ಅಥಣಿ

ಮಹಾ ಶಿವರಾತ್ರಿ: ಮಾರ್ಚ 6 ರಿಂದ ಶರಣ ಸಂಕ್ಕೃತಿ ಉತ್ಸವ

ಮಹಾ ಶಿವರಾತ್ರಿ: ಮಾರ್ಚ 6 ರಿಂದ ಶರಣ ಸಂಕ್ಕೃತಿ ಉತ್ಸವ

ಅಥಣಿ 05: ಮಹಾ ಶಿವರಾತ್ರಿ ಅಂಗವಾಗಿ  ಗಚ್ಚಿನ ಮಠದ ಆವರಣದಲ್ಲಿ ಮಾರ್ಚ 6 ರಿಂದ ಬುಧವಾರದಿಂದ ಮಾರ್ಚ 9 ಶುಕ್ರವಾರದವರೆಗೆ ಶರಣ ಸಂಕ್ಕೃತಿ ಉತ್ಸವ ನಡೆಯಲಿದೆ ಎಂದು ಗಚ್ಚಿನ ಮಠದ ಪೀಠಾಧಿಪತಿ ಶಿವಬಸವ ಸ್ವಾಮೀಜಿ ತಿಳಿಸಿದರು.  

ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದ ಅವರು ಪ್ರತಿ ವರ್ಷವೂ ಕೂಡ ಮಹಾ ಶಿವರಾತ್ರಿ ಅಂಗವಾಗಿ ನಡೆಯುವ ಶರಣ ಸಂಸ್ಕೃತಿ ಉತ್ಸವ ಅರ್ಥಪೂರ್ಣವಾಗಿ, ವೈಚಾರಿಕವಾಗಿ, ವಿಜ್ರಂಭಣೆಯಿಂದ ಮೂರು ದಿನಗಳವರೆಗೆ ನಡೆಯಲಿದ್ದು, ಗಚ್ಚಿನ ಮಠ ಅನಾದಿ ಕಾಲದಿಂದಲೂ ಕೂಡ ನಾಡಿನಲ್ಲಿ ವೈಚಾರಿಕತೆ ಬಿತ್ತುತ್ತ ಬಂದಿದ್ದು, ಗಚ್ಚಿನ ಮಠದ ಲಿಂ.ಮುರುಘೇಂದ್ರ ಶಿವಯೋಗಿಗಳು 12 ನೇ ಶತಮಾನದ ಶಿವರಶರಣ ದಾರಿಯಲ್ಲಿಯೇ ನಡೆದುಕೊಂಡರಷ್ಟೇ ಅಲ್ಲ ಹರ್ಡೇಕರ ಮಂಜಪ್ಪ ನವರಿಗೆ ಲಿಂಗ ದೀಕ್ಷೆ ಕೊಡುವ ಧೈರ್ಯ ತೋರಿದ ಮಹನೀಯರು ಎಂದು ಹೇಳಿದರು.  

ಮಾರ್ಚ 6ರಂದು ಸಂಜೆ 6ಗಂಟೆಗೆ ನಡೆಯಲಿರುವ ಜೀವನ ದರ್ಶನ ಪ್ರವಚನ ಸಮಾರೋಪ ಕಾರ್ಯಕ್ರಮದ ಸಾನಿಧ್ಯವನ್ನು ನದಿ ಇಂಗಳಗಾಂವದ ಸಿದ್ಧಲಿಂಗ ಸ್ವಾಮೀಜಿ, ಕಂಪ್ಲಿಯ ಅಭಿನವ ಪ್ರಭು ಸ್ವಾಮಿಗಳು, ಚಿಗರ ಹಳ್ಳಿಯ ಸಿದ್ಧಬಸವ ಕಬೀರ ಸ್ವಾಮೀಜಿ, ಹೊಳೆ ಇಟಗಿಯ ಮಡಿವಾಳೇಶ್ವರ ಸ್ವಾಮೀಜಿ ವಹಿಸುವರು, ಮುಖ್ಯ ಅತಿಥಿಗಳಾಗಿ ಶಾಸಕ ಜಗದೀಶ ಗುಡಗುಂಟಿಮಠ, ಮಾಜಿ ಶಾಸಕ ಶಹಜಹಾನ ಡೊಂಗರಗಾಂವ, ಕಾಂಗ್ರೆಸ್ ಮುಖಂಡರಾದ ಎಸ್‌.ಕೆ.ಬುಟಾಳಿ, ರಮೇಶ ಸಿಂದಗಿ, ಖ್ಯಾತ ವೈದ್ಯ ಡಾ.ಎಮ್‌.ಜಿ.ಹಂಜಿ, ಬಿಜೆಪಿ ಮುಖಂಡ ಧರೆಪ್ಪ ಠಕ್ಕಣ್ಣವರ, ಬಣಜವಾಡ ಶಿಕ್ಷಣ ಸಂಸ್ಥೆಯ ಲಕ್ಷ್ಮಣ ಬಣಜವಾಡ, ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯ ಸುರೇಶ ಚಿಕ್ಕಟ್ಟಿ, ಐನಾಪುರ ಪಟ್ಟಣ ಪಂಚಾಯತ ಅಧಿಕಾರಿ ಮಹಾಂತೇಶ ಕೌಲಾಪುರ ಆಗಮಿಸಲಿದ್ದಾರೆ ಎಂದು ಹೇಳಿದರು.  

