ವಿಶ್ವದ ಹಲವು-ದೇಶಗಳು ನೈರ್ಮಲ್ಯಕ್ಕೆ ಹೆಚ್ಚು ಆಧ್ಯತೆ ನೀಡುತ್ತಿವೆ : ಅಂಬಲಗಿ
ಇಂಡಿ: ಆರೋಗ್ಯವಂತ ಮತ್ತು ಆರ್ಥಿಕ ಸದೃಢ ಸಮಾಜ ನಿರ್ಮಾಣದಲ್ಲಿ “ಮನೆಗೊಂದು ಶೌಚಾಲಯ” ಎಂಬ ಧ್ಯೇಯ ಇಂದು ಅತೀ ಮುಖ್ಯ ಪಾತ್ರ ವಹಿಸುತ್ತಿದೆ. ಏಕೆಂದರೆ ಮನುಷ್ಯ ವಿಸರ್ಜಿಸುವ ಮಲ, ಸಾವು ತರಬಹುದಾದ ಅನೇಕ ಕಾಯಿಲೆಗಳನ್ನು ಹರುತ್ತದೆ. ಹಾಗಾಗಿ ಭಾರತ ಸೇರಿದಂತೆ ವಿಶ್ವದ ಹಲವು-ದೇಶಗಳು ನೈರ್ಮಲ್ಯಕ್ಕೆ ಹೆಚ್ಚು ಆದ್ಯತೆ ನೀಡುತ್ತಿವೆ ಎಂದು ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಸುನಂದಾ ಅಂಬಲಗಿ ಹೇಳಿದರು.
ತಾಲೂಕಿನ ತಡವಲಗಾ ಗ್ರಾಮದ ಧರ್ಮಸ್ಥಳ ಸಂಘದ ಮಹಿಳೆಯರಿಗೆ ಬಯಲು ಮಲ ವಿಸರ್ಜನೆಯಿಂದ ದುಷ್ಟಪರಿಣಾಮಗಳ ಕುರಿತು ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿಯೊಂದು ಗ್ರಾಮದಲ್ಲಿ ಹೆಣ್ಣು ಮಕ್ಕಳಗೆ ಸ್ವಚ್ಛ ಭಾರತ ಅಡಿಯಲ್ಲಿ ಮನೆಗೊಂದು ಶೌಚಾಲಯ ಕಟ್ಟಿಕೊಳ್ಳಬೇಕು ಎಂದು ಸರಕಾರ ಹಲವಾರು ಜಾಗೃತಿ ಮೂಡಿಸುತ್ತಾ ಬಂದಿದೆ. ಆದರೆ ಇನ್ನು ಕೆಲವೊಂದು ಗ್ರಾಮಗಳಲ್ಲಿ ಶೌಚಾಲಯ ಇಲ್ಲ. 2030ರ ವೇಳೆಗೆ ವಿಶ್ವದ ಎಲ್ಲ ವ್ಯಕ್ತಿಗಳಿಗೆ ಶೌಚಾಲಯ ಹೊಂದಬೇಕು ಎಂಬ ವಿಶ್ವ ಆರೋಗ್ಯ ಸಂಸ್ಥೆ ಗುರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಧರ್ಮಸ್ಥಳದ ಸಂಘದ ಮೇಲ್ವೀಚಾರಕಿ ಜಯಶ್ರೀ, ಜ್ಞಾನವಿಕಾಸ ಸಮನ್ವಧಿಕಾರಿ ಗೀತಾ ಎಸ್.ಎನ್ ಸೇರಿದಂತೆ ಗ್ರಾಮದ ಅನೇಕ ಹೆಣ್ಣು ಮಕ್ಕಳು ಉಪಸ್ಥಿತರಿದ್ದರು.