ಸಶಸ್ತ್ರ ಸೀಮಾ ಬಲಪಡೆ ಪೊಲೀಸ್ ಸಿಬ್ಬಂದಿ ಪಥಸಂಚಲನ
ಲೋಕದರ್ಶನ ವರದಿ,
ಜಮಖಂಡಿ: 7:ಬರುವ 2023ರ ವಿಧಾನಸಭೆ ಚುನಾವಣೆಯಲ್ಲಿ ಜನತೆ ಶೇ 85ಕ್ಕೂ ಹೆಚ್ಚು ಮತವನ್ನು ಚಲಾಯಿಸಬೇಕೆಂದು ತಾಲೂಕಾಡಳಿತ ಗುರಿಯನ್ನು ಹೊಂದಿದೆ ಎಂದು ಎಸಿ, ಸಂತೋಷ ಕಾಮಗೌಡ ಹೇಳಿದರು.
ನಗರದಲ್ಲಿ 2023ರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮುಂಜಾಗ್ರತವಾಗಿ ಕೇಂದ್ರ ಸಶಸ್ತ್ರ ಸೀಮಾ ಬಲಪಡೆ ಹಾಗೂ ಜಮಖಂಡಿ ಉಪ ವಿಭಾಗದ ಅಧಿಕಾರಿ ಹಾಗೂ ಪೋಲಿಸ್ ಸಿಬ್ಬಂದಿಗಳೊಂದಿಗೆ ಮಾರ್ಚರೂಟ್ ಪಥಸಂಚಲನದಲ್ಲಿ ಮಾತನಾಡಿದ ಅವರು, ತಮ್ಮ ಅಮುಲ್ಯವಾದ ಮತದಿಂದ ಯಾರು ವಂಚಿತರಾಗಬಾರದು. ಎಲ್ಲ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತವನ್ನು ಚಲಾಯಿಸಬೇಕು.ಯಾವುದೇ ಆಸೆ, ಆಮಿಷ್ಯಕ್ಕೆ ಒಳಗಾಗದೆ ಮತವನ್ನು ನೀಡಬೇಕು. ಯಾವುದಕ್ಕೂ ಯಾರು ಭಯಪಡುವ ಅವಶ್ಯಕತೆ ಹೊಂದಬಾರದು. ಜನತೆಯಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಲು ಪಥ ಸಂಚಲನ ಕೈಗೊಳ್ಳಲಾಗಿದೆ ಎಂದರು.
ಡಿ,ಎಸ್,ಪಿ ಶಾಂತವೀರ ಈ, ಮಾತನಾಡಿ, ಪತಸಂಚಲನದಲ್ಲಿ 2 ಡಿ.ಎಸ್.ಪಿ.ಗಳು 6 ಜನ ಸಿಪಿಐಗಳು, 12 ಜನ ಪಿ.ಎಸ್.ಐಗಳು, 230 ಹೆಡ್ ಕಾನಸ್ಟೇಬಲ್ ಹಾಗೂ ಪೋಲಿಸರು ಪಥಸಂಚಲನದಲ್ಲಿ ಭಾಗಿಯಾಗಿದ್ದು. 2023 ರ ಚುನಾವಣೆಯಲ್ಲಿ ಯಾರು ದೊಂಬಿ,ಗಲಾಟೆಗಳನ್ನು ಮಾಡದಂತೆ. ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುಂಜಾಗ್ರತ ಕ್ರಮವಾಗಿ ಜನತೆಯಲ್ಲಿ ಅರಿವನ್ನು ಮೂಡಿಸುವ ಮೂಲಕ ಪತಸಂಚಲನ ಕೈಗೊಳ್ಳಲಾಗಿದೆ. ಚಿಕ್ಕಲಕಿ ಕ್ರಾಸ್, ಹುಲ್ಯಾಳ ಕ್ರಾಸ್, ಹುನ್ನೂರ ಹತ್ತಿರ ಚೆಕ್ ಪೋಸ್ಟ್ಗಳನ್ನು ತೆರೆಯಲಾಗಿದ್ದು. ಅಲ್ಲಿಗೆ ಬರುವ ವಾಹನಗಳನ್ನು ತಪಾಸಣೆ ಮಾಡಲು. ನಮ್ಮ ಇಲಾಖೆಯ ಸಿಬ್ಬಂದಿಗಳು. ರಾತ್ರಿ, ಹಗಲು ಕಾರ್ಯನಿರ್ವಹಿಸುತ್ತಿದ್ದಾರೆ. ಹುನ್ನುರ ಚೆಕ್ ಪೋಸ್ಟ್ದಲ್ಲಿ 2,5 ಲಕ್ಷ ರೂ,ಗಳಿಗೆ ಯಾವುದೇ ದಾಖಲಾತಿಗಳು ಇರದ ಕಾರಣ ಸೀಜ್ ಮಾಡಲಾಗಿದೆ ಎಂದರು.
ತಾಲೂಕಾ ಆಡಳಿತ ಭವನದಿಂದ ಪ್ರಾರಂಭಗೊಂಡ ಸಶಸ್ತ್ರ ಸಿಮಾ ಬಲಪಡೆ ಹಾಗೂ ಪೋಲಿಸ್ ಇಲಾಖೆ ಮತ್ತು ಅಧಿಕಾರಿಗಳು ನಗರದ ಎ ಜಿ ದೇಸಾಯಿ ಸರ್ಕಲ್, ಅಶೋಕ್ ಸರ್ಕಲ್, ಶಿವಾಜಿ ಸರ್ಕಲ್, ಅಂಬೇಡ್ಕರ್ ಸರ್ಕಲ್, ಬಸವೇಶ್ವರ ಸರ್ಕಲ್, ಟಿಪ್ಪು ಸುಲ್ತಾನ ಸರ್ಕಲ್, ಶಾ ಆಲಂ ಗೇಟ್, ಜಾಮಿಯಾ ಮಸೀದಿ, ಹನುಮಾನ್ ಚೌಕ್, ಮಾರ್ಗವಾಗಿ ಪತಸಂಚನ ಜರುಗಿತು. ನಗರದ ಪ್ರಮುಖ ರಸ್ತೆ ಮೂಲಕ ಪಥಸಂಚಲನ ಸಂಚರಿಸುತ್ತಿದ್ದಂತೆ ಸಶಸ್ತ್ರ ಸೀಮಾ ಬಲ ಪಡೆಗಳಿಗೆ ಹಾಗೂ ಪೋಲಿಸರಿಗೆ ನಗರದ ಜನತೆ ಗಲಾಬಿ ಹೂ ಮತ್ತು ವಿವಿಧ ಪುಷ್ಪಗಳನ್ನು ಹಾರಿಸುವ ಮೂಲಕ ಗೌರವನ್ನು ಸಲಿಸುತ್ತಿರುವುದು ಸಾಮಾನ್ಯವಾಗಿತ್ತು,
ಇದೇ ಸಂದರ್ಭದಲ್ಲಿ ತಹಶೀಲ್ದಾರ ಸದಾಶಿವ ಮಕ್ಕೋಜಿ, ಶಹರ ಠಾಣಿಯ ಪಿಎಸ್ಐ ಬಸವರಾಜ ಕೊಣ್ಣೂರೆ, ಗ್ರಾಮೀಣ ಠಾಣಿಯ ಪಿ ಎಸ್ಐ ಗಂಗಾ ಬಿರಾದರ, ಮಧು ಎಲ್, ಸೇರಿದಂತೆ ಸಶಸ್ತ್ರ ಸೀಮಾ ಬಲ ಪಡೆ ಮತ್ತು ಪೋಲಿಸರು ಇದ್ದರು.