ಜಮಖಂಡಿ

ತಾಲೂಕಾಡಳಿತ ಸೌಧದ ಆವರಣದಲ್ಲಿ ತಳವಾರ ಸಮಾಜದಿಂದ ಬೃಹತ್ ಪ್ರತಿಭಟನೆ

ತಾಲೂಕಾಡಳಿತ ಸೌಧದ ಆವರಣದಲ್ಲಿ ತಳವಾರ ಸಮಾಜದಿಂದ ಬೃಹತ್ ಪ್ರತಿಭಟನೆ

ಜಮಖಂಡಿ 05:  ತಳವಾರ ಜಾತಿಯವರಿಗೆ ಪರಿಶಿಷ್ಟ ಪಂಗಡದ (ಎಸ್‌ಟಿ) ಪ್ರಮಾಣ ಪತ್ರ, ಸಿಂಧುತ್ವ ಪ್ರಮಾಣ ಪತ್ರ ವಿತರಿಸುವಲ್ಲಿ ನ್ಯಾಯಾಲಯ ನಿರ್ದೇಶನ ನೀಡಿದೆ. ಅದರಂತೆ ರಾಜ್ಯ ಸರಕಾರ (ಎಸ್‌ಟಿ) ಪ್ರಮಾಣ ಪತ್ರ, ಸಿಂಧುತ್ವ ಪ್ರಮಾಣ ಪತ್ರ ವಿತರಿಸಬೇಕೆಂದು ರಾಜ್ಯ ತಳವಾರ ಮಹಾಸಭಾ ನಗರ ಮತ್ತು ತಾಲೂಕು ಘಟಕ ಸಂಘಟನೆಯು ಸರಕಾರವನ್ನು ಒತ್ತಾಯಿಸಿದರು. 

ನಗರದ ತಾಲೂಕಾಡಳಿತ ಸೌಧದ ಆವರಣದಲ್ಲಿ ಕೆಲಕಾಲ ಬೃಹತ್ ಪ್ರತಿಭಟನೆಯನ್ನು ನಡೆಸಿ, ನಂತರ ಉಪವಿಭಾಗಾಧಿಕಾರಿ, ತಹಶೀಲ್ದಾರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಪ್ರತ್ಯೇಕ ಮನವಿ ಸಲಿಸುವ ಮೂಲಕ ರಾಜ್ಯ ಸರಕಾರಕ್ಕೆ ಒತ್ತಾಯಿಸಿದರು. 

ನಂತರ ಮಾತನಾಡಿದ ಅವರು, ನ್ಯಾಯಾಲಯವು ಡಬ್ಲೂಪಿ 13777/23, ದಿನಾಂಕ 12,08,2024 ರಂದು ತಳವಾರ ಜಾತಿ ಪ್ರಮಾಣ ಪತ್ರಕ್ಕೆ ಸಂಬಂಧಪಟ್ಟ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡು, ನೈಜ ತಳವಾರ ಜಾತಿಯವರಿಗೆ ಅಗತ್ಯ ದಾಖಲೆಗಳನ್ನು ಪರೀಶೀಲಿಸಿ, ಪರಿಶಿಷ್ಟ ಪಂಗಡದ (ಎಸ್‌ಟಿ) ಪ್ರಮಾಣ ಪತ್ರಗಳನ್ನು ನೀಡುವಂತೆ ರಾಜ್ಯ ಸರಕಾರಕ್ಕೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ ಎಂದರು. 

ಒಂದೇ ಜಾತಿ ಸಂಘಟನೆಗಳು ಸರ್ಕಾರಕ್ಕೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿ ತಳವಾರರಿಗೆೆ ಎಸ್‌ಟಿ ಪ್ರಮಾಣ ಪತ್ರ ಹಾಗೂ ಸಿಂದುತ್ವ ಪ್ರಮಾಣ ಪತ್ರ ನೀಡದಂತೆ ವಿಶೇಷವಾಗಿ ಕಲಬುರ್ಗಿ, ಯಾದಗಿರಿ, ವಿಜಯಪೂರ,ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳಿಗೆ ಅನಾವಶ್ಯಕ ಒತ್ತಡ ಹಾಕಿದ್ದರಿಂದ ಅಧಿಕಾರಿಗಳು ಗೊಂದಲಕ್ಕೀಡಾಗಿದ್ದರು, ನ್ಯಾಯಾಲಯ ಅಭಿಪ್ರಾಯಿಸಿದಂತೆ ಸರ್ಕಾರವು ಸಾಂವಿಧಾನಿಕವಾಗಿ ತಳವಾರ ಜಾತಿಯವರಿಗೆ ಪರಿಶಿಷ್ಟ ಪಂಗಡದ ಎಸ್‌ಟಿ ಪ್ರಮಾಣ ಪತ್ರ ಕೊಡುವುದನ್ನು ಮುಂದುವರಿಸಬೇಕೆಂದು ನ್ಯಾಯಾಲಯ ನಿರ್ದೇಶನ ನೀಡಿದೆ, ಮುಂದುವರೆದು, ಯಾವದೇ ಪ್ರಮಾಣ ಪತ್ರಗಳನ್ನು ಕೊಡದಂತೆ ಉಚ್ಚ ನ್ಯಾಯಾಲಯ ಯಾವುದೇ ನಿರ್ದೇಶನ ಇದುವರೆಗೂ ಸರಕಾರಕ್ಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ, ಆದ್ದರಿಂದ ತಾವು ನೈಜ ತಳವಾರರಿಗೆ ಎಸ್‌ಟಿ ಪ್ರಮಾಣ ಪತ್ರ, ಸಿಂಧೂತ್ವ ಪ್ರಮಾಣ ಪತ್ರ ಹಾಗೂ ಸರಕಾರದ ಸೌಲಭ್ಯಗಳನ್ನು ನೀಡಬೇಕೆಂದು ಸರಕಾರಕ್ಕೆ ಒತ್ತಾಯಿಸಿದರು. 

ಇದೇ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸಿದ್ರಾಮೇಶ ಮೀಶಿ, ವಿಜಯಪೂರ ಜಿಲ್ಲಾಧ್ಯಕ್ಷ ಪ್ರಕಾಶ ಸೊನ್ನದ, ತಾ,ಅಧ್ಯಕ್ಷ ಸಂಗಮೇಶ ನಾಗನೂರ, ನಗರ ಅಧ್ಯಕ್ಷ ರಾಮಪ್ಪ ತಳವಾರ, ಕೃಷ್ಣಾ ತಳವಾರ, ಆನಂದ ಪುಕಾಳೆ, ರಾಜು ಹಡಗಲಿ, ಶಿವಾನಂದ ಜತ್ತಿ, ಮಲ್ಲಿಕಾರ್ಜುನ ದಳವಾಯಿ, ಬಸು ಕೋಳಿ, ಶಿವು ಗಸ್ತಿ, ರಾಮು ಚಿಪ್ಪಲಕಟ್ಟಿ, ನಂದೇಪ್ಪ ತಳವಾರ ಸೇರಿದಂತೆ ನೂರಾರು ಜನ ಪ್ರತಿಭನೆಯಲ್ಲಿ ಭಾಗಿಯಾಗಿದ್ದರು. 


ಸುದ್ದಿ ಓದಿ