ಜಮಖಂಡಿ

ಮನುಷ್ಯ ಸಂಸ್ಕಾರ, ಶಿಕ್ಷಣ ಇಲ್ಲದೆ ಬದುಕಲು ಸಾಧ್ಯವಿಲ್ಲ: ಉಪಾಧ್ಯ

ಮನುಷ್ಯ ಸಂಸ್ಕಾರ, ಶಿಕ್ಷಣ ಇಲ್ಲದೆ ಬದುಕಲು ಸಾಧ್ಯವಿಲ್ಲ: ಉಪಾಧ್ಯ

ಜಮಖಂಡಿ 24: .ಮನುಷ್ಯನಿಗೆ ಕಣ್ಣು ಕಾಲು ಇಲ್ಲದೆ ಬದುಕ ಬಹುದು. ಆದರೆ ಸಂಸ್ಕಾರ..ಶಿಕ್ಷಣ ಇಲ್ಲದೆ ಬದುಕಲು ಸಾಧ್ಯವಿಲ್ಲ. ಸ್ಪರ್ಧಾತ್ಮಕ ಯುಗದಲ್ಲಿ ಸಾಧನೆ ಮಾಡಲು ಶ್ರಮಬೇಕು. ಶಿಕ್ಷಣ ಇಲ್ಲದೆ ಸಾಧನೆ ಮಾಡಲು ಸಾಧ್ಯವಿಲ್ಲ ಎಂದು ಬಾಹುಬಲಿ ಉಪಾಧ್ಯ ಹೇಳಿದರು. 

ನಗರದ ಸಮೀಪ ಕಡಪಟ್ಟಿ ಗ್ರಾಮದ ಬಳಿ ಜೈನ ಬಸ್ತಿ ಸಭಾ ಭನದಲ್ಲಿ ನಡೆದ ಜೈನ ಅಲ್ಪಸಂಖ್ಯಾತರ ನೌಕರರ ಕ್ಷೇಮಾಭಿವೃದ್ಧಿ ಟ್ರಸ್ಟ್‌ ಕಮಿಟಿ ಹಾಗೂ ಜೈನ ಸಮಾಜ ಸಹಯೋಗದಲ್ಲಿ 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ಸಮಾಜದಲ್ಲಿ ನ್ಯೂನತೆಯ ಬಹಳ ಇದೆ. ಮಕ್ಕಳಲ್ಲಿ ಸಂಸ್ಕಾರ. ಧರ್ಮದ ತಿಳುಳಿಕೆಯನ್ನು ನೀಡಬೇಕು. ಶಿಕ್ಷಣ ಇಲ್ಲದೆ ಇದ್ದರೆ ಸಮಾಜದಲ್ಲಿ ಬದುಕಲು ಸಾಧ್ಯವಿಲ್ಲ. ಸಮಾಜ ನಿಮ್ಮನ್ನು ಗುರುತಿಸುತ್ತಿದೆ ಎಂದರೆ ಸಂಸ್ಕಾರ. ಶಿಕ್ಷಣದಿಂದ ನಿಮ್ಮನ್ನು ಗುರುತ್ತಿಸುತ್ತಿದೆ. ಮನೆಯಲ್ಲಿ ತಂದೆ, ತಾಯಿಗಳು ಒಳ್ಳೆಯ ಗುಣಗಳನ್ನು ಅಳವಡಿಕೊಳ್ಳುವದನ್ನು ಮಕ್ಕಳಲ್ಲಿ ಮೂಡಿಸಬೇಕು. ಬೇರೆ ಊರುಗಳಲ್ಲಿ ಉನ್ನತ ಹುದ್ದೆಗಳಲ್ಲಿ ಸೇವೆ ಮಾಡುತ್ತಿದ್ದರೆ ಸಮಾಜವನ್ನು ಮರೆಯುತ್ತಾರೆ. ಹಾಗೆ ಯಾರು ಮಾಡದೆ ಸಮಾಜವನ್ನು ಮರೆಯಬಾರದು. ಮಕ್ಕಳಲ್ಲಿ ಧರ್ಮದ ಕುರಿತು ಪಾಲಕರು ತಿಳುವಳಿಕೆಯನ್ನು ನೀಡಬೇಕು. ಸಾಧನೆ ಜೊತೆಗೆ ಒಳ್ಳೆಯ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವದು ಬಹಳ ಮುಖ್ಯಾಗಿದೆ ಎಂದರು. 

