ದೀಕ್ಷಾ ಭೂಮಿ ಯಾತ್ರೆಗೆ ಎಮ್ಎಲ್ಸಿ ಡಾ. ತಳವಾರ ಚಾಲನೆ
ಬೆಳಗಾವಿ 03: ಸಮಾಜ ಕಲ್ಯಾಣ ಇಲಾಖೆ ಬೆಳಗಾವಿ ಜಿಲ್ಲೆಯ ವತಿಯಿಂದ ಬೆಳಗಾವಿ ನಗರದಲ್ಲಿ ದಿ. 03ರಂದು ನಾಗಪುರದಲ್ಲಿನ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ದೀಕ್ಷಾ ಭೂಮಿ ಯಾತ್ರೆಗೆ ಚಾಲನೆ ನೀಡಿ, ಯಾತ್ರೆಗೆ ಹೊರಟ 260 ಜನ ಯಾತ್ರಾರ್ಥಿಗಳಿಗೆ ಶುಭಕೋರಿ ಮಾತನಾಡಿದ ವಿಧಾನ ಪರಿಷತ್ ಸದಸ್ಯರಾದ ಡಾ. ತಳವಾರ ಸಾಬಣ್ಣರವರು. ಡಾ. ಬಾಬಾಸಾಹೇಬ ಅಂಬೇಡ್ಕರ ಅವರು ಬೌದ್ಧ ಧರ್ಮ ಸ್ವೀಕಾರ ಮಾಡಿದ ಪುಣ್ಯ ಕ್ಷೇತ್ರ ನಾಗಪುರ ಅದೊಂದು ಶ್ರದ್ದಾ ಕೇಂದ್ರವೆಂದು ಅವರು ಹೇಳಿದರು.
ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ಈ ದೀಕ್ಷಾ ಭೂಮಿ ಯಾತ್ರೆಗೆ ಹೊರಟ ಎಲ್ಲರು ಅಲ್ಲಿಂದ ಸ್ಪೂರ್ತಿ ಪಡೆದು ಅಂಬೇಡ್ಕರ್ ಅವರು ತೋರಿಸಿಕೊಟ್ಟ ಶ್ರೇಷ್ಠ ಮಾರ್ಗದಲ್ಲಿ ಸಾಗಬೇಕು. ಅಂಬೇಡ್ಕರ್ ಅವರ ಜೀವನದಲ್ಲಿ ಅವರು ಮಾಡಿದ ಸಂಘರ್ಷ ಅಪಾರವಾಗಿದೆ. ಅವರ ಅಪರಿಮಿತ ಜ್ಞಾನಕ್ಕೆ ಅವರೇ ಸಾಟಿ. ಅವರ ಮಾರ್ಗದಲ್ಲಿ ನಾವೆಲ್ಲರೂ ಸಾಗಿ ಜೀವನ ಸಾರ್ಥಕಗೊಳಿಸಲು ಈ ಯಾತ್ರೆ ನಮ್ಮೆಲ್ಲರಿಗೂ ಸ್ಪೂರ್ತಿಯಾಗಲಿ. ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ವಿಚಾರಧಾರೆಗಳು ವಿಶ್ವದ ಎಲ್ಲ ಮನೆ ಮತ್ತು ಎಲ್ಲ ಮನಗಳನ್ನೂ ತಲುಪುವಂತಾಗಲಿ ಎಂದು ತಿಳಿಸಿದರು.