ಸಿಂಧಗಿ

ವ್ಯಸನಮುಕ್ತ ಸಮಾಜಕ್ಕಾಗಿ ಸಂಕಲ್ಪ ಮಾಡಿ: ಸಿಂತಿಯಾ

ವ್ಯಸನಮುಕ್ತ ಸಮಾಜಕ್ಕಾಗಿ ಸಂಕಲ್ಪ ಮಾಡಿ: ಸಿಂತಿಯಾ

ಸಿಂದಗಿ29: ಮಾದಕ ವಸ್ತುಗಳ ಸೇವನೆಯಿಂದ ವ್ಯಕ್ತಿಗತ ಆರೋಗ್ಯದ ಜತೆಗೆ ಸಾಮಾಜಿಕ ಸ್ವಾಸ್ಥ್ಯವೂ ಹಾಳಾಗುತ್ತಿದ್ದು, ವ್ಯಸನ ಮುಕ್ತ ಸಮಾಜ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಸಂಕಲ್ಪ ಮಾಡಬೇಕು ಎಂದು ಸಿಂದಗಿಯ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸಹನಿರ್ದೇಶಕಿ ಸಿಸ್ಟರ್ ಸಿಂತಿಯಾ ಕರೆ ನೀಡಿದರು.

ದೇವರಹಿಪ್ಪರಗಿ ತಾಲೂಕಿನ ಹುಣಶ್ಯಾಳ ಗ್ರಾಮದಲ್ಲಿ ಸಿಂದಗಿಯ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯು ಕಟ್ಟಡ ಕಾರ್ಮಿಕರಿಗೆ ಹಮ್ಮಿಕೊಂಡ ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳು ಕುರಿತು ವಿಚಾರಸಂಕಿರಣ ಮಾತನಾಡಿದರು.

ಮಾದಕ ವ್ಯಸನದಿಂದಾಗಿ ಸಮಾಜ ಘಾತುಕ ಕೃತ್ಯಗಳು ಹೆಚ್ಚುತ್ತಿವೆ. ಅತ್ಯಾಚಾರದಂತಹ ಘಟನೆಗೆ ಇದೇ ಮೂಲ ಕಾರಣವಾಗಿದೆ. ದೇಶದ ಅತ್ಯಂತ ಬಲಿಷ್ಟ ಯುವ ಸಂಪನ್ಮೂಲ ಇಂಥ ದುಶ್ಚಟಕ್ಕೆ ಬಲಿಯಾಗುತ್ತಿದೆ. ಇಂಥ ವಿಚಾರಗಳ ವಿರುದ್ಧ ಯುವಕ ಸಂಘಟನೆಗಳು ಜಾಗೃತಿವಹಿಸಿ, ಶಾಲಾ ಕಾಲೇಜುಗಳಲ್ಲಿ ತಿಳಿವಳಿಕೆ ಮೂಡಿಸಬೇಕು. ಒಮ್ಮೆ ಮಾದಕ ವಸ್ತುಗಳ ದಾಸರಾದರೆ ಅವುಗಳನ್ನು ತ್ಯಜಿಸುವುದು ಕಷ್ಟ ಎಂದು ತಿಳಿವಳಿಕೆ ನೀಡಿದರು.

ಕಟ್ಟಡ ಕಾರ್ಮಿಕರು ಮಾದಕ ವಸ್ತು ಸೇವನೆಯಂತಹ ದುಶ್ಚಟಗಳಿಗೆ ಬಲಿಯಾಗಿ, ಅಮುಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳದೆ ಸಮಾಜದಲ್ಲಿ ಉತ್ತಮ ನಾಗರೀಕರಾಗಿ ಬದುಕಬೇಕು. ಯುವ ಕಾರ್ಮಿಕರು ದಣಿವು ಕಡಿಮೆ ಮಾಡಿಕೊಳ್ಳಲೆಂಬ ನೆಪ ಮಾಡಿಕೊಂಡು ಮಾದಕ ವಸ್ತು ಸೇವನೆಯ ದುಶ್ಚಟಗಳಿಗೆ ಹೆಚ್ಚಾಗಿ ಬಲಿಯಾಗುತ್ತಿರುವುದು ವಿಷಾಧಕರ ಸಂಗತಿ. ಆದ್ದರಿಂದ ಕಟ್ಟಡ ಕಾರ್ಮಿಕರು ದುಶ್ಚಟಗಳಿಗೆ ಬಲಿಯಾಗುವುದನ್ನು ತಪ್ಪಿಸಲು ಸಿಂದಗಿಯ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯು ಕಟ್ಟಡ ಕಾರ್ಮಿಕರಿಗೆ ಹಮ್ಮಿಕೊಂಡ ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳು ಕುರಿತು ವಿಚಾರಸಂಕಿರಣ, ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು. 

