ ಯಲಿಗಾರ, ಡಿ ಆರ್ ಚವ್ಹಾಣ, ರಾಜು ಬೆಳವಡಿ, ಜಿ ಎಮ್ ಗಡೇಕಾರ, ಗೋವಿಂದರಾವ್ ಕುಲಕರ್ಣಿ, ಎಸ್ ಆರ್ ಗಿರಿಯಾಲ, ಬೀಮಣ್ಣಾ ಬಾರ್ಕಿ ಹಾಗೂ ಜೋಗತಿ-ಜೋಗಮ್ಮಾ ಭಕ್ತರು ಹಾಗೂ ದೇವಸ್ಥಾನ ಸಿಬ್ಬಂದಿ ಇದ್ದರು. 


ಸುದ್ದಿ ಓದಿ