ಗೋಕಾಕ್

ಹಣ-ಗುಣ ಸಮಾನ: ಡಾ.ಸಿ.ಕೆನಾವಲಗಿ

ಹಣ-ಗುಣ ಸಮಾನ: ಡಾ.ಸಿ.ಕೆನಾವಲಗಿ

ಲೋಕದರ್ಶನ ವರದಿ

ಗೋಕಾಕ 05:  ಜಾಗತೀಕರಣದ ಸಂದರ್ಭದಲ್ಲಿ ಮಾನವ ಜೀವನದ ಅಭಿವೃದ್ಧಿಯಲ್ಲಿ ಹಣ-ಗುಣಗಳೆರಡೂ ಸರಿಸಮಾನ ಪಾತ್ರ ವಹಿಸಿವೆ ಎಂದು ಜಾನಪದ ತಜ್ಞ ಡಾ. ಸಿ.ಕೆ.ನಾವಲಗಿ ಅಭಿಪ್ರಾಯಿಸಿದರು. 

ಅವರು ಕನಸು ಫೌಂಡೇಶನ್ ವೇದಿಕೆಯವರ ಪ್ರಾಯೋಜಕತ್ವದಲ್ಲಿ ನಗರದ ಶಂಕರಲಿಂಗ ಸಂಸ್ಥೆಯ ಸಭಾಭವನದಲ್ಲಿ, ಶಂಕರಲಿಂಗ ಜಾತ್ರೆಯ ನಿಮಿತ್ತವಾಗಿ ಹಮ್ಮಿಕೊಂಡ ಹಣ ಹೆಚ್ಚೋ! ಗುಣ ಹೆಚ್ಚೋ! ಹರಟೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. 

ಜಗತ್ತಿನ ಶ್ರೀಮಂತರಲ್ಲೋರ್ವ ರತನ್ ಟಾಟಾ ತನ್ನ ಒಟ್ಟು ಉತ್ಪಾದನೆಯ ಶೇ.65ರಷ್ಟು ಸಂಪತ್ತನ್ನು ಬಡವರು, ದೀನದಲಿತರು, ಸಮಾಜ ಸೇವೆಗಾಗಿ ವಿನಿಯೋಗಿಸುತ್ತಾ ಬಂದವರು. ಅಂತೆಯೇ ಸುಧಾಮೂರ್ತಿ , ಸಿದ್ದಗಂಗಾ ಶ್ರೀಗಳು, ವೀರೇಂದ್ರ ಹೆಗ್ಗಡೆ, ಪುನೀತ ರಾಜಕುಮಾರ ಅಂಥವರೆಲ್ಲ ದುಡ್ಡಿನ ಶ್ರೀಮಂತರಾಗಿರುವುದರ ಜೊತೆಗೆ ಗುಣದ ಶ್ರೀಮಂತರಾಗಿದ್ದೂ, ಹಣ-ಗುಣಗಳೆರಡನ್ನು ಸರಿಸಮಾನವಾಗಿ ಕಂಡ ಜಗತ್ತಿನ ನಿಜವಾದ ಶ್ರೀಮಂತರೆನಿಸಿಕೊಂಡವರು. ಹಾಗಾಗಿ ಹಣ-ಗುಣ ಒಂದೇ ನಾಣ್ಯದ ಎರಡು ಮುಖಗಳೆಂದು ತಮ್ಮ ಅಧ್ಯಕ್ಷೀಯ ತೀರ್ಪು  ನೀಡಿದ್ದನ್ನು ವಾದಿ ಪ್ರತಿವಾದಿ, ಸಭಿಕರೆಲ್ಲ ಹಷರ್ೊದ್ಗಾರದಿಂದ ಸ್ವಾಗತಿಸಿದರು. 

ಬಸವರಾಜು ಮುರಗೋಡ, ಡಾ.ಆರ್ಎಚ್. ಗುಣಕಿ, ವಿಜಯ ಧುಳಾಯಿ, ಡಾ.ಜಿ.ಎಂಕಾಮೋಜಿ, ಡಾ.ಶಶಿಕಲಾ ಕಾಮೋಜಿ, ಶಶಿಕಲಾ ಕೌತನಾಳಿ ಉಪಸ್ಥಿತರಿದ್ದರು. 

ಎಸ್.ಕೆ.ಮಠದ, ಟಿ.ಬಿ.ಬಲ್, ವಿನುತಾ ನಾವಲಗಿ, ಶಕುಂತಲಾ ದಂಡಗಿ, ಬಿ.ಎಸ್.ಜೋಲಾಪುರ, ಶಿಕ್ಷಣ ಸಾಹಿತಿಗಳು ಹಣ ಹೆಚ್ಚೆಂದು; ಸೋಮಶೇಖರ ಮಗದುಮ್, ರಾಮಚಂದ್ರ ಕಾಕಡೆ, ಆರ್. ಎಲ್. ಮಿಜರ್ಿ, ಪ್ರೇಮ ಜಕ್ಕಣ್ಣನವರ್, ಎಲ್ಲಪ್ಪ ಕುರುಬಗಟ್ಟಿ ಶಿಕ್ಷಣ ಸಾಹಿತಿಗಳು ಗುಣ ಹೆಚ್ಚೆಂದು ತಮ್ಮ ವಾದ ಮಂಡಿಸಿದರು 

ಸುದ್ದಿ ಓದಿ