ಜಮಖಂಡಿ

ಯುವಕನ ಕೊಲೆ: ಆರೋಪಿಗಳಿಗಾಗಿ ಶೋಧ

ಯುವಕನ ಕೊಲೆ: ಆರೋಪಿಗಳಿಗಾಗಿ ಶೋಧ

ಜಮಖಂಡಿ 08: ತಾಲ್ಲೂಕಿನ ಸಿದ್ದಿಪೂರ ಗ್ರಾಮದ ಬಳಿ ವ್ಯಕ್ತಿಯೊರ್ವನನ್ನು ದುಷ್ಕರ್ಮಿಗಳು ಕೊಲೆ ಮಾಡಿರುವ ಘಟನೆ ನಡೆದಿದೆ. 

ನಗರದ ನಿವಾಸಿ ಅಲ್ತಾಫ್ ಇಮ್ತಿಯಾಜ್ ಪುಕಾರೆ (20) ಯುವಕ ಕೊಲೆಯಾದ ದುರ್ದೈವಿ. ಸಿದ್ದಾಪೂರ ಗ್ರಾಮದ ಬಳಿ ವಿಜಯಪುರ, ಹುಬ್ಬಳ್ಳಿ ರಾಜ್ಯ ಹೆದ್ದಾರಿ ಮೇಲೆ ನಸುಕಿನ ಜಾವದಲ್ಲಿ ಕತ್ತು ಕೊಯಿದ್ದು ರಸ್ತೆಯ ಮೇಲೆ ಬಿಸಾಕಿ ಹೋಗಿದ್ದು. ಕೊಲೆಯಾದ ವ್ಯಕ್ತಿಯ ಶವ ಗುರುತು ಸಿಗದಂತೆ. ಅದೊಂದು ರಸ್ತೆ ಅಪಘಾತವೆಂದು ಬಿಂಬಿಸುವ ಹಾಗೆ ಕೊಲೆ ಮಾಡಲಾಗಿದೆಂದು ತಿಳಿದು ಬಂದಿದ್ದು. ಕೊಲೆಯಾದ ದುರ್ದೈವಿ ಮುಧೋಳದಿಂದ ಜಮಖಂಡಿಗೆ ಬರುವ ಸಮಯದಲ್ಲಿ ಈ ಘಟನೆ ನಡೆದಿರಬಹುದೆಂದು ಜಿಲ್ಲಾ ಎಸ್‌ಪಿ, ಅಮರನಾಥ ರೆಡ್ಡಿ ತಿಳಿಸಿದರು.  

ಕೊಲೆ ಮಾಡಿರುವ ಆರೋಪಿತರ ಪತ್ತೆಗೆ ಮೂರು ತಂಡಗಳನ್ನು ರಚನೆ ಮಾಡಲಾಗಿದ್ದು. ವಿಷೇಶ ವೈದ್ಯಕೀಯ ತಂಡವು ಸಹ ಪತ್ತೆಗಾಗಿ ಆಗಮಿಸಿದ್ದು. ಆರೋಪಿಗಳನ್ನು ಕೂಡಲೇ ಬಂಧಿಸಿ. ಕಠಿಣ ಶಿಕ್ಷೆಗೆ ಗುರಿಪಡಿಸಲಾಗುತ್ತೆಂದು ತಿಳಿಸಿದರು. 

ಘಟನಾ ಸ್ಥಳಕ್ಕೆ ಜಿಲ್ಲಾ ಎಸ್‌ಪಿ, ಅಮರನಾಥ ರೆಡ್ಡಿ, ಡಿಎಸ್‌ಪಿ, ಶಾಂತವೀರ ಈ, ಸಿಪಿಐ ಮಲ್ಲಪ್ಪ ಮಡ್ಡಿ, ಗ್ರಾಮೀಣ ಠಾಣೆಯ ಪಿಎಸ್‌ಐ ಮಹೇಶ ಸಂಕ ಭೇಟಿ ನೀಡಿ ತನಿಖೆಯನ್ನು ಮುಂದುವರಿಸಿದ್ದಾರೆ. 


ಸುದ್ದಿ ಓದಿ