ಇಂತಹ ಕಾರ್ಯಕ್ರಮ ಸಮಾಜದಲ್ಲಿ ಎರಡು ದಿನಗಳ ಕಾಲ ನಡೆಸಬೇಕು. ಅದರ ಅದರ ಖರ್ಚನ್ನು ನನ್ನ ಕಡೆಯಿಂದ ಎಷ್ಟು ಸಹಾಯ ಮಾಡಲು ಸಾಧ್ಯವಾಗುತ್ತದೆ ಅದನ್ನು ಮಾಡುತ್ತೇನೆ. ಮಹಿಳೆಯರಿಗಾಗಿ ಸಮಾಜದ ವಿಚಾರ ವಿನಿಮಯದ ಬಗ್ಗೆ ಕಾರ್ಯಕ್ರಮ ನಡೆಸಬೇಕೆಂದು ವಿನಂತಿಸಿಕೊಂಡರು.  

ದೇವಲ ದೇಸಾಯಿ ಮಾತನಾಡಿ, ಇಂದಿನ ದಿನಮಾನದಲ್ಲಿ ಮಕ್ಕಳು ಮೊಬೈಲ್ ಬಳಕೆಯಿಂದ ಲೆಕ್ಕಾಚಾರವನ್ನು ಮಾಡುತ್ತಾರೆ. ಹಿಂದಿನ ದಿನಮಾನದಲ್ಲಿ ಹಾಗೆ ಇಲದೆ. ಶಿಕ್ಷಕರು ಕೇಳುವ ಲೆಕ್ಕಾಚಾರವನ್ನು ತಟ್ಟನೆ ಹೇಳುವ ಪರಿಪಾಠ ಮಕ್ಕಳಲ್ಲಿ ಇತ್ತು. ಶಾಲೆಯಲ್ಲಿ ಕಲಿತು ಬಂದು ನಂತರ ತಲೆಯಲ್ಲಿ ಜ್ಞಾನವನ್ನು ನೆನೆಪು ಇಟ್ಟುಕೊಳ್ಳುವದು ಇಂದಿನ ಮಕ್ಕಳು ರೂಡಿಸಿಕೊಳ್ಳಬೇಕು ಎಂದರು. 

ದೇವಲ ದೇಸಾಯಿ ಮಾತನಾಡಿ. ಇಂದಿನ ದಿನಮಾನದಲ್ಲಿ ಮೊಬೈಲ್ ಬಳಕೆಯಿಂದ ಲೆಕ್ಕಾಚಾರವನ್ನು ಇಂದಿನ ಮಕ್ಕಳು ಮಾಡುತ್ತಾರೆ. ಹಿಂದೆನ ಕಾಲದಲ್ಲಿ ಹಾಗೆ ಇಲದೆ. ಶಿಕ್ಷಕರು ಕೇಳುವ ಲೆಕ್ಕಾಚಾರವನ್ನು ತಟ್ಟನೆ ಹೇಳುವ ಪರಿಪಾಠ ಇತ್ತು. ಶಾಲೆಯಲ್ಲಿ ಕಲಿತು ಬಂದು ನಂತರ ತಲೆಯಲ್ಲಿ ಜ್ಞಾನವನ್ನು ನೆನೆಪು ಇಟ್ಟುಕೊಳ್ಳು ಇಂದಿನ ಮಕ್ಕಳು ರೂಡಿಸಿಕೊಳ್ಳಬೇಕು ಎಂದರು. 

