ವ್ಯಸನಮುಕ್ತ ಸಮಾಜವನ್ನು ಪರಿವರ್ತಿಸಿದ ಮಹಾಂತ ಶಿವಯೋಗಿ: ಶಾಸಕ ಗುಡಗುಂಟಿ
ಲೋಕದರ್ಶನ ವರದಿ,
ಜಮಖಂಡಿ 3: ಜಾತಿ,ಮತ,ಪಂತಗಳನ್ನು ಹೋಗಲಾಡಿಸಿ ಸಮಾನತೆಗಾಗಿ. ದುವ್ರ್ಯಸನಗಳನ್ನು ಕುರಿತು ಜನತೆಗೆ ಜಾಗೃತಿಯ ಅರಿವು ಮೂಡಿಸುವ ಜೊತೆಗೆ ದುಶ್ಚಟಗಳನ್ನು ತಮ್ಮ ಜೋಳಿಗೆಯಲ್ಲಿ ಹಾಕಿಕೊಳ್ಳುವ ಮೂಲಕ ವ್ಯಸನ ಮುಕ್ತ ಸಮಾಜ ಪರಿವರ್ತನೆ ಮಾಡಿದ ಇಳಕಲ್ ಲಿಂ.ಡಾ.ಮಹಾಂತ ಶಿವಯೋಗಿಗಳು ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು.
ನಗರದ ಬಿಎಲ್ಡಿ ಕಾಲೇಜಿನ ಸಭಾಭವನದಲ್ಲಿ ನಡೆದ ತಾಲೂಕಾಡಳಿತ, ತಾಲೂಕಾ ಆರೋಗ್ಯ ಇಲಾಖೆ, ತಾಲೂಕಪಂಚಾಯತ ಸಹಯೋಗದಲ್ಲಿ ಇಳಕಲ್ ಲಿಂ.ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ನಿಮಿತ್ಯವಾಗಿ ವ್ಯಸನ ಮುಕ್ತ ದಿನಾಚರಣೆ ಮತ್ತು ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದಲ್ಲಿ ದಿನದಿಂದ ದಿನಕ್ಕೆ ಜನಸಂಖ್ಯೆಯು ಹೆಚ್ಚಳವಾಗುತ್ತಿದೆ. ಆದರೆ ಭೂಮಿ ಮಾತ್ರ ವಿಸ್ತರಣೆವಾಗುತ್ತಿಲ್ಲ. ಮೊದಲು ಜನಸಂಖ್ಯೆ ಕಡಿಮೆ ಇದ್ದ ಕಾರಣ ಭೂಮಿ ಫಲವತ್ತೆಯನ್ನು ಹೊಂದಿತು. ರಾಸಾಯನಿಕ ಔಷಧಿಯಿಂದ ಭೂಮಿ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತಿದೆ. ಉತ್ತರ ಪ್ರದೇಶದ ಸರಕಾರ ಒಂದೇ ಮಗುವನ್ನು ಹೆರಿಗೆಯನ್ನು ಮಾಡಿಸಿಕೊಳ್ಳಬೇಕೆಂದು ಆದೇಶ ಜಾರಿಗೆ ತಂದಿದೆ. ಅದರಂತೆ ದೇಶದಲ್ಲಿ ಸಹ ಆದೇಶವನ್ನು ಜಾರಿಗೆ ತಂದರೆ ಮಾತ್ರ ಜನಸಂಖ್ಯೆಯನ್ನು ನಿಯಂತ್ರಣ ಮಾಡಲು ಸಾಧ್ಯವಾಗುತ್ತದೆ. ಯುವಕರು ಬೇರೆ ದುಶ್ಚಟಗಳಿಗೆ ಬಲಿಯಾಗಿ ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ. ಅಂತಹ ದುಶ್ಚಟಗಳನ್ನು ಬಿಟ್ಟು ಒಳ್ಳೆಯೆ ಮಾರ್ಗದಲ್ಲಿ ನಡೆದರೆ ಮಾತ್ರ ದೇಶ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ ಎಂದರು.
ತಹಶೀಲ್ದಾರ ಸದಾಶಿವ ಮಕ್ಕೋಜಿ, ಡಾ,ಎಚ್,ಡಿ ದಡ್ಡಿ, ಬಸವರಾಜ ಯಡಳ್ಳಿ, ಪ್ರೋ.ಎನ್.ಎಮ್ ರೊಳ್ಳಿ ಮಾತನಾಡಿದರು. ತಾಪಂ ಇಒ ಗುರುಶಾಂತಪ್ಪ ಬೆಳುಡಂಗಿ, ಆರೋಗ್ಯ ವೈದ್ಯಾಧಿಕಾರಿ ಗೈಬುಸಾಬ ಗಲಗಲಿ ಸೇರಿದಂತೆ ಅನೇಕರು ಇದ್ದರು. ಶ್ರೀನಿವಾಸ ಕಟ್ಟಿಮನಿ ನಿರೂಪಿಸಿದರು. ಡಾ,ಪಿ,ಡಿ,ಪೋಳ ಸ್ವಾಗತಿಸಿದರು. ಉಮೇಶ ಜೋಶಿ ಪ್ರಾಸ್ತಾವಿಕ ಮಾತನಾಡಿದರು. ವರ್ಷಣಿ ಕಳ್ಳಿಮಠ ಪ್ರಾರ್ಥನಿಸಿದರು. ವಿ,ಎಲ್, ಕುಲಕರ್ಣಿ ವಂದಿಸಿದರು.