ಬ್ರದರ್ ಸಂದೀಪ, ಬ್ರದರ್ ಪೃತ್ವಿರಾಜ, ರಾಜು ಕುರಿಮನಿ ಅವರು ಮಾತನಾಡಿ, ಮದ್ಯಪಾನ ಮತ್ತು ಮಾದಕ ವಸ್ತುಗಳ ಸೇವನೆಯಿಂದ ಶರೀರ ಕೃಶವಾಗುತ್ತದೆ. ನರ ದೌರ್ಬಲ್ಯ ಉಂಟಾಗುತ್ತದೆ. ಮಿದುಳಿನ ಕಾರ್ಯ ವಿಧಾನ ಕುಗ್ಗುತ್ತದೆ. ಇಂಥ ಚಟ ಹಲವು ಗಂಭೀರ ಸಮಸ್ಯೆಗಳಿಗೆ ದಾರಿ ಮಾಡಿಕೊಡಲಿದೆ. ದೈಹಿಕ ಮತ್ತು ಸಾಮಾಜಿಕ ಸಂಬಂಧಗಳ ಸಮಸ್ಯೆಗಳು ಉಂಟಾಗಿ, ಸಮಾಜ ಮಾದಕ ವ್ಯಸನಿಗಳನ್ನು ಅತ್ಯಂತ ಕೀಳಾಗಿ ಕಾಣಲಿದೆ ಎಂದು ಎಚ್ಚರಿಸಿದರು.

ಕಾರ್ಮಿಕರಾದ ಧರ್ಮಣ್ಣ ಮಾದರ, ಹಸನ್‍ಸಾಬ ಮರ್ತೂರ, ಅಲ್ಲಾಭಿ ಪೋಲಾಸಿ, ಅಲ್ಲಾಭಕ್ಷ ಹವಾಲ್ದಾರ, ದೇವೆಂದ್ರಯ್ಯ ಹಿರೇಮಠ, ಜಟ್ಟೆಪ್ಪ ದೊಡಮನಿ, ದವಲಸಾಬ ಉಸ್ತಾದ, ಉನ್ನುಸ್ ಆಲಗೂರ, ನಜೀರ ಕಣಮೇಶ್ವರ, ಅಬ್ದುಲ್ ಬಡೇಗಾಋ, ಅಲ್ಲಾಭಕ್ಷ ಸೋನ್ನ, ಸಂತೋಷ ಮಾದರ, ಭೀಮಪ್ಪ ನಗನೂರ, ಭೀಮಪ್ಪ ನಗನೂರ, ಭೀಮಪ್ಪ ಹೊಸಮನಿ, ಬಸಪ್ಪ ವಾಲಿಕಾರ, ಶಬ್ಬಿರ ದೊಡಮನಿ, ಸುಲೇಮಾನ ಕೇರೂಟಗಿ, ಹಯ್ಯಾಳಪ್ಪ ದರ್ಗಾಹೋಲ, ಅಲ್ಲಾಭಕ್ಷ ಗುಬ್ಬೇವಾಡ, ಅಬ್ದುಲ್‍ರಜಾಕ ಗೊಬ್ಬರೋಡಗಿ, ದಸ್ತಗೀರಸಾಬ ಹಾದಿಮನಿ, ಚೇತನಕುಮಾರ ಸೇರಿದಂತೆ ನೂರಾರು ಕಾರ್ಮಿಕರು ಇದ್ದರು.

ಸುದ್ದಿ ಓದಿ