ಜಮಖಂಡಿ

ಮಹರ್ಷಿ ವಾಲ್ಮೀಕಿ ಅವರು ಮೂಲನಾಮ ರತ್ನಾಕರ: ಶಾಸಕ ಜಗದೀಶ

ಮಹರ್ಷಿ ವಾಲ್ಮೀಕಿ ಅವರು ಮೂಲನಾಮ ರತ್ನಾಕರ: ಶಾಸಕ ಜಗದೀಶ

ಲೋಕದರ್ಶನ ವರದಿ,

ಜಮಖಂಡಿ  29: ಮಹರ್ಷಿ  ವಾಲ್ಮೀಕಿ ಅವರು ಇತಿಹಾಸ ಉಳವರು ಆಗಿದ್ದರು. ಮೂಲನಾಮ ರತ್ನಾಕರ ಎಂದು ಕರೆಯುತ್ತಿದ್ದರು. ರಾಮನಾಮ ಜಪವನ್ನು ಮಾಡಿದ.ರಾಮಾಯಣ ಮಹಾ ಕಾವ್ಯವನ್ನು ಬರೆದ ನಂತರ ಮಹರ್ಷಿ ವಾಲ್ಮೀಕಿ ಎಂದು ಕರೆಯಲಾಯಿತು ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು. 

ನಗರದ ಬಸವ ಭವನದಲ್ಲಿ ನಡೆದ ತಾಲೂಕಡಳಿತ, ತಾಲೂಕ ಪಂಚಾಯತ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ ಸಹಯೋಗದಲ್ಲಿ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

 ಕಾಡಿನಲ್ಲಿ ವಾಸವಾಗಿದ ವಾಲ್ಮೀಕಿ ಅವರಿಗೆ ನಾರದ ಮುನಿಗಳ ಭೇಟಿಯಾದ ಸಮಯದಲ್ಲಿ ನೀನು ರಾಮನಾಮ ಜಪವನ್ನು ಮಾಡು. ನಿನ್ನ ಪಾಪ ಕಡಿಮೆಯಾಗುತ್ತದೆ ಎಂದು ಹೇಳಿದ ವಾಕ್ಯವು ಅವರ ಮನಸಿಗೆ ಹತ್ತಿರವಾಗುತ್ತದೆ. ಮುಂದೆ ಅವರು ರಾಮನಾಮ ಜಪವನ್ನು ಮಾಡಿ.ಮೈಮೇಲೆ ಹುತ್ತವಂದು ಬೆಳೆದು. ಹತ್ತು ವರ್ಷದ ನಂತರ ಮರಳಿ ಅದೇ ಕಾಡಿನ ದಾರಿಯಲ್ಲಿ ನಾರದರು ಹೋಗುವಾಗ ರಾಮನಾಮ ಜಪದ ಶಬ್ದ ಕೇಳಿಸುತ್ತದೆ. ಅವಾಗ ನಾರದರು ಹೇಳಿದ ವಾಕ್ಯವನ್ನು ಅರಿತ ರತ್ನಾಕರ ಅವರು. ರಾಮಾಯಣ ಕಾವ್ಯವನ್ನು ಬರೆದು ವಾಲ್ಮೀಕಿ ಎಂದು ಹೆಸರು ಪಡೆದರು ಎಂದರು.

