ಜಮಖಂಡಿ

ಪಾಕಿಸ್ತಾನ ಎಂದು ಬರೆದಿರುವ ಟಿ ಶರ್ಟ್‌ ಧರಿಸಿ ಮುಸ್ಲಿಂ ಯುವಕರು

ಪಾಕಿಸ್ತಾನ ಎಂದು ಬರೆದಿರುವ ಟಿ ಶರ್ಟ್‌ ಧರಿಸಿ ಮುಸ್ಲಿಂ ಯುವಕರು

ಜಮಖಂಡಿ: 26: ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನದ ನಡುವಿನ ಕ್ರಿಕೆಟ್ ಪಂದ್ಯ ವೀಕ್ಷಿಸಲು ಚೆನ್ನೈಗೆ ತೆರಳಿದ್ದ ನಗರದ ಅವಟಿಗಲ್ಲಿಯ ನಾಲ್ವರು ಯುವಕರು ಪಾಕಿಸ್ತಾನ ಬೆಂಬಲಿತ ಉಡುಪುಗಳನ್ನು ಧರಿಸಿ, ಗಲ್ಲದ ಮೇಲೆ ಭಾರತದ ರಾಷ್ಟ್ರಧ್ವಜದ ಚಿಹ್ನೆ ಮೇಲೆ ಕಪ್ಪು ಬಣ್ಣ ಹಚ್ಚಿಕೊಂಡ ಚಿತ್ರಗಳು ಜಾಲತಾಣದಲ್ಲಿ ಹರಿದಾಡಿವೆ. ನಾಲ್ವರ ವಿರುದ್ಧ ಕ್ರಮಕ್ಕೆ ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ. 

ನಗರದ ಮುಸ್ಲಿಂ ಯುವಕರು ಪಾಕಿಸ್ತಾನ ಎಂದು ಬರೆದಿರುವ ಟಿ ಶರ್ಟ್‌ ಧರಿಸಿ ಪಾಕಿಸ್ತಾನ ಪರ ಒಲವು ತೋರಿದ್ದಾರೆ. ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು’ ಎಂದು ಬಿಜೆಪಿ ಮತ್ತು ಹಿಂದು ಸಂಘಟನೆಯ ಮುಖಂಡರು ಒತ್ತಾಯಿಸಿದ್ದಾರೆ. 

ನಾಲ್ವರು ಯುವಕರು ಇನ್ನೂ ಜಮಖಂಡಿಗೆ ಬಂದಿಲ್ಲ. ಬಂದ ಬಳಿಕ ವಿಚಾರಣೆ ನಡೆಸಲಾಗುವುದು ಎಂದು ಶಹರ ಠಾಣೆಯ ಪಿಎಸ್‌ಐ ನಾಗರಾಜ ಖಿಲಾರೆ ಮಾಧ್ಯಮದವರಿಗೆ ತಿಳಿಸಿದ್ದಾರೆ. 


ಸುದ್ದಿ ಓದಿ