ಭಾರತೀಯತೆ; ರಾಷ್ಟ್ರಧರ್ಮ
- ಎಫ್. ಎಸ್. ಪಾಟೀಲ್
ಸ್ವಾತಂತ್ರ್ಯ, ಸಾರ್ವಭೌಮ ರಾಷ್ಟ್ರ ಜಿಜ್ಞಾಸೆ ಬಗ್ಗೆ ಕಳೆದ ಲೇಖನದಲ್ಲಿ ಬಿತ್ತರವಾಗಿತ್ತು. ರಾಷ್ಟ್ರ ಎನ್ನುವ ಸಂಸ್ಕೃತ ಪದವೇ ವಿಷಿಷ್ಟ! 'ರಾಷ್ಟ್ರೀಯ' ಎನ್ನುವುದು ವಿಷೇಷಣ ಆಂಗ್ಲದ 'ಸ್ಟೇಟ್ ಅಥವಾ 'ನೇಷನ್ಗೆ ಸಮಾನಾರ್ಥಕ. ಕಂಟ್ರಿ(ಛಿಠಣಟಿಣಡಿಥಿ) ಎಂದು ಕರೆಯುವುದು. ಸಂಕುಚಿತವಾಗುತ್ತದೆ. ಈ 'ಕಂಟ್ರಿ ಪದ ಭೌಗೋಳಿಕವಾಗಿ ಒಂದು ಪ್ರಾಂತ್ಯವನ್ನು ಸೂಚಿಸುತ್ತದೆ. ಹೋರತು 'ರಾಷ್ಟ್ರದಲ್ಲಿರುವ ಜನಜೀವನ, ರಾಜಕೀಯ-ಆಡಳಿತ ಸಂಸ್ಕೃತಿಯನ್ನಲ್ಲ. 'ರಾಷ್ಟ್ರ ಏನ್ನುವುದು ಒಂದು ನಿದರ್ಿಷ್ಟ ಪ್ರದೇಶದಲ್ಲಿ, ಒಂದು ಸಾಮಾನ್ಯವಾದ ಸಂವಹನದ ಭಾಷೆಯಲ್ಲಿ, ಜನಾಂಗದ ಮನೋಗತ ಸಂಸ್ಕ್ರತಿ ಮತ್ತು ಆಥರ್ಿಕತೆಯನ್ನು ಎತ್ತಿ ಹೇಳುತ್ತದೆ. ಆದಾಗ್ಯೂ ರಾಷ್ಟ್ರ ಜನರಿಂದ ಅಮೂರ್ತವಾಗಿ ಬೇರ್ಪಡೆಯಾಗಿರುತ್ತದೆ.
ರಾಷ್ಟ್ರ ಒಂದು ಸಾಂಸ್ಕ್ರತಿಕ-ರಾಜಕೀಯ ಸಮುದಾಯವಾಗಿ, ತನ್ನ ಸ್ವಾಯತ್ತತೆ, ಏಕತೆ ಮತ್ತು ತನ್ನದೇ ಆದ ಇತರ ಹಿತಾಸಕ್ತಿಗಳನ್ನು ಒಳಗೊಂಡಿರುತ್ತದೆ. ಬಹುಜನರ ಸಾಮಾನ್ಯ ಸೃಷ್ಠಿ ಮೂಲ, ಭಾಷೆ, ಸಂಪ್ರದಾಯ, ನಡಾವಳಿ, ಬಳುವಳಿ ಎಲ್ಲ ಸೇರಿ ಒಂದು ರಾಜಕೀಯ ಅಸ್ತಿತ್ವ ಕಂಡುಕೊಂಡದ್ದು, ರಾಷ್ಟ್ರ ಅಥವಾ ರಾಷ್ಟ್ರ-ರಾಜ್ಯ ಎಂದು ಕರೆಯಲ್ಪಡುತ್ತದೆ. ರಾಷ್ಟ್ರ ಒಂದು ಆತ್ಮ ಆಧ್ಯಾತ್ಮಿಕ ತತ್ವ ಎನ್ನತ್ತಾನೆ ಚಿಂತಕ ಅನರ್ೆಸ್ಟ ರೆನನ್. ಭಾರತದ ಮುಟ್ಟಿಗೆ ಅದು 'ಸತ್ವ ಸತ್ಯ ತತ್ವ. ಭೂತ ಮತ್ತು ವರ್ತಮಾನದಲ್ಲಿ ಆತ್ಮ ಮತ್ತು ಆಧ್ಯಾತ್ಮಿಕ ತತ್ವ ಎರಡೂ ಒಂದೆ. ಒಂದು ಸಾಮಾನ್ಯವಾಗಿ ಐತಿಹಾಸಿಕವಾಗಿ ಹರಿದು ಬಂದ ಪೂವರ್ಾಜಿತ ದತ್ತಿ, ಇನ್ನೊಂದು ವರ್ತಮಾನದಲ್ಲಿ ಜೊತೆಯಾಗಿರುವ ಸಮ್ಮತಿ, ಹಾಗೂ ಪೂವರ್ಾಜಿತವಾಗಿ ಹಿಂದಿನಿಂದ ಬಂದ ಸಂಸ್ಕೃತಿಯನ್ನು ಮುಂದುವರೆಸಿಕೊಂಡು ಹೋಗುವ ಮನಸತ್ವ.
"ಭಾರತೀಯ ಜನಗಳಾದ ನಾವು (ತಿಜ ಣಜ ಕಜಠಠಿಟಜ ಠಜಿ ಟಿಜಚಿ) ಸಂವಿಧಾನದ ಪ್ರಸ್ತಾವನೆಯಲ್ಲಿ ಸ್ವೀಕರಿಸಿರುವ ಪ್ರತಿಜ್ಞಾವಿಧಿ ಕೂಡ ಅದೇ. "ಭಾರತವನ್ನು ಒಂದು ಸಾವರ್ಾಭೌಮ, ಸಾಮಾಜಿಕ, ಜಾತ್ಯಾತಿತ, ಪ್ರಜಾಸತೇಯ ಗಣತಂತ್ರವಾಗಿ"ನಿಮರ್ಿಸಿ...ಮತ್ತು ಆ ಎಲ್ಲ ಪ್ರಜೆಗಳಲ್ಲಿ ಭಾತೃತ್ವ ಬೆಳೆಸಿ, ವ್ಯಕ್ತಿ ಘನತೆಯಲ್ಲಿ ಮತ್ತು ರಾಷ್ಟ್ರೀಯ ಏಕತೆ ಮತ್ತು ದಕ್ಷತೆಗಳ ಭರವಸೆಯನ್ನಿಯುತ್ತ್ತ....ಎಂದು ಘೋಷಿಸಿಕೊಳ್ಳ್ಳುವಾಗ ರಕ್ತದ ಕಣ ಕಣಗಳಲ್ಲಿ, ರೋಮ ರೋಮಗಳಲ್ಲಿ ಪುಟಿದೇಳುತ್ತದೆ ರಾಷ್ಟ್ರೀಯತೆ, 1947ರಿಂದ ಇಲ್ಲಿಯವರೆಗೆ ರಾಷ್ಟ್ರದ ಏಕತೆಗೆ ಭೌಗೋಳಿಕವಾಗಿ ಅಷ್ಟೊಂದು ತೊಂದರೆ ಆಗಿಲ್ಲ, ಕಾಶ್ಮೀರ ಕಣಿವೆಯನ್ನು ಹೊರತುಪಡಿಸಿ, ವಿಷಾದವೆಂದರೆ ಆಂತರಿಕವಾಗಿ ಸರ್ವಜನಮನದಲ್ಲಿ ಅದರ ಕಿಚ್ಚು, ಐಕ್ಯತೆಯ ಶಕ್ತಿ, ಭ್ರಾತೃತ್ವದ ರೋಮಾಂಚಕ ಸ್ವುರಣೆ, ಬೆಳೆಯುತ್ತಿಲ್ಲ.