ಕ್ಷೇಮೆಯಾಚನೆ ಮಾಡಿದ ಶಾಸಕ : ಅ, 22 ರಂದು ಖಾಸಗಿ ಕಾರ್ಯಕ್ರಮದಲ್ಲಿ ಮೀಸಲಾತಿ ಬಗ್ಗೆ ಮಾತನಾಡಿದೆ. ನಾನು ಮಾತನಾಡಿದು ತಪ್ಪಾಗಿದೆ. ಎಲ್ಲರಿಗೆ ನನ್ನಿಂದ ನೋವಾಗಿದ್ದರೆ ನಾನು ನಿಮ್ಮಲ್ಲಿ ಕ್ಷೇಮೆ ಕೇಳುತ್ತೇನೆಂದು ಕೈ ಮುಗಿದರು. ನಾನೊಬ್ಬ ಜಾತ್ಯಾತೀತವಾಗಿ ಎಲ್ಲ ಸಮಾಜದ ಜೊತೆ ಸಮನಾಗಿ ಇದ್ದನೆ. ನಾನು ಕೂಡಾ ಮೀಸಲಾತಿ ಪರವಾಗಿ ಇದ್ದೆನೆ. ಡಾ,ಅಂಬೇಡ್ಕರ್ ಅವರು ಹಾಕಿಕೊಟ್ಟ ಸಂವಿಧಾನ ಬದ್ಧತೆಯಲ್ಲಿ ಕೆಲಸ ಮಾಡುವ ಮೂಲಕ ಬಾಳಬೇಕಾಗಿದೆ.ನನ್ನಿಂದ ತಪ್ಪಾಗಿದರೆ ನಾನು ಕ್ಷೇಮೆಯನ್ನು ಕೇಳಿಕೊಳ್ಳುತ್ತನೆ. ಮತ್ತೊಮ್ಮೆ ನನ್ನಿಂದ ಕ್ಷೇಮೆಯನ್ನು ಕೇಳುತ್ತೇನೆ ಎಂದು ಕಾರ್ಯಕ್ರಮದ ಸಭೆಯಲ್ಲಿ ಬಹಿರಂಗವಾಗಿ ಕ್ಷೇಮೆಯಾಚನೆ ಮಾಡಿದರು.

ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ಜಿ.ಕೆ.ತಳವಾರ ಉಪನ್ಯಾಸ ನೀಡಿದರು, ಶಿವಲಿಂಗ ಪಂಡಿತರಾಧ್ಯ ಶಿವಾಚಾರ್ಯ ಶ್ರೀಗಳು ದಿವ್ಯ ಸಾನಿಧ್ಯ ವಹಿಸಿ ಆಶೀವರ್ಚನ ನೀಡಿದರು, ಮಹಷರ್ಿ ವಾಲ್ಮೀಕಿ ಸಂಘದ ಅಧ್ಯಕ್ಷ ಗಂಗಾಧರ ಮರದಾನಿ, ಅಂಬರೀಶ್ ಗುಡದಾನಿ, ತಾ.ಪಂ.ಅಧಿಕಾರಿ ಸಂಜೀವ ಜುನ್ನೂರ, ಸಮಾಜ ಕಲ್ಯಾಣ ಸಿ.ಎಸ್.ಗಡ್ಡದೇವರಮಠ,  ಶಹರ ಠಾಣಿಯ ಪಿಎಸ್ಐ. ನಾಗರಾಜ ಕಿಲಾರಿ,ಸಿಡಿಪಿಒ ಎಮ್.ಪಿ.ದಾಸರ, ಅಕ್ಷರ ದಾಸೋಹ ಅಧಿಕಾರಿ ಸಿ.ಎಸ್.ಕಲ್ಯಾಣ, ಬಿ.ಆರ್ ಸಿ. ರಮೇಶ ಅವಟಿ, ಎನ್.ಬಿ.ಗಸ್ತಿ,  ಅಜೇಯ ಕಡಪಟ್ಟಿ ಸೇರಿದಂತೆ ಅನೇಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಂಕರ ಲಮಾಣಿ ನಿರೂಪಿಸಿದರು, ತಹಶೀಲ್ದಾರ ಸದಾಶಿವ ಮಕ್ಕೋಜಿ ಸ್ವಾಗತಿಸಿ. ಪ್ರಾಸ್ತಾವಿಕ ಮಾತನಾಡಿದರು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಿ.ಎಸ್.ಗಡ್ಡದೇವರಮಠ ವಂದಿಸಿದರು.


ಸುದ್ದಿ ಓದಿ