ಸಿಂಧಗಿ

ಶಾಲಾ ಸಂಸತ್ತು ರಚನೆ ಪ್ರಯುಕ್ತ ಮಾದರಿ ಚುನಾವಣೆ

ಶಾಲಾ ಸಂಸತ್ತು ರಚನೆ ಪ್ರಯುಕ್ತ ಮಾದರಿ ಚುನಾವಣೆ
ತಾಲೂಕಿನ ಕನ್ನೊಳ್ಳಿಯ ಲಕ್ಷ್ಮೀ ವಿದ್ಯಾವರ್ಧಕ ಪ್ರೌಢಶಾಲೆಯಲ್ಲಿ 2022- 23 ನೇ ಸಾಲಿನ ಶಾಲಾ ಸಂಸತ್ತು ರಚನೆ.

ಸಿಂದಗಿ08; ತಾಲೂಕಿನ ಕನ್ನೊಳ್ಳಿಯ ಲಕ್ಷ್ಮೀ ವಿದ್ಯಾವರ್ಧಕ ಪ್ರೌಢಶಾಲೆಯಲ್ಲಿ 2022- 23 ನೇ ಸಾಲಿನ ಶಾಲಾ ಸಂಸತ್ತು ರಚನೆಯ ಪ್ರಯುಕ್ತ ಮಾದರಿ ಚುನಾವಣೆಯನ್ನು ಹಮ್ಮಿಕೊಳ್ಳಲಾಯಿತು. 

ದೈಹಿಕ ಶಿಕ್ಷಕ ಬಿ.ಟಿ.ಚೌಧರಿ ಹಾಗೂ ಎಸ್ ಜಿ ಬರಗಿ ಅವರು ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು. ಮತಗಟ್ಟೆ ಮುಖ್ಯಾಧಿಕಾರಿಯಾಗಿ ಶಿಕ್ಷಕ ಎಮ್ ಎಸ್ ಶಂಬೇವಾಡ ಶಿಕ್ಷಕರು ಕರ್ತವ್ಯ ನಿರ್ವಹಿಸಿದರು. ಸಹಾಯಕ ಮತಗಟ್ಟೆ ಅಧಿಕಾರಿಗಳಾಗಿ ಎಮ್ ಎನ್ ಬಡಿಗೇರ್, ಡಿ ಸಿ ನಾಗಠಾಣ ಹಾಗೂ ಜಿ ಎಸ್ ಪಾಟೀಲ ಶಿಕ್ಷಕರು ಕಾರ್ಯನಿರ್ವಹಿಸಿದರು. ಮತ ಎಣಿಕೆ ಕಾರ್ಯವನ್ನು ಬಿ ಎನ್ ಬಿರಾದಾರ , ಐ ಡಿ ಪಡಶೆಟ್ಟಿ, ಹಾಗೂ ಶ್ರೀಮತಿ ಆರ್ ಆರ್ ಕನ್ನೂರ   ಕರ್ತವ್ಯ ನಿರ್ವಹಿಸಿದರು..ಈ ಮಾದರಿ ಚುನಾವಣೆಯಲ್ಲಿ ಶಾಲೆಯ ಪ್ರಧಾನ ಕಾರ್ಯದರ್ಶಿಯಾಗಿ 10ನೇ ತರಗತಿ ವಿದ್ಯಾರ್ಥಿಯಾದ ಆಕಾಶ ಗುಡಿಮನಿ ಆಯ್ಕೆಯಾದರು. 

ಸುದ್ದಿ ಓದಿ