ಅರುಣಕುಮಾರ ಶಹಾ ಮಾತನಾಡಿ, ಶಿಕ್ಷಣ ಜೊತೆಗೆ ಸಂಸ್ಕಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವದು ಬಹಳ ಮುಖ್ಯವಾಗಿದೆ. ಸಮಾಜದಲ್ಲಿ ರಾಜಕಾರಣದಲ್ಲಿ ಮತಗಳ ಬಗ್ಗೆ ಚಿಂತಿಸಿದೆ. ನಮ್ಮ ಸಮಾಜ ತಮ್ಮ ಉದ್ಯೋಗದ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ, ಆದರೆ ಇಂದಿನ ದಿನಮಾನದಲ್ಲಿ ಶಿಕ್ಷಣ ಬಹಳಷ್ಟು ಖರೀದಿಯಾಗಿದೆ. ಉನ್ನತ ಶಿಕ್ಷಣದಲ್ಲಿ ಹಣದ ತೊಂದರೆಯಿಂದ ಶಿಕ್ಷಣದಿಂದ ಇದ್ಯಾರ್ಥಿಗಳು ಕುಂಠಿತಗೊಂಡು ಸಾಕಷ್ಟು ಕಷ್ಟ ಪಡುತ್ತಿದ್ದಾರೆ. ಶಿಕ್ಷಣ ಎಂಬುವದು  ಮಾರಾಟವಾಗುತ್ತಿದೆ. ಶಿಕ್ಷಣದಲ್ಲಿ ಜಾತಿ, ಮತ, ಪಂಥ ಬೇಧವಿರುವುದಿಲ್ಲ. ಮಕ್ಕಳಿಗೆ ದೇವರಿಗೆ ನಮಸ್ಕರಿಸುವ ಜೊತೆಗೆ ಸಂಸ್ಕಾರವನ್ನು ರೂಡಿಸುವ ಹಾಗೆ ಪಾಲಕರು ಮಾಡಬೇಕು ಎಂದರು. 

ಅಧ್ಯಕ್ಷ ದಯಾನಂದ ಸಿರದಾರ, ಉತ್ತಮ ಪೋರವಾಲ ಮಾತನಾಡಿದರು. 

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದುಕೊಂಡ ವಿದ್ಯಾರ್ಥಿ, ವಿದ್ಯಾರ್ಥಿನಿಗೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಯಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಲಾಯಿತು.  

ವೇದಿಕೆಯಲ್ಲಿ ದತಾನಂದ ಸಿರಗಾರ, ಉತ್ತಮ ಪೋರವಾಲ,ಸಂತೋಷ ಜೈನ, ಟಿ,ಎಸ್,ಉಗಾರೆ, ಆದಿನಾಥ ನರಸಗೊಂಡ, ಬಸರಾಜ ಆಲಗೂರ,ಅನೀತಾ ಶಿರಗೊಂಡ, ಆರ್,ಪಿ ನ್ಯಾಮಗೌಡ ವಿಜಯಕುಮಾರ ಕಾಗಿ, ಮಾಹಾವೀರ ಕೋರೆ, ಧನ್ಯಕುಮಾರ ಕುಸನಾಳ,ಕಾಂತಿಲಾಲ ಓಸವಾಲ, ಬಿ,ಟಿ,ದೇಸಾಯಿ, ಮಗಿಯಪ್ಪ ದೇಸಾಯಿ, ಬಾಹುಬಲಿ ಸವದಿ, ಜಿನ್ನಪ್ಪ ತೀರ್ಥ, ರಾಜೇಶ ಹಳಂಗಳಿ, ಚಂದ್ರಗುಪ್ತ ಬೆಳಗಲಿ, ಹಿತ್ತೇಶ ಓಸವಾಲ ಸೇರಿದಂತೆ ಅನೇಕರು ಇದ್ದರು. 


ಸುದ್ದಿ ಓದಿ