ಬೆಳಗಾವಿ

ಹತ್ತರಗಿ ಯಮುಕನಮರಡಿ ಗ್ರಾಮಗಳಲ್ಲಿ ತೀವ್ರಗೊಂಡ ರೈತ ಚಳವಳಿ

ಹತ್ತರಗಿ ಯಮುಕನಮರಡಿ ಗ್ರಾಮಗಳಲ್ಲಿ ತೀವ್ರಗೊಂಡ ರೈತ ಚಳವಳಿ

ಲೋಕದರ್ಶನ ವರದಿ 

ಯಮಕನಮರಡಿ 31 : ಬಹುದಿನಗಳ ಬೇಡಿಕೆಯಾಗಿರುವ ಕಬ್ಬು ಬೆಳೆಗಾರರ ಚಳವಳಿಯು ದಿನಾಂಕ 31ರಂದು ತೀವ್ರಗೊಂಡಿದ್ದು ರಾಷ್ಟ್ರೀಯ ಹೆದ್ದಾರಿ ಹೊರತುಪಡಿಸಿ ಹತ್ತರಗಿ ಯಮಕಣಮರಡಿ ಜಿನರಾಳ ಕ್ರಾಸ್ ದಡ್ಡಿ ಕ್ರಾಸ್  ದಾದಾಬಾನಹಟ್ಟಿ ಗ್ರಾಮಗಳಲ್ಲಿ ಅಂಗಡಿಗಳ ಮುಗ್ಗಟ್ಟನ್ನು ಬಂದು ಮಾಡಿ ರೈತರು ಘೋಷಣೆ ಕೂಗುತ್ತಾ ಪ್ರತಿಭಟನೆ ತೀವ್ರಗೊಂಡಿದ್ದು ಇದರಿಂದಾಗಿ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ತೊಂದರೆಯಾಗಿದ್ದು ಸುಮಾರು ಮೂರು ತಾಸುಗಳವರೆಗೆ ಪ್ರತಿಭಟನೆ ರ್ಯಾಲಿ ಜರುಗಿದವು.

ಈ ಸಂದರ್ಭದಲ್ಲಿ ಹತ್ತರಗಿ ರೈತ ಸಂಘದ ಅಧ್ಯಕ್ಷರಾದ ವಿಲಾಸ ತವಗ ಹುಕ್ಕೇರಿ ತಾಲೂಕ ರೈತ ಸಂಘದ ಅಧ್ಯಕ್ಷರು ರಾಜು ರಾಮಗುಂಡಿ ಸುರೇಶ್ ಕೆದನೂರಿ ಮಂಜುನಾಥ್ ಓಮಣ್ಣವರ್ ಕೆಂಪಣ್ಣ ಬಿಸಿರೊಟ್ಟಿ ಸಂತೋಷ ಬಾಲಾಜಿ ದೇವಪ್ಪ ಜಿನರಾಳಿ ಅಸ್ಲಾಂ ಪಕಾಲಿ ರವೀಂದ್ರ ಹಂಜಿ ಕಾಂಗ್ರೆಸ್ ಪಕ್ಷದ ಯುವ ನಾಯಕರಾದ ರವೀಂದ್ರ ಜಿಂಡ್ರಾಳಿ ಹಾಗೂ ಹಳೇ ಗುಡ್ಡಗನಹಟ್ಟಿ ರೈತ ಬಾಂಧವರು ಸುತ್ತಮುತ್ತಲಿನ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಹಾಲು ಮತ್ತು ತರಕಾರಿ ಬಂದು ಮಾಡಲಾಗಿತ್ತು ನಂತರ ಉಪಹಾರ ಗೃಹಗಳು ಬಂದ ಮಾಡಿ ಪ್ರತಿಭಟನೆಗೆ ಬೆಂಬಲ ನೀಡಿದರು ಈ ಸಂದರ್ಭದಲ್ಲಿ ನಮ್ಮ ಪೀಡಿಕೆ ಪೂರೈಸುವವರೆಗೆ ಪ್ರತಿಭಟನೆ ಮುಂದುವರಿಸಲಾಗುವುದೆಂದು ರೈತ ಮುಖಂಡರು ಹೇಳಿಕೆ ನೀಡಿದರು. 


ಸುದ್ದಿ ಓದಿ