ದೇಶಕ್ಕೆ ಮಹಮ್ಮದ್ ಪೈಗಂಬರ್ ಅವರ ಕೊಡುಗೆ ಅಪಾರ: ಬೆಳಗಲಿ
ಜಮಖಂಡಿ 29: ಬುದ್ದ, ಬಸವ, ಡಾ,ಅಂಬೇಡ್ಕರ್, ಮಹಮ್ಮದ್ ಪೈಗಂಬರ್ ಅವರು ದೇಶಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ.ಅವರು ಯಾರು ಒಂದೇ ಸಮುದಾಯಕ್ಕೆ ಮೀಸಲು ಆಗದೆ. ಎಲ್ಲ ಸಮಾಜಕ್ಕೆ ನಾಯಕರಾಗಿದ್ದಾರೆಂದು ಮಾಜಿ ಜಿ,ಪಂ,ಉಪಾಧ್ಯಕ್ಷ ಸುಶೀಲಕುಮಾರ ಬೆಳಗಲಿ ಹೇಳಿದರು.
ನಗರದ ಮುಧೋಳ ರಸ್ತೆಯ ಅರ್ಷೇ ಮಸ್ಜೀದ ಮಡ್ಡಿ ಇದ್ಗಾ ಮೈದಾನದಲ್ಲಿ ನಡೆದ ಜರ್ಶನೆ ಈದ-ಎ-ಮಿಲಾದುನ್ನಬಿ ಸಹಯೋಗದಲ್ಲಿ ಮಹಮ್ಮದ ಪೈಗಂಬರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಮ್ಮದ ಪೈಗಂಬರ ಅವರು ಎಲ್ಲ ಸಮಾಜಕ್ಕೆ ಮಾದರಿ ಆಗಿದೆ ವ್ಯಕ್ತಿ. ಇವಾಗ ರಾಜಕೀಯ ಉದ್ದೇಶದಿಂದ ನಮ್ಮ ನಮ್ಮಲ್ಲಿ ಜಾತಿ, ಮತಗಳನ್ನು ಬೇರಿ್ಡಸಿ. ಮಾಹಾಮ ನಾಯಕರನ್ನು ಒಂದೇ ಜಾತಿಗೆ ಸೀಮಿತ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಇದು ಮೊದಲು ಹೋಗಬೇಕಾಗಿದೆ ಎಂದರು.
ದೇಶಕ್ಕೆ ಕೊಡುಗೆ ನೀಡಿದವರನ್ನು ಒಂದೇ ಸಮುದಾಯಕ್ಕೆ ಹೋಲಿಸದೆ. ಜಾತಿ, ಮತಗಳನ್ನು ಬಿಟ್ಟು. ಎಲ್ಲರೂ ಒಂದೇ ಎಂಬ ಭಾವಣೆಯಿಂದ ಮಹಮ್ಮದ ಪೈಗಂಬರ ಅವರ ದಿನಾಚರಣೆಯನ್ನು ಆಚರಿಸಬೇಕು. ಅವರ ಆದರ್ಶ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಬುದ್ದ, ಬಸವ, ಡಾ, ಅಂಬೇಡ್ಕರ್, ಮಹಮ್ಮದ್ ಪೈಗಂಬರ್ ಅವರು ದೇಶಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ.ಅವರು ಒಂದೇ ಜಾತಿಗೆ ಸೀಮಿತವಾಗದೆ. ದೇಶದ ಮಹಾನ ನಾಯಕರಾಗಿದ್ದಾರೆ ಎಂದರು.
ಮುತ್ತಿನಕಂತಿ ಮಠದ ಶಿವಲಿಂಗ ಪಂಡಿತರಾಧ್ಯ ಶಿವಾಚಾರ್ಯ ಶ್ರೀಗಳು ಆಶೀರ್ವಚನ ನೀಡಿ ಮಾತನಾಡಿದರು. 84 ಲಕ್ಷ ಜೀವರಾಶಿಗಳಲ್ಲಿ ಮಾನವ ಜನ್ಮ ಶ್ರೇಷ್ಠವಾಗಿದೆ. ಈ ಜನ್ಮವನ್ನು ಪಾವನ ಮಾಡಿಕೊಳ್ಳಬೇಕಾಗಿದೆ. ಮನುಷ್ಯ ನಿಧನ ಹೊಂದಿದ ನಂತರ ನೂರಾರು ವರ್ಷಗಳ ಕಾಲ ಅವರನ್ನು ನೆನಪಿಸಿಕೊಳ್ಳುವಂತ ವ್ಯಕ್ತಿಯಾಗಬೇಕಾದರೆ ಸಾಧನೆಯು ಬಹಳ ಮುಖ್ಯವಾಗಿದೆ. ಜೀವನದಲ್ಲಿ ಮೊದಲು ್ಲ ಸಂಸ್ಕಾರಗಳನ್ನು ಅವಳವಡಿಸಿಕೊಳ್ಳಬೇಕು. ಸಂಸ್ಕಾರ ಇದ್ದರೆ ಸಾಧನೆ ಮಾಡಲು ಸಾಧ್ಯ. ಮಹಮ್ಮದ್ ಪೈಗಂಬರ್ ಅವರು ತಮ್ಮ ಜೀವನದಲ್ಲಿ ನಡೆದು ತೋರಿಸಿದ್ದಾರೆ. ಮನುಷ್ಯನಿಗೆ ಧರ್ಮ ಮತ್ತು ದೇಶ ಬಹಳ ಮುಖ್ಯವಾಗಿದೆ. ದೇಶ ಮತ್ತು ಧರ್ಮ ಎರಡು ಕಣ್ಣುಗಳು ಇಂದತೆ. ಧರ್ಮಕ್ಕೆ, ದೇಶಕ್ಕೆ ತೊಂದರೆ ಬಂದರೆ ಸರಿಯಾಗಿ ನಿಭಾಯಿಸಬೇಕಾಗುತ್ತದೆ. ಇಸ್ಲಾಂ ಧರ್ಮ ಹಾಗೂ ಹಿಂದು ಧರ್ಮದ ದೇಶದಲ್ಲಿ ಎಲ್ಲರೂ ಒಂದಾಗಿ ಜೀವನ ಸಾಗಿಸುತ್ತಿದ್ದಾರೆ. ಹಿಂದು, ಇಸ್ಲಾಂ ಧರ್ಮದ ಆಚಾರ, ವಿಚಾರಗಳು ಬೇರೆಯಾದರು ಸಹ ಎಲ್ಲ ಸಭೆ, ಸಮಾರಂಭಗಳಲ್ಲಿ ಎಲ್ಲರೂ ಸೇರಿಕೊಂಡು ದೇಶಕ್ಕೆ ಕೊಡುಗೆ ನೀಡಿದ ಮಹಾನ ನಾಯಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಜೀವನದಲ್ಲಿ ಸಜ್ಜನರ ಸಂಘ ಮಾಡಬೇಕಾಗಿದೆ. ಧರ್ಮದ ಮೇಲೆ ಪ್ರೀತಿ, ಪ್ರೇಮ ಇರಬೇಕು. ದೇಶದಲ್ಲಿ ಎಲ್ಲ ಧರ್ಮದ ಜನರು ಇದ್ದಾರೆ. ಎಲ್ಲರೂ ಸಹಭಾಳ್ವೆಯಿಂದ ಜೀವನ ನಡೆಸಿಕೊಳ್ಳುತ್ತಿದ್ದಾರೆ. ಇಂದಿನ ಮಕ್ಕಳಿಗೆ ಮೊದಲು ಶಿಕ್ಕಣ ನೀಡಿ. ದೇಶಕ್ಕೆ ಒಳ್ಳೆಯ ವ್ಯಕ್ತಿಗಳನ್ನಾಗಿಸಬೇಕು. ಹಿಂದು, ಮುಸ್ಲಿಂ ಭೇಧ, ಭಾವಗಳನ್ನು ಮರೆತು ಎಲ್ಲರೂ ಒಂದೇ ಎಂದು ಭಾವಿಸಿ. ಮಹಮ್ಮದ್ ಪೈಗಂಬರ್ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಮೌಲಾನಾ ಅಬುಸ್ವಾಲಿಹಾ ರಝವಿ ಮಾತನಾಡಿದರು, ವೇದಿಕೆಯಲ್ಲಿ ಅರ್ಬನ ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಬ ಮನಗೂಳಿ, ಮಾಜಿ ನಗರಸಭೆ ಅಧ್ಯಕ್ಷರಾದ ಸಿದ್ದು ಮೀಶಿ, ದಾನೇಶ ಘಾಟಗೆ, ಕಾಂಗ್ರಸ್ ಪಕ್ಷದ ಜಿಲ್ಲಾ ಅಲ್ಪಸಂಖ್ಯಾತರ ಅಧ್ಯಕ್ಷ ರಫೀಕ ಬಾರಿಗಡ್ಡಿ, ಫಕೀರಸಾಬ ಬಾಗವಾನ, ಈಶ್ವರ ವಾಳೇನ್ನವರ, ರಿಯಾಜ ಅವಟಿ, ಸಾಧಿಕ ಬಂಟನೂರ, ಮೌಲಾನ ನೂರಜಮಾಲ, ಇನ್ನುಸ ಪಿರಜಾದೆ. ಹಾಫಿಜ ಶಾನವಾಜ, ಮಂಜೂರ ಇಲಾಹಿ ತೋರಗಲ್ಲ, ಮುಸ್ತಾಫಾ ಹಾಜಿ ಮುರ್ತಜಾ ಹಸನ ರಝನಿ, ಪೆಶೆಇಮಾಮ ಕುತಭೂದ್ದಿನ ಬಿಜಾಪೂರ, ಮೈಬುಬಸಾಬ ಅಪರಾಜ, ಮೈನೋದ್ದಿನ ಶಿರೋಳ, ಯುನೂಸ ಪೀರಜಾದೆ, ಅಜೀಜ ಮುಜಾವರ ಸೇರಿದಂತೆ ಅನೇಕರು ಇದ್ದರು. ಆಜಿಮಸಾಬ ಅವಟಿ ಸ್ವಾಗತಿಸಿದರು, ಉಸ್ಮಾನಮಕಾನಂದಾರ ಮೋಶಿನ ಇಲ್ಲಕಲ ನಿರೂಪಿಸಿದರು,
ಪೋಟೋ : ಜಮಖಂಡಿ ನಗರದ ಮುಧೋಳ ರಸ್ತೆಯ ಅರ್ಷೇ ಮಸ್ಜೀದ ಮಡ್ಡಿ ಇದ್ಗಾ ಮೈದಾನದಲ್ಲಿ ನಡೆದ ಜರ್ಶನೆ ಈದ-ಎ-ಮಿಲಾದುನ್ನಬಿ ಸಹಯೋಗದಲ್ಲಿ ಮಹಮ್ಮದ ಪೈಗಂಬರ ಜಯಂತಿಯೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಜಿ,ಪಂ,ಉಪಾಧ್ಯಕ್ಷ ಸುಶೀಲಕುಮಾರ ಬೆಳಗಲಿ ಮಾತನಾಡಿದರು,