ಜಮಖಂಡಿ

ಎಸ್‌ಡಿಎಮ್‌ಸಿ ಅಧ್ಯಕ್ಷರಾಗಿ ಮಹಾದೇವಿ, ಉಪಾಧ್ಯಕ್ಷರಾಗಿ ಜಿಲಾನಿ ಆಯ್ಕೆ

ಎಸ್‌ಡಿಎಮ್‌ಸಿ ಅಧ್ಯಕ್ಷರಾಗಿ ಮಹಾದೇವಿ, ಉಪಾಧ್ಯಕ್ಷರಾಗಿ ಜಿಲಾನಿ ಆಯ್ಕೆ

ಜಮಖಂಡಿ 24: ನಗರದ ಮಹಾಂತೇಶ ನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಎಸ್‌ಡಿಎಮ್‌ಸಿ ಅಧ್ಯಕ್ಷರಾಗಿ ಮಹಾದೇವಿ ತೆಳಗಡೆ, ಉಪಾಧ್ಯಕ್ಷರಾಗಿ ಜಿಲಾನಿ ಶೇಖ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ಈ ಶಾಲೆಯ 18 ಸದಸ್ಯ ಹೊಂದಿದ ಸುಧಾರಣಾ ಹಾಗೂ ಮೇಲುಸ್ತುವಾರಿ ಸಮಿತಿಯಲ್ಲಿ ನಡೆದ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಸದಸ್ಯರು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಎಸ್‌ಡಿಎಮ್‌ಸಿ ರಚನಾ ನೊಡಲ್ ಬಿ.ಎ. ಕಾಂಬಳೆ ತಿಳಿಸಿದರು. 

ಎಸ್‌ಡಿಎಮ್‌ಸಿ ಸದಸ್ಯರು, ಮುಖ್ಯಶಿಕ್ಷಕಿ ಪಿ.ಎಚ್‌. ದುದಗಿ ಹಾಗೂ ಸಿಬ್ಬಂದಿಗಳು ಇದ್ದರು. 


ಸುದ್ದಿ ಓದಿ