ಗೋಕಾಕ್

ಮಲ್ಲಾಪೂರ ಪಿ.ಜಿ ಪ.ಪಂ.ಗೆ ಅವಿರೋಧ ಆಯ್ಕೆ

ಮಲ್ಲಾಪೂರ ಪಿ.ಜಿ ಪ.ಪಂ.ಗೆ ಅವಿರೋಧ ಆಯ್ಕೆ

ಘಟಪ್ರಭಾ ನವೆಂಬರ್ 04: ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿಯ 2ನೇ ಅವಧಿಗೆ ಮಂಗಳವಾರ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮಾಲನ ದೇವಪ್ಪ ದಳವಾಯಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಈರಗೌಡ ಮನೋಹರ ಕಲಕುಟಗಿ ಅವಿರೋಧ ಆಯ್ಕೆಯಾಗಿದ್ದಾರೆ. 

ಅ ವರ್ಗ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ 6ನೇ ವಾರ್ಡಿನ ಸದಸ್ಯೆ ಮಾಲನ ದಳವಾಯಿ ಮತ್ತು ಎಸ್.ಸಿ ವರ್ಗಕ್ಕೆ ಮೀಸಲಿದ್ದ ಉಪಾಧ್ಯಕ್ಷ ಸ್ಥಾನಕ್ಕೆ 16ನೇ ವಾರ್ಡಿನ ಸದಸ್ಯ ಈರಗೌಡ ಮನೋಹರ ಕಲಕುಟಗಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಡಿ.ಜಿ.ಮಹಾಂತ ಘೋಷಿಸಿದರು. 

ಈ ಅವಿರೋಧ ಆಯ್ಕೆ ಸಚಿವ ರಮೇಶ ಜಾರಕಿಹೊಳಿ ಹಾಗೂ ಅಂಬಿರಾವ ಪಾಟೀಲ ಅವರ ಮಾರ್ಗದರ್ಶನದಲ್ಲಿ ನಡೆದಿದ್ದು, ಕಾಂತು ಯತ್ತಿನಮನಿ, ಪಟ್ಟಣದ ಹಿರಿಯರಾದ ಡಿ.ಎಮ್.ದಳವಾಯಿ, ಈಶ್ವರ ಮಟಗಾರ, ಮಡಿವಾಳಪ್ಪಾ ಮುಚಳಂಬಿ, ಕುಮಾರ ಹುಕ್ಕೇರಿ, ಪರಸರಾಮ ಕಲಕುಟಗಿ, ಭದ್ರು ಗಂಡವ್ವಗೋಳ, ಪ.ಪಂ ಸದ್ಯಸರಾದ ಪಾರವ್ವ ಮೇತ್ರಿ, ಸುಜಾತಾ ಪೂಜೇರಿ, ಕಸ್ತೂರಿ ಚೌಕಶಿ, ಲಕ್ಷ್ಮೀ  ತುಕ್ಕಾನಟ್ಟಿ, ಶ್ರೀದೇವಿ ಕೂಗನೂರ, ಸರಸ್ವತಿ ಕುಲಗೋಡ, ಮಾರುತಿ ಹುಕ್ಕೇರಿ, ಗಂಗಾಧರ ಬಡಕುಂದ್ರಿ, ಪ್ರವೀಣ ಮಟಗಾರ, ರಾಮಪ್ಪ ನಾಯಿಕ, ಮಲ್ಲಪ್ಪ ಕೋಳಿ, ವಿಕ್ರಮ ದಳವಾಯಿ, ಸಲೀಮ ಕಬ್ಬೂರ, ಇಬ್ರಾಹಿಂ ಬಟಕುರ್ಕಿ, ನಾಗರಾಜ ಚಚಡಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಬಿ.ಪಾಟೀಲ ಹಾಗೂ ಸಿಬ್ಬಂದಿ ವರ್ಗ ಸೇರಿದಂತೆ ಅನೇಕರು ಇದ್ದರು

ಸುದ್ದಿ ಓದಿ