ಮೈಸೂರು ದಸರಾ: ಸಾಂಸ್ಕೃತಿಕ ಕಾರ್ಯಕ್ರಮ

ಮೈಸೂರು ದಸರಾ: ಸಾಂಸ್ಕೃತಿಕ ಕಾರ್ಯಕ್ರಮ

ಬಳ್ಳಾರಿ 13: ಜಗತ್ ಪ್ರಸಿದ್ಧ ಮೈಸೂರು ದಸರಾ ಉತ್ಸವದ ಅಂಗವಾಗಿ ಮೈಸೂರಿನ ಕಲಾಮಂದಿರದಲ್ಲಿ ಶುಕ್ರವಾರ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಳ್ಳಾರಿಯ ಜಿ.ಚಂದ್ರಕಾಂತ್ ಅವರ ತ್ರಿಭಾಷಾ ವಚನ ಗಾಯನ ಎಲ್ಲರ ಗಮನ ಸೆಳೆಯಿತು.

      ಬಸವಣ್ಣನವರ ವಚನಗಳನ್ನು ಕನ್ನಡ, ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಹಾಡುವ ಮೂಲಕ ಎಲ್ಲರ ಮನಸೊರೆಗೊಂಡರು. ಪ್ರಾರಂಭದಲ್ಲಿ "ಉಳ್ಳವರು ಶಿವಾಲಯ ಮಾಡುವರು . ."ವಚನವನ್ನು ಮಧುವಂತಿ ರಾಗದಲ್ಲಿ ಸುಮಧುರವಾಗಿ ಹಾಡಿದರು. ನಂತರ ಕಲಾವತಿ ರಾಗದಲ್ಲಿ "ನಾದಪ್ರಿಯ ಶಿವನೆಂಬುವರು. . . ." , ಬಿಲಾಸಖಾನಿ ತೋಡಿ ರಾಗದಲ್ಲಿ "ಸ್ವಾಮಿ ನೀನು ಶಾಶ್ವತ ನೀನು . . .", ಜೀವನಪುರಿ ರಾಗದಲ್ಲಿ "ಕಳಬೇಡ ಕೂಲಬೇಡ . ." ವಚನಗಳನ್ನು ಸುಮಧುರವಾಗಿ ಹಾಡಿದರು. ಭೈರವ ರಾಗದಲ್ಲಿ "ಪಾಪಿಯಧನ ಪ್ರಾಯಶ್ಚಿತ್ತಕಲ್ಲದೆ . ." ವಚನ ಗಾಯನದ ಮೂಲಕ ಕಾರ್ಯಕ್ರಮ ಕೊನೆಗೊಳಿಸಿದರು. ತ್ರಿಭಾಷಾ ವಚನ ಗಾಯನ ಕಾರ್ಯಕ್ರಮಕ್ಕೆ ಗುರುಶಾಂತಯ್ಯ ಸ್ಥಾವರಮಠ ಹಾಮರ್ೊನಿಯಂ ಸಾಥ್ ಹಾಗೂ ವೀರಭದ್ರಯ್ಯ ಸ್ಥಾವರಮಠ ತಬಲಾ ಸಾಥ್ ನೀಡಿದರು.

    ಜಿಎಸ್ಎಸ್ ನಿವೃತ್ತಿ ಪ್ರಾಚಾರ್ಯರಾದ ಪ್ರೊ.ರಾಮಮೂತರ್ಿರಾವು ಅವರು ಕಾರ್ಯಕ್ರಮ ನಿರೂಪಿಸಿದರು. ವೇದಿಕೆ ಅಧಿಕಾರಿ ಕುಮಾರಸ್ವಾಮಿ ಇದ್ದರು.

ಸುದ್ದಿ ಓದಿ