ಜಮಖಂಡಿ

ಮೇಲ್ಚಾವಣಿ ಕುಸಿದು ವ್ಯಕ್ತಿ ಸಾವು

ಮೇಲ್ಚಾವಣಿ ಕುಸಿದು ವ್ಯಕ್ತಿ ಸಾವು

ಜಮಖಂಡಿ 14: ನಗರದ ಮೊಮಿನಗಲ್ಲಿಯಲ್ಲಿ ಮುಸ್ತಾಕ ಮಕಬುಲ ಮೊಮಿನ (42) ರಾತ್ರಿ ಮಲಗಿದಾಗ ಮಳೆಯಿಂದ ನೆನೆದ ಮೇಲ್ಚಾವಣಿ ಕುಸಿದು ಬಿದ್ದು ಪರಿಣಾಮ ಸಾವನ್ನಪ್ಪಿರುವ ಘಟನೆ ತಡರಾತ್ರಿ ನಡೆದಿದೆ. 

ಕಳೆದ ಒಂದು ವಾರದಿಂದ ನಗರದಲ್ಲಿ ಆಗಾಗ ಮಳೆಯಾಗುತ್ತಿದ್ದು, ಇದರಿಂದ ಹಲವಾರು ಕಡೆಗಳಲ್ಲಿ ಮನೆಗಳು ಸೋರುತ್ತಿದ್ದವು. ಇವರ ಮನೆ ಅಲ್ಪ ಸ್ವಲ್ಪ ಸೋರುತ್ತಿರುವದಕ್ಕೆ ಪತ್ನಿ ಹಾಗೂ ಮಕ್ಕಳು ಬೇರೆ ಕಡೆ ಮಲಗಿದ್ದಾರೆ, ಆದರೆ ಮುಸ್ತಾಕ ಮನೆಯಲ್ಲೇ ಮಲಗಿದ್ದನು. ಬೆಳಿಗ್ಗೆ ಮುಸ್ತಾಕ ತಡವಾದರು ಬಾಗಿಲು ತೆಗೆಯದಿರುವದನ್ನು ಗಮನಿಸಿದ ಪತ್ನಿ ಬಾಗಿಲು ಬಡಿದು ಮೇಲೆ ನೋಡಿದಾಗ ಮೇಲಿಂದ ಮಣ್ಣು ಬಿದ್ದಿರುವದನ್ನು ಗಮನಿಸಿ ಸ್ಥಳೀಯರನ್ನು ಕರೆದು ಬಾಗಿಲು ತೆಗೆದಾಗ ಸಾವನಪ್ಪಿದ್ದನು. ಮೃತರಿಗೆ ಪತ್ನಿ, ಓರ್ವ ಪುತ್ರ, ಪುತ್ರಿ ಇದ್ದಾರೆ. 

ಸ್ಥಳಕ್ಕೆ ತಹಶೀಲ್ದಾರರ ಸದಾಶಿವ ಮಕ್ಕೋಜಿ ಭೇಟಿ ನೀಡಿ ಪರೀಶೀಲನೆ ಮಾಡಿ ಮಾತನಾಡಿ ಮೃತ ಕುಟುಂಬಕ್ಕೆ ಸರ್ಕಾರದಿಂದ ಸಿಗುವ ಪರಿಹಾರವನ್ನು ನೀಡಲಾಗುವದು ಎಂದು ತಿಳಿಸಿದರು. 


ಸುದ್ದಿ ಓದಿ