ಮಾರ್ಚ 7 ರಂದು ನಡೆಯಲಿರುವ ಶರಣ ಸಂಸ್ಕೃತಿ ಉತ್ಸವದ ಉದ್ಘಾಟನೆಯನ್ನು ಬೃಹತ್ ಕೈಗಾರಿಕೆ ಸಚಿವ ಎಮ್‌.ಬಿ.ಪಾಟೀಲ ನೆರವೇರಿಸುವರು, ಸಾನಿಧ್ಯವನ್ನು ಶ್ರೀ ಕ್ಷೇತ್ರ ನಾಲವಾರದ ಡಾ.ಸಿದ್ಧ ತೋಟೇಂದ್ರ ಶಿವಾಚಾರ್ಯ ಸ್ವಾಮೀಜಿ, ಅಧ್ಯಕ್ಷತೆಯನ್ನು ಶಾಸಕ ಲಕ್ಷ್ಮಣ ಸವದಿ  ವಹಿಸುವರು,    

ಮುಖ್ಯ ಅತಿಥಿಗಳಾಗಿ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ, ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ, ಧಾರವಾಡ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಬೆಂಗಳೂರಿನ ಉದ್ಯಮಿ ಎಂ.ಎಂ.ನಾಗರಾಜ, ನ್ಯಾಯವಾದಿ ಕೆ.ಎ.ವಣಜೋಳ, ಪುರಸಭಾ ಸದಸ್ಯ ರಾವಸಾಬ ಐಹೊಳೆ ಆಗಮಿಸುವರು. ಇದೇ ದಿನ ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ ಸಂಭ್ರಮಾಚರಣೆ ಕುರಿತು ಸಾಹಿತಿ ರಂಹಾನ್ ದರ್ಗಾ ಮಾತನಾಡುವರು ಎಂದು ತಿಳಿಸಿದರು.  

ಮಾರ್ಚ 8 ರಂದು ಮುಂಜಾನೆ 7.30 ಕ್ಕೆ ನಡೆಯುವ ಸಹಜ ಶಿವಯೋಗದ ಸಾನಿಧ್ಯವನ್ನು ಇಳಕಲ್ ವಿಜಯ ಮಹಾಂತೇಶ ಮಠದ ಶ್ರೀ ಗುರು ಮಹಾಂತ ಸ್ವಾಮೀಜಿ, ಹಲ್ಯಾಳದ ಶ್ರೀ ಗುರು ಸಿದ್ಧ ಸ್ವಾಮೀಜಿ, ಹೆಬ್ಬಾಳದ ಮಹಾಂತ ರುದ್ರೇಶ ಸ್ವಾಮೀಜಿ, ರಾವಂದೂರದ ಮೋಕ್ಷಪತಿ ಮಹಾಸ್ವಾಮೀಜಿ ವಹಿಸುವರು, ಮುಖ್ಯ ಅತಿಥಿಗಳಾಗಿ ಕೃಷ್ಣಾ ಶುಗರ್ಸ ಅಧ್ಯಕ್ಷ ಪರ​‍್ಪ ಸವದಿ, ಪುರಸಭಾ ಮಾಜಿ ಅಧ್ಯಕ್ಷ ದೀಲೀಪ ಲೋಣಾರೆ, ಸಮಾಜ ಸೇವಕರಾದ ಮಹಾದೇವ ಹೊನ್ನಳ್ಳಿ, ಅಲ್ಲಪ್ಪ ನಿಡೋಣಿ, ಪ್ರಕಾಶ ಮಹಾಜನ, ಶ್ರೀಶೈಲ ಸಂಕ ಆಗಮಿಸುವರು ಎಂದು ತಿಳಿಸಿದರು. ಮುಂಜಾನೆ 9 ಗಂಟೆಗೆ ಪಲ್ಲಕ್ಕಿ ಉತ್ಸವ ಮತ್ತು ವ್ಯಾಸನ ತೋಳ ಮೆರವಣಿಗೆ ನಡೆಯಲಿದೆ ಎಂದರು.  