ಭರತ, ಭಾರತ, ಭರತವರ್ಷ, ಭರತಖಂಡ ಎಂದು ಐತಿಹಾಸಿಕವಾಗಿ ಗುರುತಿಸಿಕೊಂಡ ನಮ್ಮದೇಶ ಅನೇಕ ಚಕ್ರವತರ್ಿಗಳ ಆಳ್ವಿಕೆಯಲ್ಲಿ ಏಕೀಕೃತವಾಗಿತ್ತು. ಮೌರ್ಯ, ಗುಪ್ತ, ರಾಷ್ಟ್ರಕೂಟ, ಪಾಲಾ ಸಾಮ್ರಾಜ್ಯದಿಂದ ಮುಂದೆ ಮುಘಲ್. ಬ್ರಿಟಿಷ್ ಸಾಮ್ರಜ್ಯದ ಸಕರ್ಾರಗಳಿಂದಲೂ ತನ್ನ ಅಸ್ತಿತ್ವ ಕಾಯ್ದುಕೊಂಡಿತ್ತು. ನಮ್ಮ ರಾಷ್ಟ್ರತ್ವದ ಪರಿಕಲ್ಪನೆ ಸಿಂಧೂ ಕಣಿವೆಯ ನಾಗರೀಕತೆ, ವೇದಗಳ ಕಾಲದ ನಾಗರೀಕತೆ, ಆರ್ಯ, ದ್ರಾವಿಡ ಹಾಗೂ ಮುಂಗೋಲಿ ಜನಾಂಗಗಳ ನಾಗರೀಕತೆಯ ಜೋತಗೆ ಹಾಸುಹೊಕ್ಕಗಿದೆ.
ಭಾರತ ಮೂಲತಃ ಒಂದು ಆಧ್ಯಾತ್ಮಿಕ ರಾಷ್ಟ್ರ, ಇಲ್ಲಿ ಮನುಕುಲದ ಉನ್ನತಿ ಹಾಗೂ ಜನಜೀವನವನ್ನು ಮೋಕ್ಷ ಸಾಧನೆಗೆ, ದೇವರ ಹುಡುಕಾಟಕ್ಕೆ, ದೈವೀ ಭಾವನೆಯ ಅಭಿವ್ಯಕ್ತಿಗೆ ಒತ್ತು ನೀಡಲಾಗಿದೆ. ವ್ಯಾಪರ, ವ್ಯವಹಾರ, ರಾಜಕೀಯ ಎಲ್ಲವೂ ನಮಗೆ ನಂತರದ ವಿಚಾರಗಳು. ಭಾರತೀಯರಲ್ಲಿ ಮಾನವೀಯತೆ-ಊಣಟಚಿಟಿಟ ಮೇಲ್ಮೆಯಲ್ಲಿರುತ್ತದೆ.
ರಾಜಕೀಯ ಅಧಿಕಾರಕ್ಕಾಗಿ ಯುದ್ಧ, ಕೊಲೆ, ಸುಲಿಗೆ ನಡೆದಿದ್ದರೂ, ಅವೆಲ್ಲ ಭೌತಿಕ, ಲೌಕಿಕತೆಯ ಲಾಲಸೆಗಳನ್ನು ಮೀರಿ, ತ್ಯಾಗದಿಂದ ಆಧ್ಯಾತ್ಮಿಕ ದಾರಿ ಆನುಸರಿಸಿ ಮಹೋನ್ನತಿ ಮಾರ್ಗ ಸೂಚಿಸಿದ; ಬುದ್ಧನಾದ ಗೌತಮ, ಅಶೋಕ ಚಕ್ರವತರ್ಿ, ಬಾಹುಬಲಿ, ಋಷಿಯಾದ ವಿಶ್ವಾಮಿತ್ರರಂತೆ ಅನೇಕರಿದ್ದಾರೆ.
