ಜಮಖಂಡಿ

ನಾಡಹಬ್ಬ ದಸರಾ ಉತ್ಸವ: ವಿವಿಧ ಸಾಂಸ್ಕೃತಿ ಕಾರ್ಯಕ್ರಮ

ನಾಡಹಬ್ಬ ದಸರಾ ಉತ್ಸವ: ವಿವಿಧ ಸಾಂಸ್ಕೃತಿ ಕಾರ್ಯಕ್ರಮ

ಜಮಖಂಡಿ 12: ನಾಡಹಬ್ಬ ದಸರಾ ಉತ್ಸವದ ದಿನದಂದು ಮೆನೆ,ಮನೆಗಳಲ್ಲಿ ಆಚರಣೆಯನ್ನು ಮಾಡುವ ಜೊತೆಗೆ ದೇವಿಆರಾಧನೆ ಮಾಡುವದು ವಿಶೇಷವಾಗಿದ್ದು. ಅ,15 ರಿಂದ 24 ವರಗೆ ಮುತ್ತಿನಕಂತಿ ಮಠದಲ್ಲಿ ಲೋಕಕಲ್ಯಾಣಾರ್ಥವಾಗಿ ಪ್ರತಿನಿತ್ಯ ದೇವಿಮೂರ್ತಿಗೆ ಮಹಾರುದ್ರಾಭಿಷೇಕ, ಹೋಮ,ಕುಂಕುಮಾರ್ಚನೆ ಹಾಗೂ ವಿವಿಧ ಸಾಂಸ್ಕೃತಿ ಕಾರ್ಯಕ್ರಮ ಜರುಗಲಿವೆ ಎಂದು ಮಠದ ಶಿವಲಿಂಗ ಪಂಡಿತರಾಧ್ಯ ಶಿವಾಚಾರ್ಯ ಶ್ರೀಗಳು ಹೇಳಿದರು. 

ನಗರದ ಮುತ್ತಿನಕಂತಿ ಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಅ.15 ರಂದು ದೇವಿ ಪುರಾಣ ಉದ್ಘಾಟನಾ ಸಮಾರಂಭದಲ್ಲಿ ಗೌರಿಶಂಕರ ಶಿವಾಚಾರ್ಯ ಕಲ್ಯಾಮಠ, ತೊಂಟದಾರ್ಯ ಶ್ರೀಗಳು ಮರೇಗುದ್ದಿ, ಶರಣಬಸವ ಶಿವಾಚಾರ್ಯ ಬನಹಟ್ಟಿ, ಹರ್ಷಾನಂದ ಶ್ರೀಗಳು ಹುಲ್ಯಾಳ, ಶ್ರೀಶೈಲ ಶ್ರೀಗಳು ನಾವಲಗಿ, ಶಾಸಕ ಜಗದೀಶ ಗುಡಗುಂಟಿ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಸಂಗಮೇಶ ನಿರಾಣಿ, ಸುಶೀಲಕುಮಾರ ಬೆಳಗಲಿ, ಡಾ,ವಿಜಯಲಕ್ಷ್ಮೀ ತುಂಗಳ, ಬಸವರಾಜ ಸಿಂಧೂರ, ಏಗಪ್ಪ ಸವದಿ, ಎ,ಆರ್,ಸಿಂಧೆ, ದಾನೇಶ ಘಾಟಗೆ, ಪೌರಾಯುಕ್ತೆ ಲಕ್ಷ್ಮೀ ಅಸ್ಟಗಿ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ ಎಂದರು. 

ಅ.15 ರಂದು ನವರಾತ್ರಿ ದಿನದಂದು ಬೆಳಗ್ಗೆ 8 ಗಂಟೆಗೆ ದೇವಿಮೂರ್ತಿ ಪ್ರತಿಷ್ಠಪಣೆ, ಪ್ರತಿನಿತ್ಯ ಮಹಾರುದ್ರಾಭಿಷೇಕ,ಕುಂಕುಮಾರ್ಚಣೆ ನಡೆಯುವದು, 10 ಗಂಟೆಗೆ ಮಹಾಮೃತ್ಯುಂಜಯ ಹೋಮ, ಸಂಜೆ 6 ಗಂಟೆಗೆ ಶ್ರೀಶೈಲ ಶ್ರೀಗಳಿಂದ ದೇವಿ ಪುರಾಣ, 23 ರಂದು ಬೆಳಗ್ಗೆ 11 ಗಂಟೆಗೆ ಉಡಿತುಂಬುವದು ಮತ್ತು ಅನ್ನಪ್ರಸಾದ, 24 ರಂದು ಸಂಜೆ 5 ಗಂಟೆಗೆ ಸಕಲ ವಾಧ್ಯಮೇಳದೊಂದಿಗೆ ಬನ್ನಿ ಮುಡಿಯುವದು ಹಾಗೂ 9 ದಿನಗಳ ಕಾಲ ವಿವಿಧ ಮಹಿಳಾ ಸಂಘಟನೆಗಳಿಂದ ಸಂಜೆ 6 ಕ್ಕೆ ಕುಂಕುಮಾರ್ಚಣೆ, 22 ರಂದು ಪುರಾಣ ಸಮಾರೋಪ ಸಮಾರಂಭದಲ್ಲಿ ಹಾಲಿ ಶಾಸಕ, ಮಾಜಿ ಶಾಸಕರು ವಿವಿಧ ಮಠಾಧೀಶರುಗಳು ಮತ್ತು ವಿವಿಧ ಸಂಘಟನೆ ಮುಖಂಡರು ಭಾಗವಹಿಸಲಿದ್ದಾರೆಂದು ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ಸುರೇಶ ಕಡಕೋಳ, ನಾಗರಾಜ ತಂಗಡಗಿ, ವಿನೋದ ಲೋಣಿ ಸೇರಿದಂತೆ ಮಠದ ಕಾರ್ಯಕರ್ತರು ಇದ್ದರು. 


ಸುದ್ದಿ ಓದಿ