ಸಂಜೆ 6  ಗಂಟೆಗೆ ನಡೆಯಲಿರುವ ಚಿಂತನ ಗೋಷ್ಟಿಯ ಸಾನಿಧ್ಯವನ್ನು ಧಾರವಾಡ ಮುರುಘಾ ಮಠದ ಶ್ರಿ ಮಲ್ಲಿಕಾರ್ಜುನ ಸ್ವಾಮೀಜಿ, ಅಧ್ಯಕ್ಷತೆಯನ್ನು ಶಾಸಕ ಲಕ್ಷ್ಮಣ ಸವದಿ ವಹಿಸುವರು, ಮುಖ್ಯ ಅತಿಥಿಗಳಾಗಿ ಶಾಸಕಿ ಶಶಿಕಲಾ ಜೊಲ್ಲೆ, ಉದ್ಯಮಿ ವೀರನಗೌಡ ಜಂಗಮಶೆಟ್ಟಿ, ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ, ಶಾಸಕ ರಾಜು ಕಾಗೆ, ಉದ್ಯಮಿ ಪವನ ವಶಿಷ್ಠ ಆಗಮಿಸುವರು. ಗದಗ ಎಸ್‌.ಪಿ ಬಾಬಾಸಾಹೇಬ ನೇಮಗೌಡ ಇವರನ್ನು ಸನ್ಮಾನಿಸಲಾಗುವುದು ಮತ್ತು ಗುರುದೇವಿ ಹುಲೆಪ್ಪನವರಮಠ ಚಿಂತನ ನಡೆಸಿಕೊಡುವರು ಎಂದು ತಿಳಿಸಿದರು ಇದೇ ದಿನ ರಾತ್ರಿ 10 ಗಂಟೆಗೆ ಶ್ರೀ ಶಿವಬಸವ ಸ್ವಾಮೀಜಿ ನೇತೃತ್ವದಲ್ಲಿ ಸಂಗೀತ ಕಾರ್ಯಕ್ರಮ ಜರುಗಲಿದೆ.  

ಮಾರ್ಚ 9 ರಂದು ಸಂಜೆ 6 ಗಂಟೆಗೆ ಸಿದ್ಧಲಿಂಗ ಅಪ್ಪಗಳ ಸ್ಮರಣೋತ್ಸವದ ಸಾನಿಧ್ಯವನ್ನು ಜಿಡಗಾ, ಮುಗಳಖೋಡ ಮಠದ ಷಡಕ್ಷರಿ ಮುರುಘರಾಜೇಂದ್ರ ಸ್ವಾಮೀಜಿ, ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ, ಶೇಗುಣಸಿಯ ಡಾ.ಮಹಾಂತ ಪ್ರಭು ಸ್ವಾಮೀಜಿ, ಶೆಟ್ಟರ ಮಠದ ಮರುಳ ಸಿದ್ಧ ಸ್ವಾಮೀಜಿ, ತೆಲಸಂಗದ ವೀರೇಶ ದೇವರು ವಹಿಸುವರು, ಮುಖ್ಯ ಅತಿಥಿಗಳಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಶಾಸಕ ಆಸೀಫ ಸೇಠ, ಮಾಜಿ ಶಾಸಕ ಮಹೇಶ ಕುಮಠಳ್ಳಿ, ಉದ್ಯಮಿ ವಿನಾಯಕ ಪಾಟೀಲ್, ಕಾಂಗ್ರೆಸ್ ಧುರೀಣರಾದ ಚಿದಾನಂದ ಸವದಿ, ದಿಗ್ವಿಜಯ ಪವಾರ ದೇಸಾಯಿ ಆಗಮಿಸುವರು ಎಂದು ತಿಳಿಸಿದರು.  

ತೆಲಸಂಗದ ವಿರೇಶ ದೇವರು, ಸಾಹಿತಿ ಎಸ್‌.ಬಿ.ಉತ್ನಾಳ, ಧುರೀಣರಾದ ರಾಜು ಬಿಳ್ಳೂರ, ಶೇಖರ ಕೋಲಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