"ಭಾರತೀಯ ರಾಷ್ಟ್ರೀಯತೆ" ಮುಖ್ಯವಾಗಿ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಸ್ವಾತಂತ್ರ್ಯ ಚಳುವಳಿಯಲ್ಲಿ ಪ್ರಮುಖ ವಾಹಿನಿಯಾಗಿ ಬೆಳೆಯಿತು. ಅದು ಯಾವಾಗ್ಯೂ ಜನಮನದಲ್ಲಿ ಅಂತರ್ಗತವಾಗಿ ಅಂತಃಸಾಕ್ಷಿಯಾಗಿ ಇತ್ತು, ಇದೆ ಮತ್ತು ಇರುತ್ತದೆ. ಅದು ಸಂಪೂರ್ಣ ಭರತಖಂಡದಲ್ಲಿ ಭೌಗೋಳಿಕವಾಗಿ, ಜನಾಂಗೀಯವಾಗಿ, ಎಲ್ಲ ವಿವಿಧತೆ ಮತ್ತು ವೈರುದ್ಯತೆಗಳನ್ನು ಮೀರಿ ಜಾಗೃತವಾಗಿದೆ. ಸಧ್ಯಕ್ಕೆ ನಿತ್ಯ ಪ್ರಾಜ್ಞತೆ ಕಾಣಬೇಕಾಗಿದೆ. ಭಾರತೀಯ ರಾಷ್ಟ್ರೀಯತೆಯನ್ನು ಎಲ್ಲ ಸ್ತರದಲ್ಲಿ ನೀರೆರೆದು ಪೊಷಿಸಬೇಕಾಗಿದೆ. ಕಾರಣ; ಸದ್ಯಕ್ಕೆ ವರ್ತಮಾನದಲ್ಲಿ ಘಾತಕ ರೀತಿಯಲ್ಲಿ, ಸರ್ವಜನ ಭಯಭೀತರಾಗುವಂತೆ ತೊಂದರೆ ಒಡ್ಡುತ್ತಿರುವ ಮತಿಯವಾದ, ಜಾತಿವಾದ, ಪ್ರಾಂತೀಯ ಮನೋಭಾವನೆ, ಸ್ವಜನ ಪಕ್ಷಪಾತದಂತಹ ರಾಷ್ಟ್ರೀಯ ಪಿಡಗುಗಳನ್ನು ಮೀರಿ 'ಭಾರತ'ವನ್ನು ಶಕ್ತಿಶಾಲಿಯಾಗಿ ನಿಲ್ಲಿಸುವ ಚೈತನ್ಯ 'ರಾಷ್ಟ್ರವಾದಕ್ಕಿದೆ.
"ಧರ್ಮ ಎಂದು ಉಚ್ಛರಿಸುವ ಸಂಸ್ಕೃತ ಮೂಲದ ಶಬ್ಧಕ್ಕೆ, ಆಂಗ್ಲ ಅಥವಾ ಇತರ ಪಾಶ್ಚಾತ್ಯ ಭಾಷೆಗಳಲ್ಲಿ ಸಮಾನಾರ್ಥಕ ಪದಗಳು ಇಲ್ಲವೇ ಇಲ್ಲ. ಧರ್ಮ ಎಂದರೆ ಸರ್ವಕಾಲಕ್ಕು ಸಕ್ಷಮವಾಗಿ ನಮ್ಮ ನಡತೆ ಸರಿಯಾಗಿರುವುದು. ಬದುಕಿನ ನಿರ್ವಹಣೆಯಲ್ಲಿ ದುರ್ನಡತೆಗೆ ಅವಕಾಶವಿಲ್ಲದಿರುವುದು. ಕರ್ತವ್ಯ, ಬದ್ಧತೆ, ಮೌಲ್ಯ, ಹಕ್ಕುಗಳೊಂದಿಗೆ ಸರಿಯಾಗಿರುವುದು. ಅಂತಃಪ್ರಜ್ಞೆಯಲ್ಲಿ ನಿರ್ಮಲವಾಗಿದ್ದು ಮಾನವರ ನೈತಿಕ ಮೌಲ್ಯಗಳನ್ನು ನ್ಯಾಯಯುತವಾಗಿ ಎತ್ತಿಹಿಡಿಯುವುದು. ಯಾವಾಗಲೂ ಯಾವುದೇ ಜೀವಕ್ಕ್ಕೂ ಹಾನಿ ಮಾಡದಿರುವುದು, ಧರ್ಮಕ್ಕೆ ಧರ್ಮವೇ ಸಾಟಿ. ಧರ್ಮಕ್ಕೆ ವಿರುದ್ಧವಾಗಿ 'ಅಧರ್ಮ ಪದವಿದೆ ಹೊರತು, ಆ-ಧರ್ಮ ಈ-ಧರ್ಮ ಇರಲು ಸಾಧ್ಯವಿಲ್ಲ. "ಶಬ್ಧ ಮೂಲ ಶಾಸ್ತ್ರ (ಇಣಟಠಟಠರಥಿ) ದ ಪ್ರಕಾರ ಸಂಸ್ಕೃತದಲ್ಲಿ 'ಧರ್ ಎಂದರೆ ಹೊಂದುವುದು, ಕಾಯ್ದುಕೊಳ್ಳುವುದು, ನಡೆಸಿಕೊಡುವುದು. ಈ 'ಧರ್ಮ ಪದ ಒಂದು ಪರಿಕಲ್ಪನೆಯಾಗಿ, ಶತ- ಶತಮಾನಗಳಿಂದ ಬೆಳೆದು ಬಂದಿದ್ದು ಭಾರತೀಯ ತತ್ವಶಾಸ್ತ್ರದಲ್ಲಿ ಕೇಂದ್ರಿಕೃತ ಪ್ರಾಮುಖ್ಯತೆ ಪಡೆದಿದೆ. ಹಲವಾರು ಪಾಶ್ಚಾತ್ಯ ಚಿಂತಕರು. ವೇದಗಳನ್ನು ಓದಿ ಅನುವಾದಿಸಿದರೂ ಈ ಪದಕ್ಕೆ ತಕ್ಕುದಾದ ಪದ ನೀಡುವಲ್ಲಿ ವಿಫಲರಾಗಿದ್ದಾರೆ. ಆದರೂ ಈ ಪದಕ್ಕೆ ಅರ್ಥವಾಗಿ "ಆಜ್ಞೆ, ಕರ್ತವ್ಯ, ಕಸ್ಟಮ್-ಸಂಪ್ರದಾಯ, ಮಾದರಿ, ಶಾಸ್ತ್ರ, ಎಂತೆಲ್ಲ ಅಥರ್ೈಸಿ ಬಳಸಿಕೊಂಡಿದ್ದಾರೆ. ಒಟ್ಟಾರೆ ಧರ್ಮ ಎನ್ನುವುದು ಮಾನವ ಬದುಕಿನ ಸರಿಮಾರ್ಗ.
ಧರ್ಮ ಎಂದರೆ ಯಾವುದೇ ಮತ, ಪಂಥ, ಹೆಸರಿದ್ದ ದೇವ, ಜಾತಿ, ರೀತಿ, ಅಲ್ಲ. ಖಜಟರಠಟಿ ಅಂತೂ ಅಲ್ಲವೇ ಅಲ್ಲ. ಹಾಗಿದ್ದರೆ, ನಮಗೆ, "ಭಾರತೀಯ ಜನಕ್ಕೆ" ಯಾಕೇ ಬೇಕು ಜಾತಿವಾದ, ಮತೀಯವಾದ, ಅವುಗಳ ದೇವರುಗಳ ಹೆಸರಿನಲ್ಲಿ ಕಿತ್ತಾಟ, ಕಚ್ಚಾಟ? ಬೇಕಿರುವುದು "ಭಾರತೀಯ ರಾಷ್ಟ್ರಧರ್ಮ. ಅದಕ್ಕಾಗಿ ಹೇಗೆ ವಾದಿಸುವುದು? ಪಾಲ್ಗೊಳ್ಳಿ!